UV Fusion: ತಂತ್ರಜ್ಞಾನವೆಂಬುದು ವರವೋ? ಶಾಪವೋ?
ಪರಿಸರದ ಎಲ್ಲ ಸಂಪನ್ಮೂಲಗಳು ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ.
Team Udayavani, Jul 15, 2024, 4:51 PM IST
ಮಾನವನ ಉಗಮ ಉಹಿಸಲಾಗದ್ದು. ಮಂಗನಿಂದ ಶುರುವಾದ ಮನುಷ್ಯನ ಬೆಳವಣಿಗೆ ಇಂದು ಪ್ರಾಣಿಗಳನ್ನೆ ಪಳಗಿಸಬಲ್ಲವನಂತೆ ಬೆಳೆದು ನಿಂತಿದ್ದಾನೆ.ತನ್ನನ್ನು ಯಾರು ಮಿರಿಸಿಲಾಗದಂತೆ ತನ್ನ ಯೋಚನಾ ಶಕ್ತಿಯ ಮೂಲಕ ಅನೇಕ ಸಾಧನಗಳನ್ನು ಕಂಡುಹಿಡಿದು ಉಹಿಸಲಾಗದ ಸಾಧನೆಗಳನ್ನು ಮಾಡುತ್ತಿದ್ದಾನೆ.
ತನ್ನ ಯೋಚನೆಗಳಿಗೆ ಮಿತಿಯಿಲ್ಲವೆಂಬಷ್ಟು ಹೊಸ ತಂತ್ರಜ್ಞಾನಗಳ ನಿರ್ಮಾಣವನ್ನು ಕೈಗೊಂಡಿದ್ದಾನೆ. ಸಂಸ್ಕೃತದ
ಶ್ಲೊಕವೊಂದರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು ಅದರಲ್ಲಿ ಮಾನವ ಯೋಚನೆಗಳು ಸದಾ ಆಸೆಗಳಿಂದ ಕೂಡಿದೆ. ಈ ಆಸೆಗಳು ಬದಲಾಗುತ್ತಿರುವುದರಿಂದ ಇದರ ನಿಯಂತ್ರಣ ಕಠಿಣ. ಮಾನವನ ಆಸೆ ಸಣ್ಣ ಹುಲ್ಲಿನಷ್ಟು ಬೆಳೆದು ಇಂದು ಪರ್ವತದಷ್ಟೆತ್ತರಕ್ಕೆ ಬೆಳೆದು ನಿಂತಿದೆ. ಪ್ರಕೃತಿಯ ಸಹಾಯದಿಂದ ತನ್ನೆಲ್ಲಾ ಆಸೆಗಳ ಪೂರೈಸುವಿಕೆಯನ್ನು ಅವನು ಹೊಂದುತ್ತಿದ್ದಾನೆ.
ಯೋಚನೆಗಳು ಬದಲಾದಾಗೆಲ್ಲಾ ಹೊಸ ಯೋಜನೆಗಳನ್ನು ಕೈಗೊಳ್ಳುತ್ತಿದ್ದಾನೆ. ಪ್ರಕೃತಿಯು ಮಾನವನ ಎಲ್ಲ ಯೋಚನೆಗಳಿಗೆ ಆತನ ಎಲ್ಲ ಆವಿಷ್ಕಾರಗಳಿಗೆ ಪೂರಕವಾಗಿದೆ ಎಂದರೆ ತಪ್ಪಾಗಲಾರದು. ಪ್ರಕೃತಿಯ ಮಡಿಲಿನಲ್ಲಿ ಸಿಗುವ ಎಲ್ಲ ಸಂಪನ್ಮೂಲಗಳನ್ನು ಮನುಷ್ಯನ ತಾಂತ್ರಿಕ ಸಂಶೋಧನೆಗಳಿಗೆ ಪೂರಕವಾಗುವಂತೆ ಬಳಸಿಕೊಳ್ಳುತ್ತಿದ್ದಾನೆ. ಈ ಎಲ್ಲ ಸಂಪನ್ಮೂಲಗಳನ್ನು ಪ್ರಕೃತಿ ನೀಡುತ್ತಾ ಬಂದಿದೆ. ಪ್ರಕೃತಿಯ ಎಲ್ಲ ಸಂಪನ್ಮೂಲಗಳನ್ನು ಬಳಸಿ ತನ್ನ ಮನುಕುಲದ ಉದ್ಧಾರಕ್ಕೆ ಮಾನವ ಕೆಲಸ ಮಾಡುತ್ತಿದ್ದರೂ, ಪ್ರಕೃತಿಗೆ ಮಾತ್ರ ಮಾನವ ದಾನವನಾಗಿ ಕೆಡುಕು ಉಂಟು ಮಾಡುತ್ತಿದ್ದಾನೆ.
ಮಾನವ ತನ್ನ ಅತಿಯಾದ ತಂತ್ರಜ್ಞಾನದ ಆವಿಷ್ಕಾರ ನಿಸರ್ಗಕ್ಕೆ ಕುತ್ತು ತರಬಹುದೆಂದು ಆಲೋಚಿಸದೆ, ವಾಹನಗಳ ಹೆಚ್ಚಿನ ಉಪಯೋಗ ಆಗಿರಬಹುದು, ಕಾರ್ಖಾನೆಯ ನಿತ್ಯ ಕೆಲಸಗಳಾಗಿರಬಹುದು, ಗೃಹೋಪಯೋಗಿ ವಸ್ತುಗಳ ವಿಪರೀತ ಬಳಕೆ, ವಿದ್ಯುತ್ ಉಪಕರಣಗಳ ಉಪಯೋಗ ಮತ್ತಿತರೆ ಮಾಲಿನ್ಯ ವಸ್ತುಗಳಿಂದಾಗಿ ಮನುಷ್ಯ ಪ್ರಕೃತಿಯ ಸಮತೋಲನವನ್ನು ಅಸಮತೋಲನದೆಡೆಗೆ ಕರೆದೊಯ್ಯುತ್ತಿದ್ದಾನೆ.
ಪ್ರಕೃತಿಯ ಎಲ್ಲ ನೈಸರ್ಗಿಕ ಅಂಶಗಳನ್ನು ಹಾಳು ಮಾಡುತ್ತಿರುವ ಮಾನವ ಹೇಗೆ ತನಗೆಗೆ ತಲೆ,ಹೃದಯ,ನರ ಕೋಶ ಮತ್ತು ದೇಹದ ಅಂಗಾಂಗಗಳು ಮುಖ್ಯವೋ ಹಾಗೆ ಪ್ರಕೃತಿಗೂ ಅದರ ನೆಲ, ಜಲ, ಮರ ಕಿಡಗಳು,ಗಾಳಿ ಮತ್ತು ಎಲ್ಲ ನೈಸರ್ಗಿಕ ಸಂಪನ್ಮೂಲಗಳು ಅತ್ಯಗತ್ಯವೆಂದು ಯೋಚಿಸಲು ವಿಫಲನಾಗಿದ್ದಾನೆ.
ಇದು ಮಾನವನ ಅಜ್ಞಾನದ ಪರಮಾವದಿಯ ಮುಖ ಕನ್ನಡಿಯಾಗಿ ಪ್ರದರ್ಶಿಸಲ್ಪಡುತ್ತಿದೆ. ಆದರೂ ಮಾನವನ ಸ್ವಾರ್ಥ ಚಿಂತನೆ, ತುಚ್ಚ ಆಚರಣೆ ಕೊನೆ ಕಾಣುತ್ತಿಲ್ಲ. ಮಾನವನ ಕ್ರಿಯೆಯಿಂದಾಗಿ ಪರಿಸರದ ಎಲ್ಲ ಸಂಪನ್ಮೂಲಗಳು ಅಳಿವಿನ ಅಂಚಿನಲ್ಲಿ ಬಂದು ನಿಂತಿದೆ.
ಮಾನವನ ಈ ಎಲ್ಲ ಕೃತ್ಯಗಳನ್ನು ಸಹಿಸಿರುವ ಪ್ರಕೃತಿಯು ಒಂದು ದಿನ ತಿರುಗಿ ನಿಲ್ಲುತ್ತದೆ. ಪ್ರಕೃತಿಯ ವಿಕೋಪದಿಂದಾಗಿ ಮಾನವನ ಸಂಕುಲವೆ ನಶಿಸಿ ಹೋಗಬಹುದು. ಜನಗಳ ಮೃತ್ಯು ತಲೆಎತ್ತಿ ತಾಂಡವಾಡ ಬಹುದು. ಇದೆಲ್ಲವನ್ನು ತಿಳಿದಿರುವ ನಮ್ಮ ಇಡೀ ನರಸಂಕುಲ ಯಾವುದೇರೀತಿಯ ನಿಸರ್ಗ ಉಳಿವಿಕೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುತಿಲ್ಲ. ಹಾಗಾಗಿ ಈಗ ಮಾನವ ಎಚ್ಚರಿತುಕೊಳ್ಳದಿದ್ದರೆ ಮುಂದೊಂದು ದಿನ ಅಸಹಾಯಕನಾಗಿ ತನ್ನ ಮೃತ್ಯುವನ್ನು ಸ್ವಾಗತಿಸ ಬೇಕಾಗುತ್ತದೆ.ಅರಿತು ಬಾಳುನಿ ಮನುಜ ನಿನ್ನ ಉಳಿವಿಗೆ ಪ್ರಕೃತಿಯ ಉಳಿವು ಅಗತ್ಯ ಎಂಬುವುದು ನಿಜ.
*ವಂಶಿ ಐ. ಭಟ್ಟ
ಎಸ್.ಡಿ.ಎಂ., ಉಜಿರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.