US Consulate: ಬೆಂಗಳೂರಲ್ಲಿ ಜ.17ಕ್ಕೆ ಅಮೆರಿಕ ದೂತಾವಾಸ ಕಚೇರಿ ಆರಂಭ
ವಿದೇಶಾಂಗ ಸಚಿವ ಜೈ ಶಂಕರ್‌ಗೆ ಮೈಸೂರು ಪಾಕ್ ನೀಡಿ ಧನ್ಯವಾದ ಅರ್ಪಿಸಿದ ಸಂಸದ ತೇಜಸ್ವಿ ಸೂರ್ಯ: -ವಿಡಿಯೋ ನೋಡಿ
Team Udayavani, Jan 15, 2025, 11:17 PM IST
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ (ಕಾನ್ಸುಲೇಟ್) ಕಚೇರಿ ಶುರುವಾಗಬೇಕು ಎಂಬ ಬಹುಕಾಲದ ಬೇಡಿಕೆ ಕೊನೆಗೂ ಈಡೇರಿದೆ. ಜ.17ರಂದು ಕಚೇರಿ ಆರಂಭವಾಗುವ ಬಗ್ಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳುವ ಜೊತೆಗೆ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಶುಭಾಶಯವನ್ನೂ ಕೋರಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕದ ದೂತಾವಾಸ ಕಚೇರಿ ಆರಂಭಿಸಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ದಿಲ್ಲಿಯ ವಿದೇಶಾಂಗ ಸಚಿವಾಲಯದಲ್ಲಿ ಜೈ ಶಂಕರ್ ಅವರನ್ನು ಭೇಟಿಯಾಗಿ ಧನ್ಯವಾದಗಳ ಸಲ್ಲಿಸಿ ರಾಜ್ಯದ ಹೆಮ್ಮೆಯ ಸಿಹಿತಿಂಡಿಯಾದ “ಮೈಸೂರು ಪಾಕ್ “ನೀಡಿದರು. ಈ ವೇಳೆ ವಿದೇಶಾಂಗ ಸಚಿವ ಜೈ ಶಂಕರ್ ಮಾತನಾಡಿ ವೈಯಕ್ತಿಕವಾಗಿ ಬೆಂಗಳೂರು ಹಾಗೂ ಅಲ್ಲಿನ ಜನರೊಂದಿಗೆ ನಾನು ವಿಶೇಷ ಭಾವನೆಗಳ ಹೊಂದಿದ್ದೇನೆ. ಅಮೆರಿಕ ಕಾನ್ಸಲೇಟ್ ಆರಂಭಿಸುವ ಬಗ್ಗೆ ಉತ್ಸುಕನಾಗಿದ್ದೆ. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ. ಈ ಸಂದರ್ಭದಲ್ಲಿ ಕಾನ್ಸುಲೇಟ್ ಬಗೆಗಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಲಿದ್ದೇನೆ. ಇದೊಂದು ಪ್ರಮುಖ ಮೈಲುಗಲ್ಲು, ಬೆಂಗಳೂರಿಗೆ ಅರ್ಹವಾಗಿಯೇ ಈ ಕಾನ್ಸುಲೇಟ್ ಲಭ್ಯವಾಗಿದೆ ಎಂದು ಹೇಳಿದರು.
ಖಾಸಗಿ ಹೋಟೆಲಿನಲ್ಲಿ ಕಚೇರಿ ತಾತ್ಕಾಲಿಕವಾಗಿ ಆರಂಭ:
ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಚೇರಿ ಶುರುವಾಗಲಿದೆ. ಇದರಿಂದಾಗಿ ವೀಸಾ ಸಂದರ್ಶನ, ಅನುಮೋದನೆ ಸೇರಿದಂತೆ ಪ್ರಮುಖ ವಿಚಾರಗಳಿಗೆ ಹೈದರಾಬಾದ್ ಅಥವಾ ಚೆನ್ನೈಗೆ ಕರ್ನಾಟಕದವರು ಪ್ರಯಾಣಿಸುವ ಅನಿವಾರ್ಯತೆ ತಪ್ಪಲಿದೆ. ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯು.ಮಾರಿಯೆಟ್ ಹೋಟೆಲ್‌ನಲ್ಲಿ ದೂತಾವಾಸ ಕಚೇರಿ ತಾತ್ಕಾಲಿಕ ನೆಲೆಯಲ್ಲಿ ಆರಂಭವಾಗಲಿದೆ. ಅಲ್ಲಿಂದಲೇ ಅಮೆರಿಕದ ವಾಣಿಜ್ಯ ಸೇವೆಗಳ ವಿಭಾಗ (ಯುಎಸ್‌ಸಿಎಸ್) ಕಾರ್ಯನಿರ್ವಹಿಸುತ್ತಿದೆ. ಉದ್ಯಾನನಗರಿಯ ಯಾವ ಭಾಗದಲ್ಲಿ ಕಚೇರಿ ಆರಂಭವಾಗಲಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
My dear Bengaluru,
It’s official. The US Consulate is opening on January 17th.
It’s been made possible only and only because of PM @narendramodi and EAM @DrSJaishankar’s efforts.
What better way to thank our EAM than with our own Mysuru Pak! pic.twitter.com/uo85y2vsfl
— Tejasvi Surya (@Tejasvi_Surya) January 15, 2025
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Discomfort: ಬಿಜೆಪಿ ತೊರೆಯುವರೇ ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ?
ನಗರಸಭೆ ಮತದಾನಕ್ಕೆ ಗೈರು, ಅಡ್ಡ ಮತದಾನ: ನಾಲ್ವರು ಕಾಂಗ್ರೆಸ್ ಸದಸ್ಯರ ಸದಸ್ಯತ್ವ ಅನರ್ಹ
Dharwad: ಕಟಾವಿವೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
ಗುಜರಾತ್‌ಗೆ ತಲುಪಿಸಬೇಕಿದ್ದ ಕೋಟ್ಯಾಂತರ ರೂಪಾಯಿ ಮೌಲ್ಯದ ಅಡಿಕೆಯ ವಂಚಿಸಿದ ಖದೀಮರ ಸೆರೆ
Bidar: ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣ: ಐವರು ಮತ್ತೆ ಮೂರು ದಿನ ಸಿಐಡಿ ಕಸ್ಟಡಿಗೆ
MUST WATCH
ಹೊಸ ಸೇರ್ಪಡೆ
Hubballi: ವರೂರಿನ ನವಗ್ರಹ ತೀರ್ಥಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ವಿಧ್ಯುಕ್ತ ಚಾಲನೆ
Chikkaballapura: “ಈಶ’ದಲ್ಲಿ 54 ಅಡಿ ಎತ್ತರದ ತ್ರಿಶೂಲ ಲೋಕಾರ್ಪಣೆ
Chamarajpete: ಕೆಚ್ಚಲು ಕೊಯ್ದ ಕೇಸ್; 3 ಲಕ್ಷ ರೂ.ಮೌಲ್ಯದ 3 ಹಸು ಕೊಡಿಸಿದ ಸಚಿವ ಜಮೀರ್
Udupi: ಗೀತಾರ್ಥ ಚಿಂತನೆ-157: ಸೂಕ್ಷ್ಮ ಜಗತ್ತೂ, ಸ್ಥೂಲ ಜಗತ್ತೂ ಅನಂತ
Manjeshwar: ಟಿಪ್ಪರ್‌ನೊಳಗೆ ಯುವಕನ ನಿಗೂಢ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.