Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
ಅಮೆರಿಕದ ಜನಪ್ರಿಯ ಟಿ.ವಿ. ಶೋಗಳಲ್ಲಿ ಡ್ಯುಯೆಲ್ ಪಾತ್ರ ನಿರ್ವಹಿಸಿದ್ದರು
Team Udayavani, Dec 28, 2024, 11:44 AM IST
ಲಾಸ್ ಏಂಜಲೀಸ್(Los Angeles): 1970ರಲ್ಲಿ ಹಾಲಿವುಡ್ ನಲ್ಲಿ ತೆರೆಕಂಡಿದ್ದ ಜಾನ್ ವೇಯ್ನೆ ಅವರ ಚಿಸಮ್ ಸಿನಿಮಾದಲ್ಲಿ ಬಿಲ್ಲಿ ದಿ ಕಿಡ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಹಿರಿಯ ನಟ ಜೆಫ್ರಿ ಡ್ಯೂಯೆಲ್ (81 ವರ್ಷ-Geoffery Deuel) ನಿಧನರಾಗಿರುವುದಾಗಿ ವರದಿ ತಿಳಿಸಿದೆ.
ಹಾಲಿವುಡ್ ರಿಪೋರ್ಟರ್ ಪ್ರಕಾರ, ಜೆಫ್ರಿ ಡ್ಯೂಯೆಲ್ ಅವರು ಫ್ಲೋರಿಡಾದ ಲಾರ್ಗೋದಲ್ಲಿನ ಹೋಸ್ಪಿಸ್ ಕೇರ್ ನಲ್ಲಿ ಡಿಸೆಂಬರ್ 22ರಂದು ಕೊನೆಯುಸಿರೆಳೆದಿದ್ದರು ಎಂದು ವರದಿ ವಿವರಿಸಿದೆ.
ನಟ ಜೆಫ್ರಿ ಅವರು ದೀರ್ಘಕಾಲದಿಂದ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ಡಿ.22ರಂದು ವಿಧಿವಶರಾಗಿರುವುದಾಗಿ ಪತ್ನಿ ಜಾಕ್ವೆಲಿನ್ ಡ್ಯೂಯೆಲ್ ತಿಳಿಸಿದ್ದಾರೆ.
1960-70ರ ದಶಕದಲ್ಲಿ ಅಮೆರಿಕದ ಜನಪ್ರಿಯ ಟಿ.ವಿ. ಶೋಗಳಲ್ಲಿ ಡ್ಯುಯೆಲ್ ಪಾತ್ರ ನಿರ್ವಹಿಸಿದ್ದರು. ಅಂದಿನ ದಿ ಮಂಕೀಸ್, ದಿ ಇನ್ ವೇಡರ್ಸ್, ದಿ ಎಫ್ ಬಿಐ, ದಿ ಫ್ಲೈಯಿಂಗ್ ನನ್, ಮೆಡಿಕಲ್ ಸೆಂಟರ್, ಮ್ಯಾನಿಕ್ಸ್ ಸೇರಿದಂತೆ ಹಲವು ಟೆಲಿವಿಷನ್ ಶೋಗಳಲ್ಲಿ ನಟಿಸಿದ್ದರು.
1970ರಲ್ಲಿ ತೆರೆಕಂಡಿದ್ದ ಚಿಸಮ್, ಟರ್ಮಿನಲ್ ಐಲ್ಯಾಂಡ್, ದಿ ಚೈನೀಸ್ ಕ್ಯಾಪರ್ ಸಿನಿಮಾಗಳಲ್ಲಿ ಜೆಫ್ರಿ ಡ್ಯುಯೆಲ್ ಅಭಿನಯಿಸಿದ್ದರು. ಅಲ್ಲದೇ 1973ರಿಂದ 1977ರವರೆಗೆ ಪ್ರಸಾರವಾಗಿದ್ದ ದಿ ಯಂಗ್ & ದಿ ರೆಸ್ಟ್ ಲೆಸ್ ಟೆಲಿವಿಷನ್ ಸರಣಿಯಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು.
ಜೆಫ್ರಿ ಜಾಕಬ್ ಡ್ಯುಯೆಲ್ ನ್ಯೂಯಾರ್ಕ್ ನ ಲಾಕ್ ಪೋರ್ಟ್ ನಲ್ಲಿ 1943ರ ಜನವರಿ 17ರಂದು ಜನಿಸಿದ್ದರು. ಡ್ಯುಯೆಲ್ ತಂದೆ ಎಲ್ಸ್ ವರ್ಥ್ ವೈದ್ಯರಾಗಿದ್ದು, ತಾಯಿ ನರ್ಸ್ ಆಗಿ ಸೇವೆ ಸಲ್ಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Bollywood: ಹೃತಿಕ್ ರೋಷನ್ ʼಕ್ರಿಶ್ -4ʼ ಬಗ್ಗೆ ಹೊರಬಿತ್ತು ಬಿಗ್ ಅಪ್ಡೇಟ್
Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.