ವಾಹನ ಸಾಮರ್ಥ್ಯ ಪರೀಕ್ಷೆಗೆ, ಏಷ್ಯಾದಲ್ಲೇ ಬೃಹತ್ ಪರೀಕ್ಷಾ ಟ್ರ್ಯಾಕ್ ಉದ್ಘಾಟನೆ
Team Udayavani, Jun 30, 2021, 7:10 AM IST
ಇಂದೋರ್: ಕೇಂದ್ರ ಭಾರೀ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವ ಪ್ರಕಾಶ್ ಜಾಬ್ಡೇಕರ್ ಇಡೀ ದೇಶವೇ ಗೌರವ ಪಡಬೇಕಾದ ಪರೀಕ್ಷಾ ಟ್ರ್ಯಾಕೊಂದನ್ನು ಉದ್ಘಾಟಿಸಿದ್ದಾರೆ. ಮಧ್ಯ ಪ್ರದೇಶದ ಇಂದೋರ್‌ನ ಪೀಠಂಪುರದಲ್ಲಿ 11.3 ಕಿ.ಮೀ. ಉದ್ದದ ರಸ್ತೆಯನ್ನು ಉದ್ಘಾಟಿಸಲಾಗಿದೆ. ಈ ಟ್ರ್ಯಾಕ್ ನಲ್ಲಿ ನಾಲ್ಕು ಪಥಗಳಿವೆ. ಇದು ಒಟ್ಟಾರೆ 52 ಅಡಿ ಅಗಲವಿದೆ. ಇದು ಏಷ್ಯಾದಲ್ಲೇ ಅತೀ ಉದ್ದದ ಪರೀಕ್ಷಾ ಟ್ರ್ಯಾಕ್, ಹಾಗೆಯೇ ವಿಶ್ವದಲ್ಲಿ ಐದನೆಯದ್ದು!
ಇಲ್ಲಿ ಹೊಸತಾಗಿ ಸಿದ್ಧಗೊಂಡಿರುವ ವಾಹನಗಳನ್ನು ಓಡಿಸಿ ಪರೀಕ್ಷಿಸಬಹುದು. ಇನ್ನು ಇದಕ್ಕಾಗಿ ವಿದೇಶ ಗಳಿಗೆ ಹೋಗುವ ಪರಿಸ್ಥಿತಿ ಭಾರತೀಯ ವಾಹನ ಕಂಪೆನಿಗಳಿಗೆ ಬರುವುದಿಲ್ಲ. ಅಷ್ಟು ಮಾತ್ರವಲ್ಲ ವಿದೇಶಿಯರೇ ಇಲ್ಲಿಗೆ ತಮ್ಮ ವಾಹನಗಳನ್ನು ತಂದು ಪರೀಕ್ಷಿಸಲೂಬಹುದು. ಅಂತಹ ವಿಶ್ವದರ್ಜೆಯ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.
ನ್ಯಾಟ್ರ್ಯಾಕ್ಸ್‌ನ (ನ್ಯಾಶನಲ್ ಆಟೋಮೊಟಿವ್ ಟೆಸ್ಟ್ ಟ್ರ್ಯಾಕ್ಸ್) ಈ ಕಾರ್ಯಕ್ಕೆ ಪ್ರಕಾಶ್ ಜಾಬ್ಡೇಕರ್ ಪ್ರಶಂಸೆ ವ್ಯಕ್ತಪಡಿಸಿ, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಈ ಕಾಮಗಾರಿಗಳು ಮುಕ್ತಾಯವಾಗಿರುವುದು ಸಂತಸದ ಸಂಗತಿ ಎಂದಿದ್ದಾರೆ.
ವಾಹನಗಳ ಸಾಮರ್ಥ್ಯ ಪರೀಕ್ಷೆ
ಇಲ್ಲಿ ಗಂಟೆಗೆ 250 ಕಿ.ಮೀ. ಸಾಮಾನ್ಯ ವೇಗದಲ್ಲಿ ವಾಹನಗಳನ್ನು ಓಡಿಸಬಹುದು. ಇನ್ನು ಮಧ್ಯಭಾಗದಲ್ಲಿ ಗರಿಷ್ಠ 375 ಕಿ.ಮೀ. ವೇಗದಲ್ಲಿ ಓಡಿಸಬಹುದು. ತಿರುವುಗಳಿಲ್ಲದೇ ನೇರವಾಗಿಯೇ ಸಾಗುತ್ತಿದ್ದಾಗ, ವೇಗಕ್ಕೆ ಮಿತಿ ಹಾಕಿಲ್ಲ. ಟ್ರ್ಯಾಕನ್ನು ಗೋಳಾಕೃತಿಯಲ್ಲಿ ನಿರ್ಮಿಸಲಾಗಿದೆ. ವಾಹನ ಗಳ ಸಾಮರ್ಥ್ಯಗಳ ಪರೀಕ್ಷೆಗೆ ಇದೊಂದು ರೀತಿಯಲ್ಲಿ ಪ್ರಯೋಗಾಲಯದಂತೆ ಕೆಲಸ ಮಾಡುತ್ತದೆ. ವಾಹನಗಳ ಗರಿಷ್ಠ ವೇಗ, ವೇಗವರ್ಧಿಸುವಿಕೆ ಸಾಮರ್ಥ್ಯ, ಇಂಧನ ಕ್ಷಮತೆ, ಅತಿಯಾದ ವೇಗ ನಿರ್ವಹಣೆ, ಸ್ಥಿರತೆಯ ಪರೀಕ್ಷೆಗೆ ಈ ಟ್ರ್ಯಾಕ್ ಸೂಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.