Throws Mic: ಸಂಗೀತ ಕಾರ್ಯಕ್ರಮದ ವೇಳೆ ಪ್ರೇಕ್ಷಕರ ಮೇಲೆ ಮೈಕ್ ಎಸೆದ ಪಾಕ್ ಗಾಯಕ
ತಾನು ಮಾಡಿದ ತಪ್ಪಿಗೆ ಸ್ಪಷ್ಟನೆ ನೀಡಿದ ಗಾಯಕ
Team Udayavani, Jan 31, 2024, 12:43 PM IST
ಇಸ್ಲಾಮಾಬಾದ್: ಪಾಕಿಸ್ತಾನಿ ಗಾಯಕ ಮತ್ತು ಗೀತರಚನೆಕಾರ ಬಿಲಾಲ್ ಸಯೀದ್ ಅವರು ಇತ್ತೀಚೆಗೆ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರತ್ತ ಮೈಕ್ ಎಸೆದು ವೇದಿಕೆಯಿಂದ ಹೊರನಡೆದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದಕ್ಕೆ ಕಾರಣವಾಯಿದೆ.
ಪಾಕಿಸ್ತಾನದ ಫಾಲಿಯಾದಲ್ಲಿ ಪಂಜಾಬ್ ಗ್ರೂಪ್ ಆಫ್ ಕಾಲೇಜ್ (ಪಿಜಿಸಿ) ಯುವ ಸಂಗೀತ ಉತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಗಾಯಕ ಬಿಲಾಲ್ ಸಯೀದ್ ತನ್ನ 2012 ರ ಹಿಟ್ ಸಾಂಗ್ ‘ಕು ಕು’ ಅನ್ನು ಹಾಡುತ್ತಿರುವುದು ನೋಡಬಹುದು ಈ ನಡುವೆ ಇದ್ದಕ್ಕಿದ್ದಂತೆ ಹಾಡು ನಿಲ್ಲಿಸಿ ಕೈಯಲ್ಲಿದ್ದ ಮೈಕ್ ಅನ್ನು ಪ್ರೇಕ್ಷಕರ ಮೇಲೆ ಬಲವಾಗಿ ಎಸೆದು ಸಂಗೀತ ಕಚೇರಿಯ ಮಧ್ಯದಲ್ಲೇ ವೇದಿಕೆಯಿಂದ ಹೊರನಡೆದಿದ್ದಾರೆ. ಇದರಿಂದ ಅಲ್ಲಿ ನೆರೆದಿದ್ದ ಪ್ರೇಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ ವೇದಿಕೆಯಿಂದ ಹೊರನಡೆದ ಗಾಯಕ ಮತ್ತೆ ಬರಲೇ ಇಲ್ಲ ಇದರಿಂದ ಸಂಗೀತ ಕಾರ್ಯಕ್ರಮವನ್ನು ಅರ್ಧಕ್ಕೆ ಕೊನೆಗೊಳಿಸಬೇಕಾಯಿತು.
Program Warr Gya 😅😅#BilalSaeed pic.twitter.com/rjRK9SwSFL
— Zain Rajpoot (@ZAIN_MZQ) January 24, 2024
ಇದರಿಂದ ಕೋಪಗೊಂಡ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಸಂಗೀತಕಾರನ ವಿರುದ್ಧ ಕಿಡಿಕಾರಿದ್ದಾರೆ ಅಲ್ಲದೆ ಕೆಲವರು ಈತನನ್ನು ಅಮೆರಿಕದ ರಾಪರ್ ಕಾರ್ಡಿ ಬಿ ಗೆ ಹೋಲಿಸಿ ಕಾಮೆಂಟ್ ಮಾಡಿದ್ದಾರೆ. ಯಾಕೆಂದರೆ ಆತನೂ ಒಂದು ಕಾರ್ಯಕ್ರಮದಲ್ಲಿ ಇದೇ ರೀತಿ ಮೈಕ್ ಎಸೆದಿದ್ದ ಹಾಗಾಗಿ ಆತನಿಗೆ ಹೋಲಿಸಿ ಕಿಡಿಕಾರಿದ್ದಾರೆ.
ಸಂಗೀತ ಕಾರ್ಯಕ್ರಮದ ವೇಳೆ ಮೈಕ್ ಎಸೆದ ಕುರಿತು ಕೊನೆಗೂ ಮೌನ ಮುರಿದ ಪಾಕ್ ಸಂಗೀತಕಾರ ಬಿಲಾಲ್ ‘ ವೇದಿಕೆ ಎಂಬುದು ಯಾವತ್ತಿಗೂ ನನ್ನ ಪ್ರಪಂಚವಾಗಿದೆ; ಪ್ರದರ್ಶನ ನೀಡುವಾಗ ನನ್ನ ಮನಸ್ಸು ಸಂಪೂರ್ಣ ಪ್ರದರ್ಶನದ ಮೇಲಿರುತ್ತದೆ, ಪ್ರೇಕ್ಷಕರಿಗೆ ಯಾವುದೇ ರೀತಿಯಲ್ಲೂ ತೊಂದರೆ, ಕಿರಿಕಿರಿ ಆಗಬಾರದೆಂಬುದೇ ನನ್ನ ಗುರಿ, ಸಾಧ್ಯವಾದಷ್ಟು ಪ್ರೇಕ್ಷಕರಿಗೆ ಮನರಂಜನೆ ನೀಡುಬೇಕೆನ್ನುವುದು ನನ್ನ ಉದ್ದೇಶ ಇದಕ್ಕಾಗಿ ನನ್ನ ಅನಾರೋಗ್ಯ, ಒತ್ತಡ, ಚಿಂತೆಗಳನ್ನು ಮರೆತು ಬಿಡುತ್ತೇನೆ, ನನ್ನ ಅಭಿಮಾನಿಗಳಿಗಾಗಿ ನಾನು ಪ್ರದರ್ಶನ ಮಾಡುವಾಗ ಎಲ್ಲವನ್ನೂ ಬಿಟ್ಟುಬಿಡುತ್ತೇನೆ. ಮತ್ತು ಏನೇ ಆಗಲಿ, ನನಗೆ ಮತ್ತು ನನ್ನ ವೇದಿಕೆಗೆ ನನ್ನಿಂದ ಸಲ್ಲಬೇಕಾದ ಗೌರವಕ್ಕೆ ಏನೂ ಅಡ್ಡಿಯಾಗಬಾರದು ಎಂಬುದು ನನ್ನ ಧ್ಯೇಯ ಎಂದು ಹೇಳಿಕೊಂಡಿದ್ದಾರೆ.
‘ನಾನು ನನ್ನ ಅಭಿಮಾನಿಗಳನ್ನು ಹೆಚ್ಚು ಪ್ರೀತಿಸುತ್ತೇನೆ ಮತ್ತು ಕೆಲವೊಮ್ಮೆ ಆ ಪ್ರೀತಿ ಎರಡೂ ಕಡೆಯವರಿಗೂ ಅಗಾಧವಾಗಿ ಕಾಣುತ್ತದೆ. ಜನಸಂದಣಿಯಲ್ಲಿ ಯಾರೋ ಒಬ್ಬರು ಅನುಚಿತವಾಗಿ ವರ್ತಿಸುವುದು ಇದು ಮೊದಲ ಬಾರಿಗೆ ಅಲ್ಲ, ಆದರೆ ನಾನು ತಪ್ಪು ಪ್ರತಿಕ್ರಿಯೆ ನೀಡಿದ್ದು ಅದು ಮೊದಲ ಬಾರಿಗೆ! ನಾನು ಎಂದಿಗೂ ವೇದಿಕೆಯನ್ನು ಬಿಡಬಾರದಿತ್ತು,” ಎಂದು ಬರೆದುಕೊಂಡಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.