ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಬಿರುಸು : ಒಂದು ಕೋಟಿ ಲಸಿಕೆ ವಿತರಣೆ ದಾಖಲೆ
Team Udayavani, Aug 28, 2021, 7:20 AM IST
ಹೊಸದಿಲ್ಲಿ/ಬೆಂಗಳೂರು : ಲಸಿಕೆ ವಿತರಣೆಯಲ್ಲಿ ಶುಕ್ರವಾರ ದೇಶದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಶುಕ್ರವಾರ ಒಂದೇ ದಿನ ಒಂದು ಕೋಟಿಯಷ್ಟು ಲಸಿಕೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಟ್ವೀಟ್ ಮೂಲಕ ಈ ಮಾಹಿತಿ ನೀಡಿದ್ದಾರೆ. ಕೋವಿನ್ ಪೋರ್ಟಲ್‌ನ ಮಾಹಿತಿ ಪ್ರಕಾರ ಶುಕ್ರವಾರ ರಾತ್ರಿ ಒಂದು ಕೋಟಿಗೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿತ್ತು. ಜತೆಗೆ ದೇಶದ 14 ಕೋಟಿ ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಒಟ್ಟು 62 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ.
ಕರ್ನಾಟಕದಲ್ಲಿ ಶುಕ್ರವಾರ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ ಏಳು ಲಕ್ಷ ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಈ ಮೂಲಕ ದಾಸ್ತಾನು ಕೊರತೆಯಿಂದ ದೇಶ ಮತ್ತು ರಾಜ್ಯದಲ್ಲಿ ನಿಧಾನಗತಿಯಲ್ಲಿದ್ದ ಅಭಿಯಾನಕ್ಕೆ ಭಾರೀ ವೇಗ ಸಿಕ್ಕಂತಾಗಿದೆ.
ದಾಸ್ತಾನು ಕೊರತೆಯಿಂದ ಕಳೆದ ತಿಂಗಳು ನಿತ್ಯ ಸರಾಸರಿ 2.5 ಲಕ್ಷ ಡೋಸ್ ಮಾತ್ರ ನೀಡಲಾಗುತ್ತಿತ್ತು. ಆಗಸ್ಟ್ ಮೊದಲ ಮೂರು ವಾರಗಳಲ್ಲಿ ಸರಾಸರಿ 3 ಲಕ್ಷ ಡೋಸ್‌ಗೆ ಹೆಚ್ಚಿಸಲಾಗಿತ್ತು. ಕೊನೆಯ ವಾರ ಅಭಿಯಾನಕ್ಕೆ ವೇಗ ಸಿಕ್ಕಿದ್ದು, ನಾಲ್ಕೈದು ಲಕ್ಷಕ್ಕೆ ಹೆಚ್ಚಳವಾಗಿತ್ತು. ಶುಕ್ರವಾರ ಒಟ್ಟು 7,102 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗಿದೆ. 7.2 ಲಕ್ಷ ಮಂದಿ ಮೊದಲ ಡೋಸ್, 3.3 ಲಕ್ಷ ಮಂದಿ 2ನೇ ಡೋಸ್ ಸೇರಿ ಒಟ್ಟು 10,39,355 ಮಂದಿ ಲಸಿಕೆ ಪಡೆದಿದ್ದಾರೆ.
ಬೆಂಗಳೂರು ಮೊದಲಿಗ: ರಾಜ್ಯ ದ್ವಿತೀಯ
ದೇಶದಲ್ಲಿ ಅತೀ ಹೆಚ್ಚು ಲಸಿಕೆ ವಿತರಣೆ ಬೆಂಗಳೂರಿನಲ್ಲಿ ನಡೆದಿದ್ದು, 1.9 ಲಕ್ಷ ಮಂದಿಗೆ ವಿತರಿಸಲಾಗಿದೆ. ನಗರದ ಒಟ್ಟು ಜನಸಂಖ್ಯೆಯಲ್ಲಿ ಶೇ. 75ರಷ್ಟು ಮಂದಿ ಈಗಾಗಲೇ ಲಸಿಕೆ ಪಡೆದಿದ್ದಾರೆ. ಈ ಮೂಲಕ ಲಸಿಕೆ ಗುರಿಸಾಧನೆಯಲ್ಲಿ ದೇಶದ ಮಹಾನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ಶುಕ್ರವಾರ ಉತ್ತರ ಪ್ರದೇಶ 27 ಲಕ್ಷ ಮಂದಿಗೆ ಲಸಿಕೆ ವಿತರಿಸುವ ಮೂಲಕ ಮೊದಲ ಸ್ಥಾನದಲ್ಲಿದ್ದು, ಕರ್ನಾಟಕ ಎರಡನೇ ಸ್ಥಾನದಲ್ಲಿದೆ.
ನಾಲ್ಕು ಕೋಟಿ ಡೋಸ್‌ನತ್ತ
ರಾಜ್ಯದಲ್ಲಿ ಶುಕ್ರವಾರದ ಅಂತ್ಯಕ್ಕೆ 3,99,50,503 ಡೋಸ್ ಲಸಿಕೆ ವಿತರಿಸಲಾಗಿದೆ. ಶನಿವಾರ ನಾಲ್ಕು ಕೋಟಿಯ ಗಡಿ ದಾಟಲಿದೆ. 4.95 ಕೋಟಿ ಮಂದಿ ಲಸಿಕೆ ವ್ಯಾಪ್ತಿಯಲ್ಲಿದ್ದು, ಈ ಪೈಕಿ ಈಗಾಗಲೇ 3.04 ಕೋಟಿ ಮಂದಿ ಮೊದಲ ಡೋಸ್, 96.4 ಲಕ್ಷ ಮಂದಿ ಎರಡೂ ಡೋಸ್ ಪಡೆದಿದ್ದಾರೆ. ಈ ಮೂಲಕ ಶೇ. 62ರಷ್ಟು ಗುರಿ ಸಾಧನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.