ನೆನಪಿನಂಗಳಕ್ಕೆ ಜಾರಿದ ಕರುನಾಡಿನ ಹೆಮ್ಮೆಯ ವಿಜಯ ಬ್ಯಾಂಕ್
ಎಂಬತ್ತೆಂಟು ವರ್ಷಗಳ ಅಮೋಘ ಸೇವೆ, ಮಂಗಳೂರಿನಲ್ಲಿ ಸ್ಥಾಪಿತವಾಗಿದ್ದ ಬ್ಯಾಂಕ್, ನಾಳೆ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನ
Team Udayavani, Mar 31, 2019, 6:13 AM IST
ಬೆಂಗಳೂರು: ವಿಜಯದಶಮಿ ದಿನದಂದು ತುಳುನಾಡು ಮಂಗಳೂರಿನಲ್ಲಿ ಆರಂಭವಾಗಿ ದೇಶದೆದೆಲ್ಲೆಡೆ ತನ್ನ ಶಾಖೆಗಳನ್ನು ವಿಸ್ತರಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು 88 ವರ್ಷಗಳ ಸೇವೆ ಸಲ್ಲಿಸಿದ “ವಿಜಯ ಬ್ಯಾಂಕ್’
ಶನಿವಾರ ತನ್ನ ಅಂತಿಮ ದಿನದ ಕಾರ್ಯಚಟುವಟಿಕೆ ಮುಕ್ತಾಯಗೊಳಿಸಿ ಇತಿಹಾಸದ ಪುಟ ಸೇರಿತು.
ಇಂದು(ಮಾ.31) ತೆರಿಗೆ ಸಂಬಂಧಿಸಿದ ಪ್ರಕ್ರಿಯೆ ಮಾತ್ರ ನಡೆಯಲಿರುವುದರಿಂದ ಶನಿವಾರವೇ (ಮಾ.30) ಬ್ಯಾಂಕ್‌ನ ಅಂತಿಮ ಕೆಲಸದ ದಿನವಾ ಗಿತ್ತು. ಇನ್ನು ಏ.1 ರಿಂದ ವಿಜಯ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನವಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದ
ಎಲ್ಲಾ ವಿಜಯ ಬ್ಯಾಂಕ್‌ನ ಹೆಸರಿನ ಮುಂದೆ ಬ್ಯಾಂಕ್ ಆಫ್ ಬರೋಡಾ ನಾಮಫಲಕ ಬೀಳಲಿದೆ. ಇದರ ಜತೆಗೆ 16,000 ಉದ್ಯೋಗಿಗಳು ಹಾಗೂ ಲಕ್ಷಾಂತರ ಗ್ರಾಹಕರ ಖಾತೆ, ಪಾಸ್ ಬುಕ್, ಚೆಕ್‌ಬುಕ್ , ಎಟಿಎಂಗಳು
ಕೂಡಾ ಬ್ಯಾಂಕ್ ಆಫ್ ಬರೋಡಾ ಹೆಸರಿಗೆ ವರ್ಗಾವಣೆ
ಆಗಲಿವೆ.
ಮಂಗಳೂರಿನಲ್ಲಿ ಅತ್ತಾವರ ಬಾಲಕೃಷ್ಣ ಶೆಟ್ಟಿ ಅವರು 1931 ಅಕ್ಟೋಬರ್ 23ರ ವಿಜಯ ದಶಮಿಯಂದು “ವಿಜಯ’ ಹೆಸರಿನಲ್ಲಿ ಆರಂಭಿಸಿದ ಈ ಬ್ಯಾಂಕ್ ದೇಶದ ಎಲ್ಲ ರಾಜ್ಯಗಳಲ್ಲಿ ಶಾಖೆಯನ್ನು ಹೊಂದಿದೆ. ರೈತರ,
ಕೃಷಿಕರ ಹಾಗೂ ಜನಸಾಮಾನ್ಯರ ಶ್ರಮದ ಫಲವಾಗಿಬ್ಯಾಂಕ್ ಅಂದಿನಿಂದ ಇಂದಿನವರೆಗೂ ಸದೃಢ ಸ್ಥಿತಿಯಲ್ಲಿಯೇ ಇತ್ತು. ಅಗ್ರ ಶ್ರೇಣಿಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಒಂದಾಗಿರುವ ವಿಜಯ ಬ್ಯಾಂಕ್ ದೇಶ ದಲ್ಲಿ 2,129 ಶಾಖೆ 2,000ಕ್ಕೂ ಹೆಚ್ಚು ಎಟಿಎಂ ಹೊಂದಿದೆ. ಮುಖ್ಯವಾಗಿ ಇದರ ಶೇ.60ರಷ್ಟು ಶಾಖೆಗಳು ಗ್ರಾಮೀಣ
ಪ್ರದೇಶದಲ್ಲಿದೆ. 2.79 ಲಕ್ಷ ಕೋಟಿ ರೂ. ವ್ಯವಹಾರ
ದಾಖಲಿಸಿದೆ. ಎನ್‌ಪಿಎ ಪ್ರಮಾಣ ಶೇ.5.4 ಆಗಿದೆ. ವಿಜಯ ಬ್ಯಾಂಕ್ ಜನಸಾಮಾನ್ಯರನ್ನು ಸಂಕೇತಿಸುವ “ಸಿಂಗಣ್ಣ”ಲಾಂಛನವನ್ನು ತನ್ನದಾಗಿಸಿಕೊಂಡಿತು. ಆದರೆ ಈಗ ಕೇಂದ್ರ ಸರ್ಕಾರದ ವಿಲೀನ ನೀತಿಯಿಂದ ಬ್ಯಾಂಕ್ ಅಸ್ತಿತ್ವ ಕಳೆದು ಕೊಳ್ಳುವುದರ ಜತೆಗೆ ಲಾಂಛನ ಕೂಡ ಇನ್ನಿಲ್ಲದಂತಾಗಿದೆ.
ಬೇಸರದ ನಡುವೆ ಬೀಳ್ಕೊಡುಗೆ: ಕೊನೆಯ ದಿನದ ಹಿನ್ನೆಲೆ ನಗರದ ಎಂಜಿ ರಸ್ತೆಯಲ್ಲಿರುವ ವಿಜಯ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾ ಗಿತ್ತು. ಇಲ್ಲಿ 600ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ವಿಲೀನ ಹಿನ್ನೆಲೆ ಯಲ್ಲಿ ಬಹುಪಾಲು ಹಿರಿಯ ಅಧಿಕಾರಿಗಳು ವರ್ಗಾವಣೆ ಯಾಗುತ್ತಿದ್ದಾರೆ. ಜತೆಗೆ ವಿಜಯ ಹೆಸರಿನಲ್ಲಿ ಕೊನೆಯ
ದಿನದ ಕೆಲಸ ಮಾಡುತ್ತಿದ್ದೇವೆ ಎಂದು ಆ ಹೆಸರಿಗೆ ವಿದಾಯ ಹೇಳಲು ಬ್ಯಾಂಕ್ ಸಿಬ್ಬಂದಿಯೆಲ್ಲರೂ ಸೇರಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ದೇನಾ ಬ್ಯಾಂಕ್
ಕೂಡಾ ವಿಲೀನ ವಿಜಯ ಬ್ಯಾಂಕ್ ಜತೆಗೆ ದೇನಾ ಬ್ಯಾಂಕ್ ಕೂಡಾ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗುತ್ತಿದೆ. ದೇನಾ ಬ್ಯಾಂಕ್ 1.72
ಲಕ್ಷ ಕೋಟಿ ರೂ. ವ್ಯವಹಾರ, 1,858 ಶಾಖೆ,13,440 ನೌಕರರನ್ನು ಹೊಂದಿದೆ. ಒಂದು ಕಡೆ ನಷ್ಟದಲ್ಲಿರುವ ದೇನಾ ಬ್ಯಾಂಕ್, ಮತ್ತೂಂದೆಡೆ
ಉತ್ತಮ ಹಣಕಾಸು ಸ್ಥಿತಿ ಹೊಂದಿರುವ ವಿಜಯ ಬ್ಯಾಂಕ್ ಇನ್ನು ಮುಂದೆ ಬ್ಯಾಂಕ್ ಆಫ್ ಬರೋಡಾ ಆಗಲಿವೆ.
ಕಳೆದ ಇಪ್ಪತ್ತು ವರ್ಷಗಳಿಂದ ವಿಜಯ ಬ್ಯಾಂಕ್‌ನಲ್ಲಿ ಕೆಲಸ
ಮಾಡುತ್ತಿದ್ದೇವೆ. ಈಗ ವಿಲೀನವಾಗುತ್ತಿರುವುದು ತುಂಬಾ ಬೇಸರವಾಗು
ತ್ತಿದೆ. ಕೆಲವರು ವರ್ಗಾವಣೆಗೊಳ್ಳು ತ್ತಿದ್ದು, ಹೊಸಬರು ಬರುತ್ತಿದ್ದಾರೆ.
ಗ್ರಾಮೀಣ ಜನರೊಂದಿಗೆ ಬೆಸೆತಿದ್ದ ವಿಜಯ ಹೆಸರಿನ ಬಂಧ ನಿಜಕ್ಕೂ
ಅವಿಸ್ಮರಣೀಯ. ಕೃಷ್ಣಮೂರ್ತಿ,ಬ್ಯಾಂಕ್ ಉದ್ಯೋಗಿ
ಕಾರ್ಯಕ್ರಮದಲ್ಲಿ ಸಿಬ್ಬಂದಿ ಗಳು ಬ್ಯಾಂಕ್ ನಡೆದು ಬಂದ ಹಾದಿ ಸೇರಿದಂತೆ ಅವರ ಮರೆಯಲಾಗದ ಅನುಭವಗಳನ್ನು ವಿನಿಮಯ ಮಾಡಿಕೊಂಡು. 60ಕ್ಕೂ ಹೆಚ್ಚು ಅಧಿಕಾರಿಗಳು 20ಕ್ಕೂ ಹೆಚ್ಚು ವರ್ಷ ಬ್ಯಾಂಕ್ ನಲ್ಲಿಯೇ ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ ಬಹುಪಾಲು ಮಂದಿ ಬಾವುಕರಾದದ್ದು ಕಂಡುಬಂದಿತು.
ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ: ವಿಜಯಾ ಬ್ಯಾಂಕಿನ ನಾಮಫಲಕ, ಚಿಹ್ನೆ ಬದಲಾಗುತ್ತಿದೆ ಹೊರತು ಬ್ಯಾಂಕ್ ಸಿಬ್ಬಂದಿ ಅಥವಾ ವಿಶ್ವಾಸರ್ಹ
ತೆಯಲ್ಲ. ಹೀಗಾಗಿ, ಯಾವ ಗ್ರಾಹಕರು ಹೆದರುವ ಅವಶ್ಯಕತೆ ಇಲ್ಲ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದರು. ಈ ಹಿಂದೆ ಸ್ಟೇಟ್
ಬ್ಯಾಂಕ್‌ನೊಂದಿಗೆ ಅದರ ಸಹವರ್ತಿ ಬ್ಯಾಂಕುಗಳು ವಿಲೀನವಾದಂತೆ ಏ. 1ರಂದು ದೇಶದ ಮೂರು (ವಿಜಯ, ದೇನಾ, ಬ್ಯಾಂಕ್ ಆಫ್ ಬರೋಡ)
ಬ್ಯಾಂಕುಗಳು ವಿಲೀನವಾಗುತ್ತಿವೆ. ಹೀಗಾಗಿ, ಗ್ರಾಹಕರ ಪಾಸುºಕ್, ಚೆಕ್ ಬುಕ್, ಎಟಿಎಂನಲ್ಲಿ ಬದಲಾವಣೆಯಾಗಲಿವೆ. ಜತೆಗೆ ಬ್ಯಾಂಕ್ ನಿಯಮಗಳಲ್ಲಿ ಒಂದಿಷ್ಟು ತಿದ್ದುಪಡಿಯಾಗಲಿವೆ. ಆಗಂತ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ನಮ್ಮ ಸೇವೆಯಲ್ಲಿ ಯಾವುದೇ ತರಹದ ಸಮಸ್ಯೆ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಹಂತ ಹಂತವಾಗಿ ಬದಲಾವಣೆ: ವಿಲೀನ ಪ್ರಕ್ರಿಯೆ ರಾತ್ರೋ ರಾತ್ರಿ ಆಗುವ ಕೆಲಸವಲ್ಲ. ಗ್ರಾಹಕರ ವಿಶ್ವಾಸ ಕಳೆದು ಕೊಳ್ಳಬಾರದು ಎಂಬ ಉದ್ದೇಶದಿಂದ ಬದಲಾವಣೆಯನ್ನು ಹಂತ ಹಂತವಾಗಿ ಮಾಡಲಾಗು
ತ್ತದೆ. ಮೊದಲು ನಾಮಫಲಕದಲ್ಲಿ ವಿಜಯ ಹೆಸರಿನ ಕೆಳ ಭಾಗದಲ್ಲಿ “ಇನ್ನು ಮುಂದೆ ಬ್ಯಾಂಕ್ ಆಫ್ ಬರೋಡ” ಎಂದು ಬರೆಯಲಾಗುತ್ತದೆ. ಆ ನಂತರ
ಆಂತರಿಕ ನಿಯಮಗಳು ಬದಲಾಯಿಸಿಕೊಳ್ಳುತ್ತಾ ಹೋಗಿ ಮುಂದಿನ 6 ರಿಂದ 8 ತಿಂಗಳಲ್ಲಿ ಪೂರ್ಣ ಪ್ರಮಾಣದ ಬದಲಾವಣೆಯಾಗಲಿದೆ ಎಂದು
ಬ್ಯಾಂಕ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದರು.
ವಿಜಯ ಹೆಸರಿನೊಂದಿಗೆ ಉದ್ಯೋಗಿಗಳ ಕೊನೆಯ ಸೆಲ್ಪಿ
ವಿಜಯ ಹೆಸರು ಇನ್ನು ಮುಂದೆ ಬ್ಯಾಂಕ್ ಆಫ್ ಬರೋಡ ಎಂದು ಬದಲಾಗಲಿರುವ ಹಿನ್ನೆಲೆ ಕೇಂದ್ರ ಕಚೇರಿ ಸಿಬ್ಬಂದಿಗಳು ಬೇಸರದ
ನಡುವೆಯೂ ಕಚೇರಿ ಮುಂಭಾಗ ಇರುವ “ವಿಜಯ ಬ್ಯಾಂಕ್” ಎಂಬ ದೊಡ್ಡ ನಾಮಫಲಕದ ಮುಂದೆ ನಿಂತು ಸೆ#ಲ್ಪಿ ತೆಗೆದುಕೊಂಡರು. ಬ್ಯಾಂಕ್‌ನ ವಿವಿಧ ವಿಭಾಗದಲ್ಲಿ ಸಿಹಿ ಹಂಚಿ ವಿಜಯ ಎಂಬ
ಹೆಸರಿಗೆ ಬೀಳ್ಕೊಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.