Bengaluru: ಅಮೆಜಾನ್ ಪಾರ್ಸೆಲ್ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್! Watch
ಮಹಿಳೆ ಅಮೆಜಾನ್ ನಲ್ಲಿ Xbox ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು.
Team Udayavani, Jun 19, 2024, 1:02 PM IST
ಬೆಂಗಳೂರು: ಆನ್ ಲೈನ್ ವಸ್ತುಗಳು ಡೆಲಿವರಿ ಮಾಡಿದ ನಂತರ ತಾವು ಆರ್ಡರ್ ಮಾಡಿದ ವಸ್ತುವಿನ ಬದಲು ಬೇರೇನೊ ಬಂದಿರುವುದು ಸಾಮಾನ್ಯವಾಗಿದ್ದು, ಈಗಾಗಲೇ ಇಂತಹ ಹಲವು ಘಟನೆ ನಡೆದಿತ್ತು. ಆದರೆ ಈ ಬಾರಿ ಅಮೆಜಾನ್ ಕಳುಹಿಸಿದ್ದ ವಸ್ತು ಕಂಡು ಬೆಂಗಳೂರಿನ ಮಹಿಳೆಯೊಬ್ಬರು ಕಂಗಾಲಾಗಿ ಹೋದ ಘಟನೆ ನಡೆದಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ
ಉದ್ಯಾನನಗರಿಯ ಸರ್ಜಾಪುರ್ ರಸ್ತೆ ನಿವಾಸಿಯಾಗಿರುವ ಮಹಿಳೆ ಅಮೆಜಾನ್ ನಲ್ಲಿ Xbox ಕಂಟ್ರೋಲರ್ ಅನ್ನು ಆರ್ಡರ್ ಮಾಡಿದ್ದರು. ಕೆಲವು ದಿನಗಳ ನಂತರ ಅಮೆಜಾನ್ ನಿಂದ ಪಾರ್ಸೆಲ್ ಡೆಲಿವರಿ ಬಂದಿತ್ತು. Xbox ಕಂಟ್ರೋಲರ್ ಬಂದಿದೆ ಎಂದು ಮಹಿಳೆ ಪಾರ್ಸೆಲ್ ಓಪನ್ ಮಾಡಿದಾಗ ಬೊಬ್ಬೆ ಹೊಡೆದು ಹಿಂದೆ ಸರಿದುಬಿಟ್ಟಿದ್ದರು! ಯಾಕೆಂದರೆ ಪಾರ್ಸೆಲ್ ನಲ್ಲಿ ವಿಷಕಾರಿ ಹಾವು ಸುರುಳಿ ಸುತ್ತಿಕೊಂಡಿತ್ತು.
ಅದೃಷ್ಟವಶಾತ್ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಣ ಹಾವು ಗಮ್ ಟೇಪ್ ಗೆ ಸಿಕ್ಕಿಹಾಕಿಕೊಂಡು ಹೊರಬರಲು ಪ್ರಯತ್ನಪಡುತ್ತಿರುವುದು ವಿಡಿಯೋದಲ್ಲಿದೆ. ಘಟನೆ ಬಗ್ಗೆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಇದು ವೈರಲ್ ಆಗಿದೆ.
In a shocking incident, a family on Sarjapur Road received a live Spectacled Cobra with their Amazon order for an Xbox controller.
The venomous snake was fortunately stuck to packaging tape, preventing harm.#ITReel #Sarjapur #AmazonOrder #SnakeInAmazonOrder pic.twitter.com/EClaQrt1B6
— Prakash (@Prakash20202021) June 19, 2024
ಇದು ಭೀಕರ ವಿಷಕಾರಿ ಕನ್ನಡಿ ಹಾವಾಗಿದ್ದು, ಪಾರ್ಸೆಲ್ ಗೆ ಸುತ್ತಿದ ಗಮ್ ಟೇಪ್ ಗೆ ಹಾವು ಸಿಕ್ಕಿಹಾಕಿಕೊಂಡಿದ್ದರಿಂದ ಯಾವುದೇ ಅಪಾಯ ಎದುರಾಗಿಲ್ಲ. ಮಹಿಳೆಯ ವಿಡಿಯೋಕ್ಕೆ ಅಮೆಜಾನ್ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿ, ನಮ್ಮಿಂದ ತಪ್ಪಾಗಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಆರ್ಡರ್ ವಿವರವನ್ನು ಕಳುಹಿಸಿ, ಅಮೆಜಾನ್ ಸಿಬಂದಿ ಕೂಡಲೇ ನಿಮಗೆ ಅಪ್ ಡೇಟ್ ನೀಡಲಿದ್ದಾರೆ “ ಎಂದು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
English ತರಬೇತಿ ಮಾಧ್ಯಮವಷ್ಟೇ ಆಗಲಿ: ಗೊ.ರು.ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.