UV Fusion: ಮನಕಲಕುವ ಸಿನಿಮಾ Departure…

ಕಥಾನಾಯಕ ಟೋಕಿಯೊದ ಒಂದು ಸಂಗೀತ ಬ್ಯಾಂಡ್‌ ನಲ್ಲಿ ಸಂಗೀತಗಾರನಾಗಿರುತ್ತಾನೆ

Team Udayavani, Jul 15, 2024, 12:11 PM IST

UV Fusion: ಮನಕಲಕುವ ಸಿನಿಮಾ Departure…

ಬಹಳ ಮನಸ್ಸಿಗೆ ತಟ್ಟುವಂಥ ಸಿನಿಮಾ. ಜಪಾನಿ ಭಾಷೆಯದ್ದು. 2008ರಲ್ಲಿ ನಿರ್ಮಾಣವಾದ ಚಿತ್ರ. ಯೋಜಿರೋ ತಕಿತ ಇದರ ನಿರ್ದೇಶಕ. ಅತ್ಯಂತ ಸರಳ ಎನ್ನಿಸುವ ಕಥೆಯ ಎಳೆಯನ್ನು ಹಿಡಿದು ಬದುಕಿನ ಕಥೆಯನ್ನು ಹೇಳುವ ನಿರ್ದೇಶಕ, ಎಲ್ಲಿಯೂ ಅದನ್ನು ಹಿಂಜಿ ಎಳೆಯುವು ದಿಲ್ಲ.‌

ನೂಲಿನ ಎಳೆಯನ್ನು ಹೇಗೆ ನಾಜೂಕಾಗಿ ನಿರ್ವಹಿಸುತ್ತೇವೆಯೋ ಅದೇ ತೆರನಾಗಿ ನಿರ್ದೇಶಕ ಈ ಸಿನಿಮಾವನ್ನೂ ನಿರ್ವಹಿಸಿದ್ದಾನೆ. ಅದಕ್ಕೆ ಒಪ್ಪುವ ಸಂಗೀತವೂ ಪ್ರೇಕ್ಷಕನಲ್ಲಿ ಹೊರ ಹೊಮ್ಮುವ ಭಾವನೆಗಳನ್ನು ನಯವಾಗಿ ನಿರ್ವಹಿಸುತ್ತದೆ.

ಕಥೆಯ ಎಳೆ ಇಷ್ಟೇ. ಕಥಾನಾಯಕ ಟೋಕಿಯೊದ ಒಂದು ಸಂಗೀತ ಬ್ಯಾಂಡ್‌ ನಲ್ಲಿ ಸಂಗೀತಗಾರನಾಗಿರುತ್ತಾನೆ. ಅದು ಅವನ
ವೃತ್ತಿ-ಪ್ರವೃತ್ತಿ. ತನ್ನ ಬದುಕಿನ ಭಾಗವಾಗಿ ಸಂಗೀತವನ್ನು ಸ್ವೀಕರಿಸಲು ಒಂದು ಸಂಗೀತ ಉಪಕರಣವನ್ನು ಕೊಳ್ಳುತ್ತಾನೆ. ಅವನ
ಸಂಭ್ರಮ ಹೇಳತೀರದು. ಇದಾದ ಮರು ದಿನ ಆಘಾತವೆಂಬಂತೆ ಅವನಿದ್ದ ಬ್ಯಾಂಡ್‌ ಮುಚ್ಚಲ್ಪಡುತ್ತದೆ. ಅಂದರೆ ಅಂದಿನಿಂದ ಅವನಿಗೆ ಕೆಲಸವಿಲ್ಲ. ಜತೆಗೆ ಪ್ರವೃತ್ತಿಗೂ ಖೋತಾ.

ವಿಧಿಯಿಲ್ಲದೇ ಕಥಾನಾಯಕ ತನ್ನ ಪತ್ನಿಯೊಂದಿಗೆ ಟೋಕಿಯೊ ಮಹಾನಗರದಿಂದ ತನ್ನ ಊರಾದ ಹಳ್ಳಿಗೆ ವಾಪಸಾಗುತ್ತಾನೆ. ಸಣ್ಣ ಪಟ್ಟಣ. ತನ್ನ ಹಿರಿಯರ ಮನೆಯಲ್ಲಿದ್ದರೂ ಉದ್ಯೋಗವೆಂದು ಬೇಕಲ್ಲ. ಅದರ ಹುಡುಕಾಟದಲ್ಲಿರುತ್ತಾನೆ. ಈ ಮಧ್ಯೆ ಮಾಧ್ಯಮದಲ್ಲಿ  ಒಂದು ಜಾಹೀರಾತು ಬರುತ್ತದೆ. “ಪ್ರಯಾಣಕ್ಕೆ ಸಹಕರಿಸುವವರು ಬೇಕು’ ಎಂಬ ಜಾಹೀರಾತು ಕಂಡು ಕಥಾನಾಯಕ ಯಾವುದೋ ಟ್ರಾವೆಲ್‌ ಏಜೆನ್ಸಿಯಲ್ಲಿ ಕೆಲಸವಿರಬೇಕು ಎಂದು ಕೊಳ್ಳುತ್ತಾನೆ. ಹಾಗೆಯೇ ಅರ್ಜಿ ಹಾಕುತ್ತಾನೆ.

ಕೆಲಸಕ್ಕೆ ಆಯ್ಕೆಯಾದ ಬಳಿಕ ಮೊದಲ ದಿನದ ಕಾರ್ಯ ಕಂಡಾಗ ಆಘಾತಕ್ಕೊಳಗಾಗುತ್ತಾನೆ. ಅವನು ಸೇರಿಕೊಂಡ ಕಂಪೆನಿ ಲೌಕಿಕ ಜಗತ್ತಿನ ಟ್ರಾವೆಲ್‌ ಏಜೆನ್ಸಿಯ ಬದಲು ಮರಣ ಅನಂತರದ ಪ್ರಯಾಣಕ್ಕೆ ಸಜ್ಜುಗೊಳಿಸುವ ಏಜೆನ್ಸಿಯದ್ದಾಗಿರುತ್ತದೆ.

ಅನಿವಾರ್ಯತೆಯಿಂದ ಆ ಉದ್ಯೋಗವನ್ನು ಒಪ್ಪಿಕೊಳ್ಳುವ ಕಥಾನಾಯಕ, ತನಗರಿವಿಲ್ಲದೇ ಆ ವೃತ್ತಿಯನ್ನು ಒಳಗೊಳ್ಳತೊಡಗುತ್ತಾನೆ. ಶವವನ್ನು ಶುಚೀಕರಿಸಿ, ಮುಂದಿನ ಪ್ರಯಾಣಕ್ಕೆ ಸಿದ್ಧಪಡಿಸುವುದು ಅವನ ವೃತ್ತಿಯ ಹೊಣೆಗಾರಿಕೆ. ಆದರೆ ಸಮಾಜದಲ್ಲಿ ಆತ ಸಾಮಾಜಿಕ ಬಹಿಷ್ಕಾರವನ್ನೂ ಎದುರಿಸುವ ಸ್ಥಿತಿ ನಿರ್ಮಾಣವಾಗುತ್ತದೆ.

ಇದನ್ನೆಲ್ಲ ಕಂಡು ಪತ್ನಿ ಉದ್ಯೋಗ ಬದಲಿಸುವಂತೆ ತಿಳಿಸುತ್ತಾಳೆ. ಆದರೂ ಆತ ತನ್ನ ವೃತ್ತಿಯನ್ನು ಮುಂದುವರಿಸುತ್ತಾನೆ. ಸಿನಿಮಾದ ಒಂದು ತಿರುವಿನಲ್ಲಿ ತನ್ನ ತಂದೆಯ ಶವವನ್ನೇ ನಿರ್ವಹಿಸಬೇಕಾದ ಸಂದರ್ಭ ಎದುರಾಗುತ್ತದೆ. ತನ್ನನ್ನು ಹೊರಹಾಕಿದ ಅಪ್ಪನ ಶವವನ್ನು ನಿರ್ವಹಿಸಬೇಕೇ ಬೇಡವೇ ಎಂಬ ಗೊಂದಲದಲ್ಲಿ ತೊಡಗುವ ಕಥಾನಾಯಕನಿಗೆ ಬಾಲ್ಯ, ಅಪ್ಪನ ಸಂಬಂಧ ಎಲ್ಲವೂ ಕಣ್ಣೆದುರು ಬಂದು ಮರು ವ್ಯಾಖ್ಯಾನಗೊಳಿಸಿಕೊಳ್ಳುತ್ತಾನೆ.

ತೀರಾ ಭಾವುಕ ಮಯವಾದ ಚಲನಚಿತ್ರ. ಜಪಾನಿನ ಸಂಸ್ಕೃತಿ, ಸಮಾಜದಲ್ಲಿನ ಸ್ಥಿತಿಗತಿ ಎಲ್ಲವನ್ನೂ ಸೂಕ್ಷ್ಮವಾಗಿ ಅವಲೋಕಿಸುವಂಥ ಚಿತ್ರವಿದು. ಕಥಾ ನಾಯಕನಾಗಿ ಮಸಾಹಿರೊ ಮೊತೊಕಿ ಸಮರ್ಥವಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ. ಮನುಷ್ಯ ಸಂಬಂಧಗಳ ಬಗ್ಗೆ ಗಟ್ಟಿಯಾದ ಅನುಭವ ನೀಡುವಂಥ ಚಿತ್ರಕ್ಕೆ 40 ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ. ಜಪಾನ್‌ ಅಕಾಡೆಮಿ ಪ್ರಶಸ್ತಿಯಲ್ಲಿ ಹಲವು ವಿಭಾಗಗಳಲ್ಲಿ ಪುರಸ್ಕಾರ ಗಳಿಸಿದೆ.

*ಅಪ್ರಮೇಯ

ಟಾಪ್ ನ್ಯೂಸ್

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Forest

2 ವರ್ಷಗಳಲ್ಲಿ ಕರ್ನಾಟಕದಲ್ಲಿ 459 ಚ.ಕಿ.ಮೀ. ಅರಣ್ಯ ನಾಶ

congress

Ambedkar; ಅವಮಾನ ಖಂಡಿಸಿ ಕಾಂಗ್ರೆಸ್‌ ಆಂದೋಲನ

1-sara

Hindi ಹೇರಿದರೆ ಗೋಕಾಕ್‌ ಮಾದರಿ ಹೋರಾಟ: ಸಾ.ರಾ.ಗೋವಿಂದು

ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

Horoscope: ಈ ರಾಶಿಯವರಿಗಿಂದು ಬರಬೇಕಾದ ಬಾಕಿ ಕೈಸೇರಿದ ಸಮಾಧಾನ

1-vvv

Virtual university ಸ್ಥಾಪಿಸಿ: ಚಿದಾನಂದ ಗೌಡ ಒತ್ತಾಯ..ಏನಿದು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

17-bus

Emotions: ಭಾವನೆಗಳ ಬಸ್‌ ನಿಲ್ದಾಣ

14-uv-fusion

Meditation: ವರ್ಧಿತ ಶೈಕ್ಷಣಿಕ ಕಾರ್ಯಕ್ಷಮತೆಗೆ ಧ್ಯಾನ

12-uv-fusion

Success: ಯಶಸ್ವಿ ಜೀವನಕ್ಕೆ ಸೂತ್ರಗಳು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು

hk-patil

C.T. Ravi ಗೈರು; ಸಾಹಿತ್ಯ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು: ಎಚ್‌.ಕೆ.ಪಾಟೀಲ್‌

6

ಮಮ್ತಾಜ್‌ ಅಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಜಾಮೀನು ವಿಚಾರಣೆ ಅರ್ಜಿ ಮುಂದೂಡಿಕೆ

1-kann

Kannada; ಬಳ್ಳಾರಿಯಲ್ಲಿ 88ನೇ ಕನ್ನಡ ಸಾಹಿತ್ಯ ಸಮ್ಮೇಳನ

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.