Vaccine: ಇನ್ನೆರಡು ವರ್ಷದೊಳಗೆ ಕೆಎಫ್‌ಡಿ ಲಸಿಕೆ ಬಳಕೆಗೆ ಲಭ್ಯ: ಆರೋಗ್ಯ ಸಚಿವ ದಿನೇಶ್
ಭರವಸೆ ಮೂಡಿಸಿದ ಮೊದಲ ಪ್ರಯೋಗ: ದಿನೇಶ್
Team Udayavani, Oct 17, 2024, 7:25 AM IST
ಬೆಂಗಳೂರು: ಕೆಎಫ್‌ಡಿ ಮೊದಲ ಹಂತದ ಲಸಿಕೆ ಪ್ರಯೋಗ ಭರವಸೆ ಮೂಡಿಸಿದೆ. ಎಪ್ರಿಲ್‌ನಲ್ಲಿ ಲಸಿಕೆಯ ಮಾನವ ಪ್ರಯೋಗಗಳನ್ನು ನಡೆಸಲು ಯೋಜಿಸಿದ್ದು 2026ರೊಳಗೆ ಲಸಿಕೆ ಬಳಕೆಗೆ ಲಭ್ಯವಿರಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಹೊಸದಿಲ್ಲಿ ಪ್ರವಾಸದಲ್ಲಿದ್ದ ಸಚಿವರು ಕೆಎಫ್‌ಡಿ ಲಸಿಕೆ ಕುರಿತು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ನಿರ್ದೇಶಕರನ್ನು ಭೇಟಿ ಮಾಡಿ ಚರ್ಚೆ ನಡೆಸಿ, ಈಗಾಗಲೇ ಮೊದಲ ಹಂತದ ಪ್ರಯೋಗದಲ್ಲಿ ಕೆಎಫ್‌ಡಿ ಲಸಿಕೆ ಭರವಸೆ ಮೂಡಿಸಿದೆ. ರಾಜ್ಯದ ಕೆಎಫ್‌ಡಿ ಪೀಡಿತ ಪ್ರದೇಶಕ್ಕೆ ಕಾಲಮಿತಿಯೊಳಗೆ ಲಸಿಕೆ ಲಭ್ಯತೆ ಅಗತ್ಯವಿದೆ. ಎರಡನೇ ಹಂತದ ಪ್ರಯೋಗ ಶೀಘ್ರದಲ್ಲಿ ಪ್ರಾರಂಭಿಸಲಾಗುತ್ತದೆ ಎಂದರು.
ರಾಜ್ಯದ ಯೋಜನೆಗೆ ಮೆಚ್ಚುಗೆ
ಇದೇ ವೇಳೆ ರಾಜ್ಯದ ಅನಿಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ ಯೋಜನೆಗೆ ಐಸಿಎಂಆರ್ ನಿರ್ದೇಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಶೇಷವಾಗಿ ಸರಕಾರಿ ಶಾಲಾ ಕಾಲೇಜು ಮಕ್ಕಳನ್ನು ರಕ್ತಹೀನತೆ ತಪಾಸಣೆಗೆ ಒಳಪಡಿಸುತ್ತಿರುವುದು ಉತ್ತಮ ಯೋಜನೆ ಎಂದಿದ್ದಾರೆ. ಅಲ್ಲದೇ ಭಾರತ ಸರಕಾರದ ರಕ್ತ ಹೀನತೆ ಮುಕ್ತ ಭಾರತ್ 2.ಒ ಯೋಜನೆಗೆ ಅನುಗುಣವಾಗಿ ಯೋಜನೆ ವಿಸ್ತರಿಸುವಂತೆ ಸಚಿವರಲ್ಲಿ ವಿನಂತಿಸಿದರು.
ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ರಾಜ್ಯ ಆರೋಗ್ಯ ಇಲಾಖೆ ಕೈಗೊಂಡ ನವೀನ ತಂತ್ರಜ್ಞಾನವನ್ನು ದೇಶದ ಇತರ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಐಸಿಎಂಆರ್ ನಿರ್ದೇಶಕರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Hubli: ವಿದ್ಯಾರ್ಥಿನಿಗೆ ಚುಡಾಯಿಸಿದ ಇಬ್ಬರು, ಸಹಕರಿಸಿದ ಮೂವರ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.