ಮೊದಲು ಕೊವಿಶೀಲ್ಡ್‌ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್‌ ಪಡೆಯಬಹುದೇ? ಇಲ್ಲಿದೆ ಪರಿಹಾರ

ಇದುವರೆಗೆ ವರದಿಯಾದ ಎಲ್ಲ ರೂಪಾಂತರಗಳ ಮೇಲೆ ಇದು ಪರಿಣಾಮಕಾರಿ

Team Udayavani, Apr 29, 2021, 9:02 AM IST

ಮೊದಲು ಕೊವಿಶೀಲ್ಡ್‌ ಪಡೆದು, 2ನೇ ಬಾರಿ ಕೊವ್ಯಾಕ್ಸಿನ್‌ ಪಡೆಯಬಹುದೇ? ಇಲ್ಲಿದೆ ಪರಿಹಾರ

ಎಲ್ಲ ವಯಸ್ಕರು ಮೇ 1ರಿಂದ ದೇಶದಲ್ಲಿ ಲಸಿಕೆ ಪಡೆಯಲಿದ್ದಾರೆ. ಇದರ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಇದು ಕೋವಿಡ್‌ನ‌ ಎರಡನೇ ಅಲೆಯನ್ನು ತಡೆಯಲು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ಅಲ್ಲದೆ ದೇಶದಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿಗೂ ಪರಿಹಾರ ಒದಗಿಸಲಿದೆ ಎಂಬ ನಿರೀಕ್ಷೆ ಸರಕಾರದ್ದು. ಆದರೆ ಲಸಿಕೆ ಸ್ವೀಕಾರ ಕುರಿತು ಜನರಲ್ಲಿ ಇನ್ನೂ ಗೊಂದಲವಿದೆ. ಈ ಗೊಂದಲಗನ್ನು ಬಗೆಹರಿಸಲು ತಜ್ಞರು ಈಗಾಗಲೇ ಪ್ರಯತ್ನಿಸಿದ್ದಾರೆ. ಆದರೂ ಸಂಪೂರ್ಣ ಬಗೆಹರಿದಿಲ್ಲ. ಈ ಹಿನ್ನೆಲೆಯಲ್ಲಿ ಲಸಿಕೆ ನೀಡಿಕೆ ಪ್ರಕ್ರಿಯೆ ಕುರಿತು ಒಂದಿಷ್ಟು ಮಾಹಿತಿ ಇಲ್ಲಿ ನೀಡಲಾಗಿದೆ.

ಆಸ್ಪತ್ರೆಯಿಂದ ನೇರ ಲಸಿಕೆ ಪಡೆಯಬಹುದೇ?
ಇಲ್ಲ. ಇದಕ್ಕಾಗಿ ಕೇಂದ್ರ ಸರಕಾರ ನೋಂದಣಿಯನ್ನು ಕಡ್ಡಾಯಗೊಳಿ ಸಿದೆ. ಆರೋಗ್ಯ ಸೇತು ಆ್ಯಪ್ಲಿಕೇಶನ್‌ ಅಥವಾ ಕೋವಿನ್‌ ಪೋರ್ಟಲ್‌ನಲ್ಲಿ (<https://selfregistration.cowin.gov.in/) ನೋಂದಾಯಿಸಿ ಕೊಂಡವರು ಮಾತ್ರ ಲಸಿಕೆ ಪಡೆಯಬಹು ದಾಗಿದೆ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ಪಡೆಯ ಬಹುದು. ಕೆಲವು ಖಾಸಗಿ ಆಸ್ಪತ್ರೆ ಗಳಲ್ಲಿಯೂ ಲಸಿಕೆ ಪಡೆಯ ಬಹುದು. ಆದರೆ ನೋಂದಣಿ ಅಗತ್ಯ.

ನೋಂದಣಿಗೆ ಬೇಕಾಗುವ ದಾಖಲೆ
ನಿಮ್ಮ ಫೋಟೋ ಇರುವ ಕೆಳಗೆ ನೀಡಲಾದ ಯಾವುದೇ ಗುರುತಿನ ಪತ್ರ(ಐಡಿ) ದೊಂದಿಗೆ ನೋಂದಣಿ ಮಾಡಿ ಕೊಳ್ಳಬಹುದು. -ಆಧಾರ್‌ ಕಾರ್ಡ್‌/ವೋಟರ್‌ ಐಡಿ/ಚಾಲನಾ ಪರವಾನಿಗೆ/ಕಾರ್ಮಿಕ ಸಚಿವಾಲಯದ ಆರೋಗ್ಯ ವಿಮೆ ಸ್ಮಾರ್ಟ್‌ ಕಾರ್ಡ್‌/ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಉದ್ಯೋಗ ಕಾರ್ಡ್‌/ಪ್ಯಾನ್‌ ಕಾರ್ಡ್‌/ಬ್ಯಾಂಕ್‌/ಅಂಚೆ ಕಚೇರಿಯ ಪಾಸ್‌ಬುಕ್‌/ ಪಾಸ್‌ಪೋರ್ಟ್‌/ಪಿಂಚಣಿ ದಾಖಲೆ/ಕೇಂದ್ರ / ರಾಜ್ಯ ಸರಕಾರ / ಸಾರ್ವಜನಿಕ ಲಿಮಿಟೆಡ್‌ ಕಂಪೆನಿ ಗಳು ಉದ್ಯೋಗಿಗಳಿಗೆ ನೀಡುವ ಸೇವಾ ಗುರುತಿನ ಚೀಟಿಗಳು.

ಲಸಿಕೆ ಉಚಿತ ಎಲ್ಲೆಲ್ಲಿ ?
ಕರ್ನಾಟಕ, ಮಧ್ಯಪ್ರದೇಶ, ಹರಿಯಾಣ, ದಿಲ್ಲಿ, ರಾಜಸ್ಥಾನ, ಛತ್ತೀಸ್‌ಗಢ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸಹಿತ 24 ರಾಜ್ಯಗಳು 18-44 ವರ್ಷ ವಯಸ್ಸಿನವರಿಗೆ ಉಚಿತ ಲಸಿಕೆ ನೀಡುವುದಾಗಿ ಹೇಳಿವೆ. ಆದರೆ ಸ್ಥಳೀಯರಿಗೆ ಮಾತ್ರ ಅನ್ವಯವೋ ಅಥವಾ ಹೊರ ರಾಜ್ಯಗಳ ನಿವಾಸಿಗಳಾಗಿದ್ದರೂ ಈ ಸೌಲಭ್ಯ ಆನ್ವಯವಾದೀತೇ ಎಂಬುದು ಸ್ಪಷ್ಟವಾಗಬೇಕು. ಇದಕ್ಕೆ ಸಂಬಂಧಿಸಿದ ಅಧಿಸೂಚನೆಗಳು ಪ್ರಕಟವಾಗಬೇಕಿದೆ.

ಬಳಿಕ ಏನು ಮಾಡಬೇಕು?
ನೋಂದಣಿ ಸಂದರ್ಭದಲ್ಲೇ ನಿಮ್ಮ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಲಸಿಕೆ ಪಡೆಯಲಿಚ್ಛಿಸುವ ಆಸ್ಪತ್ರೆ, ಲಭ್ಯವಿರುವ ದಿನಾಂಕ ಮತ್ತು ಲಸಿಕೆ ಪಡೆಯುವ ಸಮಯವನ್ನು ಆಯ್ದುಕೊಳ್ಳಬೇಕು. ಬಳಿಕ ಅಪಾಯಿಂಟೆ¾ಂಟ್‌ ಕಾಯ್ದಿರಿಸುವ ಸಂದೇಶ ನಿಮ್ಮ ಮೊಬೈಲ್‌ ಗೆ ಬರುತ್ತದೆ. ಆ ಪ್ರಕಾರ ನಿಗದಿತ ಸಮಯಕ್ಕೆ ಲಸಿಕೆ ಪಡೆಯಲು ಹೋಗಬೇಕು. ನೋಂದಣಿಗೆ ಬಳಸಿದ ಐಡಿಯನ್ನೇ ಲಸಿಕೆ ಪಡೆಯಲು ಕೊಂಡೊಯ್ಯಬೇಕು.

ಮಕ್ಕಳಿಗೂ ಲಸಿಕೆ ನೀಡಬಹುದಾ?
ಇಲ್ಲ. ಈ ಸಮಯದಲ್ಲಿ ಮಕ್ಕಳ ಮೇಲೆ ಯಾವುದೇ ಲಸಿಕೆ ಪ್ರಯೋಗಗಳು ನಡೆದಿಲ್ಲ. ಹಾಗಾಗಿ ಅವರಿಗೆ ಲಸಿಕೆ ನೀಡಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಲಭ್ಯವಾಗಬಹುದು.

ಮುಟ್ಟಾದರೂ ಲಸಿಕೆ ಪಡೆಯಬಹುದೇ?
ಹೌದು. ಲಸಿಕೆ ತೆಗೆದುಕೊಳ್ಳುವುದಕ್ಕೂ, ಮಹಿಳೆಯರ ಪೀರಿಯಡ್ಸ್‌ಗೂ ಸಂಬಂಧವಿಲ್ಲ. ಹೀಗಾಗಿ ಮಹಿಳೆಯರು ಯಾವುದೇ ಹಿಂಜರಿಕೆ ಇಲ್ಲದೇ ಲಸಿಕೆ ಪಡೆಯಬಹುದು ಎನ್ನುತ್ತಾರೆ ಆರೋಗ್ಯ ತಜ್ಞರು.

ಹೊರರಾಜ್ಯಗಳಲ್ಲಿ ಪಡೆಯಬಹುದೇ?
ಕೇಂದ್ರ ಸರಕಾರದ ವ್ಯವಸ್ಥೆಯ ಪ್ರಕಾರ, ನೀವು 45+ ಆಗಿದ್ದರೆ ದೇಶದ ಯಾವುದೇ ಲಸಿಕೆ ಕೇಂದ್ರದಲ್ಲಿ ಲಸಿಕೆ ಪಡೆಯಬಹುದು. ಆದರೆ 18-44 ವರ್ಷದೊಳಗಿದ್ದ ವರಿಗೆ ಇನ್ನೂ ಖಚಿತವಾಗಿಲ್ಲ. ಈ ವಯಸ್ಸಿನವರಿಗೆ ಲಸಿಕೆ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ. ಹಾಗಾಗಿ ಈ ಬಗ್ಗೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ.

ಲಸಿಕೆ ಯಾರು ಪಡೆಯಬಾರದು?
– ಮೊದಲ ಡೋಸ್‌ ಪಡೆದು ತೀವ್ರ ಅಲರ್ಜಿಯಾದವರು
– ಗರ್ಭಿಣಿಯಾಗಿದ್ದರೆ ಅಥವಾ ಶಿಶುಗಳಿಗೆ ಎದೆಹಾಲು ಉಣಿಸುತ್ತಿದ್ದರೆ
– ಕೊರೊನಾ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ
– ನೀವು ಬೇರೆ ಯಾವುದೇ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದರೆ, ವೈದ್ಯರನ್ನು ಸಲಹೆ ಪಡೆದು ನಿರ್ಧರಿಸಿ

ಯಾವ ಲಸಿಕೆ ಉತ್ತಮ?
ಸದ್ಯ ಬಳಸುತ್ತಿರುವ ಎಲ್ಲ ಲಸಿಕೆಗಳ ಉದ್ದೇಶ ಕೊರೊನಾದಿಂದ ರಕ್ಷಿಸುವುದು. ಆದರೆ ಇವುಗಳು ವಿಭಿನ್ನ ಪರಿಣಾಮಕತ್ವವನ್ನು ಹೊಂದಿವೆ. ಶೇ. 66ರಿಂದ 95ರಷ್ಟು ಪರಿಣಾಮಕಾರಿಯಾಗಿರಲಿವೆ. ಈ ಲಸಿಕೆಗಳನ್ನು ಪಡೆದ ಬಳಿಕ ಸೋಂಕು ಉಲ½ಣಗೊಂಡು ಗಂಭೀರ ಸ್ಥಿತಿ ತಲುಪುವುದನ್ನು ತಡೆಯಬಲ್ಲದು. ಈ ಎಲ್ಲ ಲಸಿಕೆಗಳು ತೀವ್ರವಾದ ರೋಗಲಕ್ಷಣಗಳಿಂದ ರಕ್ಷಿಸಲು ಪರಿಣಾಮಕಾರಿಯಾಗಿವೆ. ಈ ಕಾರಣದಿಂದಾಗಿ ಎಲ್ಲರೂ ಲಸಿಕೆ ಪಡೆಯಬೇಕು.

ಭಾರತದಲ್ಲಿ ಯಾವ ಲಸಿಕೆ ನೀಡಲಾಗುತ್ತಿದೆ?
ಕೊವಿಶೀಲ್ಡ್ ಅನ್ನು ಪ್ರಸ್ತುತ ಪುಣೆಯ ಸೀರಮ್‌ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾದಲ್ಲಿ ಹಾಗೂ ಕೊವ್ಯಾಕ್ಸಿನ್‌ ಅನ್ನು ಹೈದರಾಬಾದ್‌ನ ಭಾರತ್‌ ಬಯೋಟೆಕ್‌ನಲ್ಲಿ ತಯಾರಿಸಲಾಗುತ್ತಿದೆ. ಜತೆಗೆ ಕೇಂದ್ರ ಸರಕಾರವು ರಷ್ಯಾದ ಲಸಿಕೆ “ಸ್ಪುಟ್ನಿಕ್‌ ವಿ’ ಗೆ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಲಸಿಕೆ ಮೇ ತಿಂಗಳಲ್ಲಿ ಲಭ್ಯವಾಗಲಿದೆ. ಇದನ್ನು ಭಾರತದ ಡಾ| ರೆಡ್ಡಿ ಅವರ ಪ್ರಯೋಗಾಲಯ ಮತ್ತು ಇತರ ಕೆಲವು ಔಷಧೀಯ ಕಂಪೆನಿಗಳು ಅಭಿವೃದ್ಧಿಪಡಿಸುತ್ತಿವೆ. ರಷ್ಯಾದ ಲಸಿಕೆಗಾಗಿ ಯಾವುದೇ ರಾಜ್ಯ ಸರಕಾರದಿಂದ ಒಪ್ಪಂದವಾಗಿಲ್ಲ. ಇದಲ್ಲದೇ ಕೆಲವು ಷರತ್ತುಗಳೊಂದಿಗೆ ಯುಎಸ್‌, ಜಪಾನ್‌, ಯುಕೆ, ಯುರೋಪ್‌ (ಇಯು)ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳಿಂದ ಅನುಮೋದನೆ ಪಡೆದ ಲಸಿಕೆಗೆ ತುರ್ತು ಅನುಮೋದನೆ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಫೈಜರ್‌, ಮಾಡರ್ನಾ, ಜಾನ್ಸನ್‌ ಮತ್ತು ಜಾನ್ಸನ್‌ ನಂತಹ ಕಂಪೆನಿಗಳ ಲಸಿಕೆಯೂ ಲಭ್ಯವಾಗುವಂತೆ ಕ್ರಮ ಕೈಗೊಳ್ಳುತ್ತಿದೆ. ಈ ಲಸಿಕೆಗಳು ಮೇ-ಜೂನ್‌ನಲ್ಲಿ ನಮ್ಮಲ್ಲೂ ಲಭ್ಯವಾಗಬಹುದು.

ಹೊಸ ರೂಪಾಂತರದ ಮೇಲೆ ಲಸಿಕೆ ಪರಿಣಾಮಕಾರಿಯೇ?
ಹೌದು. ಇದುವರೆಗೆ ವರದಿಯಾದ ಎಲ್ಲ ರೂಪಾಂತರಗಳ ಮೇಲೆ ಇದು ಪರಿಣಾಮಕಾರಿ ಯಾಗಿದ್ದು, ತೀವ್ರ ರೋಗಲಕ್ಷಣಗಳಿಂದ ಎರಡೂ ಲಸಿಕೆಗಳು ರಕ್ಷಿಸುತ್ತವೆ ಎಂದಿದ್ದಾರೆ ಪರಿಣಿತರು. ಯಾವುದೇ ಹಿಂಜರಿಕೆ ಬೇಡ. ಈ ಲಸಿಕೆಗಳು ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೊರೊನಾ ಸೋಂಕು ಅಷ್ಟು ಬೇಗ ತಗಲದಂತೆ ತಡೆಯುತ್ತದೆಯೇ ವಿನಾ ಇವು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ಔಷಧವಲ್ಲ. ಇದು ಎಲ್ಲರ ಗಮನದಲ್ಲಿರಲಿ. ಲಸಿಕೆ ಪಡೆದ ಬಳಿಕ ಈ ಹಿಂದಿನಂತೆಯೇ ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು.

ಟಾಪ್ ನ್ಯೂಸ್

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

8

Year ender: ಈ ವರ್ಷ ನಕ್ಕು ನಗಿಸಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ವಿಡಿಯೋಗಳಿವು..

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

Zakir Hussain; ನಾದಯೋಗಿಯ ನಿನಾದ ಸ್ತಬ್ಧ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: “ಸೈಬರ್‌ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್‌

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

11

Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.