ಮದ್ಯದ ಅಮಲಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಈಜಲು ಹೋದವ ನೀರುಪಾಲು : ಮುಗಿಲು ಮುಟ್ಟಿದ ಆಕ್ರಂದನ
ಇದೊಂದು ವ್ಯವಸ್ಥಿತ ಕೊಲೆ ಎಂದ ಕುಟುಂಬಸ್ಥರು
Team Udayavani, May 9, 2022, 8:14 PM IST
ವಿಜಯಪುರ : ಕುಡಿತ ಮತ್ತಿನಲ್ಲಿ ಬೆಟ್ಟಿಂಗ್ ಹಣಕ್ಕಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೆರೆಯಲ್ಲಿ ಈಜಲು ಮುಂದಾದ ವ್ಯಕ್ತಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ದ್ಯಾಬೇರಿ ಗ್ರಾಮದಲ್ಲಿ ನಡೆದಿದೆ.
ಮೃತನ ಕುಟುಂಬದವರು ಇದನ್ನು ವ್ಯವಸ್ಥಿತ ಹತ್ಯೆ ಎಂದು ಆರೋಪಿಸಿದ್ದು, ಪೊಲೀಸರು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ದ್ಯಾಬೇರಿ ಗ್ರಾಮದ 45 ವರ್ಷದ ಪ್ರಕಾಶ ಮೋರೆ ಮೃತ ದುರ್ದೈವಿ. ಭಾನುವಾರ ಸಂಜೆ ಸ್ನೇಹಿತರೊಂದಿಗೆ ಸೇರಿ ಮದಭಾವಿಗೆ ಹೋಗಿದ್ದಾಗ ಮದ್ಯ ಸೇವನೆ ಮಾಡಿದ್ದ.
ಈ ಹಂತದಲ್ಲಿ ಜೊತೆಗಿದ್ದ ಸ್ನೇಹಿತರಾದ ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಹಾಗೂ ಬಸವರಾಜ ನಾಟಿಕಾರ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜುವ 20 ಸಾವಿರ ರೂ. ಬೆಟ್ಟಿಂಗ್ ಕಟ್ಟಿದ್ದರು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಈಜುತ್ತ ತಮ್ಮೂರ ಕೆರೆಯ ಒಂದು ದಡದಿಂದ ಇನ್ನೊಂದು ದಡ ಮುಟ್ಟುವ ಬೆಟ್ಟಿಂಗ್‍ಗಾಗಿ ಪ್ರಕಾಶ ಮೋರೆಯನ್ನು ಕೆರೆಯಲ್ಲಿ ಈಜಲು ಇಳಿಸಿದ್ದರು.
ಈ ವೇಳೆ ಜೊತೆಗಿದ್ದ ಸ್ನೇಹಿತರಾದ ಗಣಪತಿ ಧನವಡೆ, ಸಂತೋಷ ಕಂಬಾರ, ಬಾಹುಸಾಬ್ ಸಿಂದೆ, ಹಾಗೂ ಬಸವರಾಜ ನಾಟಿಕಾರ ಇವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಈಜಿದರೆ 20 ಸಾವಿರ ರೂ. ಕೊಡುವುದಾಗಿ ಬೆಟ್ಟಿಂಗ್ ಕಟ್ಟಿದ್ದರು. ಇದಕ್ಕೆ ಒಪ್ಪಿದ ಪ್ರಕಾಶ ಮೇ 8 ರಂದು ಸಂಜೆ 5 ಗಂಟೆಗೆ ದ್ಯಾಬೇರಿ ಪಕ್ಕದ ಕೆರೆಯಲ್ಲಿ ಮೊದಲೇ ಮದ್ಯದ ಅಮಲಿನಲ್ಲಿದ್ದ ಪ್ರಕಾಶ ಇಪ್ಪತ್ತು ಸಾವಿರದ ಆಸೆಗೆ ಕಣ್ಣಿಗೆ ಬಟ್ಟೆ ಕಟ್ಟಿ ನೀರಿಗೆ ದುಮುಕಿದ್ದಾನೆ ಆದರೆ ಮದ್ಯದ ನಶೆಯಲ್ಲಿದ್ದ ಪ್ರಕಾಶನಿಗೆ ಈಜಲು ಆಗದೆ ನೀರಿನಲ್ಲಿ ಮುಳುಗಿದ್ದಾನೆ, ಕೆಲ ಹೊತ್ತು ಕಳೆದರೂ ಮೇಲೆ ಬಾರದಿರುವುದನ್ನು ಕಂಡ ಅಲ್ಲಿದ್ದವರು ಪೊಲೀಸರಿಗೆ, ಅಗ್ನಿಶಾಮಕಕ್ಕೆ ವಿಚಾರ ತಿಳಿಸಿದ್ದಾರೆ ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು, ಅಗ್ನಿಶಾಮಕ ಹಾಗೂ ನುರಿತ ಈಜುಗಾರರೊಂದಿಗೆ ಶೋಧ ಕಾರ್ಯ ನಡೆಸಿದ್ದರೂ ಪ್ರಕಾಶ ಮಾತ್ರ ಪತ್ತೆಯಾಗಿರಲಿಲ್ಲ.
ಇದನ್ನೂ ಓದಿ : ಶನಿವಾರಸಂತೆ: ಹೊಳೆಗೆ ಈಜಲು ಹೋದ ಬಾಲಕ ನೀರು ಪಾಲು
ಸೋಮವಾರ ಮಧ್ಯಾಹ್ನ ಪ್ರಕಾಶ ಶವವನ್ನು ಕೆರೆಯಿಂದ ಹೊರ ತೆಗೆಯಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಮೃತನ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಘಟನೆಯನ್ನು ಪ್ರಕಾಶ ಕುಟುಂಬದವರು ಇದೊಂದು ವ್ಯವಸ್ಥಿತ ಹತ್ಯೆ ಎಂದು ಆರೋಪಿಸಿದ್ದಾರೆ. ಮನೆಯಲ್ಲಿದ್ದ ನಮ್ಮ ತಮ್ಮ ಪ್ರಕಾಶನನ್ನು ಕರೆದೊಯ್ದು ವಿಪರೀತ ಮದ್ಯ ಸೇವನೆ ಮಾಡಿಸಿ, ಉದ್ದೇಶಪೂರ್ವಕವಾಗಿ ಕೆರೆ ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾರೆ ಎಂದು ಮೃತನ ಸಹೋದರ ವಿಠ್ಠಲ ಮೋರೆ ದೂರು ನೀಡಿದ್ದಾರೆ.
ಸ್ನೇಹಿತರ ಮೂರ್ಖ ಸಾಹಸದಿಂದಾಗಿ ಪ್ರಕಾಶ ಜೀವ ಕಳೆದುಕೊಂಡಿದ್ದು, ಪತ್ನಿ ಹಾಗೂ ನಾಲ್ಕು ಮಕ್ಕಳನ್ನು ಅನಾಥರಾಗಿದ್ದಾರೆ. ಮೃತ ಪ್ರಕಾಶನ ಪತ್ನಿ ಸುನೀತಾ ಮೋರೆ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ನನ್ನ ಗಂಡನ ಸಾವಿನಲ್ಲಿ ಸಂಶಯವಿದೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹೆಬ್ಬಾಳ್ಕರ್‌ಗೆ ರವಿ ಅಶ್ಲೀಲ ಪದ ಬಳಸಿದ್ದು ನಿಜ: ಯತೀಂದ್ರ ಹೇಳಿಕೆ
MLA ಮುನಿರತ್ನ ವಿರುದ್ಧ ಮತ್ತೊಂದು ಜಾತಿ ನಿಂದನೆ ಪ್ರಕರಣ
BJP; ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದು ಬಿ.ಪಿ. ಹರೀಶ್ ಮಾತ್ರ!
High Court: ಪೌರ ಕಾರ್ಮಿಕರ ಸೇವೆ ಕಾಯಂಗೊಳಿಸಲು ವಿಫಲ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್
Kalaburagi: ಬಂಧನಕ್ಕೆ ಹೋದ ಪೊಲೀಸರ ಮೇಲೆ ಹಲ್ಲೆಗೆ ಯತ್ನ, ಆರೋಪಿಗೆ ಗುಂಡೇಟು