ಚೀನ-ಅಮೆರಿಕ ಸಂಘರ್ಷ ಹೊಸ ಮಜಲಿಗೆ
ಕೋವಿಡ್-19 ನಡುವೆಯೂ ಜಲಾಧಿಪತ್ಯಕ್ಕೆ ಕಮ್ಯುನಿಸ್ಟ್ ದೇಶ ಪ್ರಯತ್ನ
Team Udayavani, Apr 25, 2020, 6:45 AM IST
ಹೊಸದಿಲ್ಲಿ: ಕಮ್ಯುನಿಸ್ಟ್ ರಾಷ್ಟ್ರ ಚೀನ ತನ್ನ ಸಲ್ಲದ ಉಪದ್ವ್ಯಾಪ ಬಿಡುತ್ತಿಲ್ಲ. ದಕ್ಷಿಣ ಚೀನ ಸಮುದ್ರದಲ್ಲಿ ಆಧಿಪತ್ಯ ಸಾಧಿಸುವ ಪ್ರಯತ್ನ ಮುಂದು ವರಿಸುತ್ತಿದೆ. ಈ ಮಧ್ಯೆ ಅಮೆರಿಕದ ಯುದ್ಧನೌಕೆಯೊಂದು ಸೂಕ್ಷ್ಮ ಪ್ರದೇಶವಾಗಿ ರುವ ತೈವಾನ್ ಜಲಸಂಧಿಯ ಮೂಲಕ ಪ್ರಯಾಣ ಬೆಳೆಸಿದ್ದು, ಚೀನ-ಅಮೆರಿಕ ನಡುವಿನ ಮತ್ತೂಂದು ಸಂಘರ್ಷಕ್ಕೆ ಹಾದಿ ಮಾಡಿಕೊಟ್ಟಿದೆ.
ತನ್ನ ಸಮರ ನೌಕೆಯೊಂದು ಈ ತಿಂಗಳಲ್ಲಿ ಎರಡನೇ ಬಾರಿಗೆ ತೈವಾನ್ ಜಲ ಸಂಧಿಯ ಮೂಲಕ ಪ್ರಯಾಣಿಸಿದೆ ಎಂದು ಅಮೆರಿಕದ ಸೇನೆ ಶುಕ್ರವಾರ ತಿಳಿಸಿದೆ. “ಕೋವಿಡ್-19 ಲಾಭ ಪಡೆದುಕೊಂಡು ದಕ್ಷಿಣ ಚೀನ ಸಮುದ್ರದಲ್ಲಿ ತನ್ನ ಆಧಿಪತ್ಯ ಸಾಧಿಸಲು ಚೀನ ಮುಂದಾಗುತ್ತಿದೆ. ಕಡಲಾಚೆಯ ತೈಲ ಮತ್ತು ಅನಿಲ ಯೋಜನೆಗಳನ್ನು ಅಭಿವೃದ್ಧಿಪಡಿಸಲು ಕೂಡ ಯೋಜಿಸುತ್ತಿದೆ’ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಆರೋಪಿಸಿದ ಕೆಲವೇ ತಾಸುಗಳ ಅನಂತರ ಅಮೆರಿಕ ಸೈನ್ಯದ ಈ ಹೇಳಿಕೆ ಹೊರಬಿದ್ದಿದೆ.
ಆಧಿಪತ್ಯಕ್ಕೆ ಸತತ ಯತ್ನ
ದಕ್ಷಿಣ ಚೀನ ಸಮುದ್ರದ ಬಹುಭಾಗ ಮತ್ತು ಅಲ್ಲಿನ ದ್ವೀಪರಾಷ್ಟ್ರಗಳು ತನ್ನವು ಎಂದು ಚೀನ ಪ್ರತಿಪಾದಿಸುತ್ತಿದೆ. ಈ ತಿಂಗಳ ಆರಂಭದಲ್ಲಿ ಆಡಳಿತಾತ್ಮಕ ಅನುಕೂಲಕ್ಕಾಗಿ ಇಲ್ಲಿ ಎರಡು ಜಿಲ್ಲೆಗಳನ್ನು ಸ್ಥಾಪಿಸಿದ್ದಾಗಿ ಚೀನ ಘೋಷಿಸಿತ್ತು. ಕಳೆದ ವಾರ ತನ್ನ ನಿಯಂತ್ರಿತ ಪ್ರದೇಶಗಳ ವ್ಯಾಪ್ತಿಯೊಳಗೆ ಚೀನದ ಕರಾವಳಿ ಕಾವಲು ಪಡೆಯ ನಾಲ್ಕು ಹಡಗುಗಳು 90 ನಿಮಿಷಗಳ ಕಾಲ ಒಳನುಸುಳಿದ್ದಕ್ಕಾಗಿ ಜಪಾನ್ ಎಚ್ಚರಿಕೆ ನೀಡಿತ್ತು. ಎ.16ರಂದು ಚೀನದ ಕಣ್ಗಾವಲು ನೌಕೆಯೊಂದು ತನ್ನ ನಿಯಂತ್ರಿತ ಪ್ರದೇಶದೊಳಕ್ಕೆ ನುಸುಳಿದ್ದಕ್ಕಾಗಿ ವಿಯೆಟ್ನಾಂ ಪ್ರತಿಭಟಿಸಿತ್ತು.
ಕೆಂಪು ದೇಶದ ಈ ದುಸ್ಸಾಹಸಗಳು ಭಾರತಕ್ಕೂ ಸಮಸ್ಯೆ ತಂದೊಡ್ಡಿವೆ. ಶೇ.55ರಷ್ಟು ಭಾರತೀಯ ಸರಕು ಸಾಗಣೆ ಹಡಗುಗಳು ಈ ಜಲಮಾರ್ಗದ ಮೂಲಕವೇ ಸಾಗುತ್ತವೆ. ಅಲ್ಲದೆ, ದೇಶದ ತೈಲ ಉತ್ಪಾದಕ ಒಎನ್‌ಜಿಸಿ ವಿದೇಶಿ ನಿಗಮವು ವಿಯೆಟ್ನಾಂ ಸಹಯೋಗದಲ್ಲಿ ಇಲ್ಲಿ ಅನಿಲ ಉತ್ಪಾದನ ಯೋಜನೆಯಲ್ಲಿ ತೊಡಗಿದೆ.
ಅರುಣಾಚಲದಲ್ಲಿ ಸರ್ವಋತು ಸೇತುವೆ ಸಂಚಾರಕ್ಕೆ ಮುಕ್ತ
ಯುದ್ಧ ಸಾಮಗ್ರಿ ಮತ್ತು ಶಸ್ತ್ರಾಸ್ತ್ರಗಳ ಸುಲಭ ಸಾಗಣೆಗೆ ಅನುಕೂಲವಾಗುವಂತೆ ಎಲ್ಲ ಋತುಗಳಲ್ಲೂ ಸಂಚರಿಸ ಬಹುದಾದ, 40 ಟನ್‌ಗಳಷ್ಟು ಭಾರ ಹೊರುವ ಸಾಮರ್ಥ್ಯವುಳ್ಳ ಸೇತುವೆಯೊಂದನ್ನು ಅರುಣಾಚಲ ಪ್ರದೇಶದ ಡೋಕ್ಲಾಮ್ ವ್ಯಾಪ್ತಿಯಲ್ಲಿ ಸಂಚಾರಕ್ಕೆ ಮುಕ್ತ ಗೊಳಿಸಲಾಗಿದೆ. ಇದು ಭಾರತ ಮತ್ತು ಚೀನ ನಡುವೆ ಮತ್ತೂಂದು ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ.
2017ರಲ್ಲಿ ಸುಮಾರು ಒಂದು ತಿಂಗಳ ಕಾಲ ಭಾರತ ಮತ್ತು ಚೀನ ಸೈನಿಕರ ನಡುವಿನ ಸಂಘರ್ಷಕ್ಕೆ ಕಾರಣವಾಗಿದ್ದ ಡೋಕ್ಲಾಮ್ ವ್ಯಾಪ್ತಿಯಲ್ಲಿಯೇ ಈ ಸೇತುವೆ ಉದ್ಘಾಟನೆಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.