Vikram Gowda: ಹೊಟೇಲ್ ಸಪ್ಲಾಯರ್ ಆಗಿದ್ದಾಗ ನಕ್ಸಲ್ ಸಂಪರ್ಕ
ನಕ್ಸಲ್ ಸಿದ್ಧಾಂತದ ವ್ಯಕ್ತಿಗಳ ಪರಿಚಯ
Team Udayavani, Nov 21, 2024, 7:25 AM IST
ಉಡುಪಿ: ನಕ್ಸಲ್ ಸಿದ್ಧಾಂತದತ್ತ ವಾಲುವ ಮೊದಲು ವಿಕ್ರಂ ಗೌಡ ಮುಖ್ಯವಾಗಿ ಮಂಗಳೂರು ಮತ್ತು ಹೆಬ್ರಿಯಲ್ಲಿ ಹೊಟೇಲ್ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ.
ಮೊದಲು ಮಂಗಳೂರಿನ ಹೊಟೇಲ್ ಒಂದರಲ್ಲಿ ಸ್ವಲ್ಪ ಸಮಯ ಕೆಲಸ ಮಾಡಿಕೊಂಡಿದ್ದ. ಅನಂತರ ಹೆಬ್ರಿಯ ಹೊಟೇಲ್‌ನಲ್ಲಿ ಸಪ್ಲಾಯರ್ ಆಗಿ ಕೆಲಸ ಮಾಡುತ್ತಿದ್ದ. ಈ ಸಂದರ್ಭ ಬೇರೆ ಬೇರೆಯವರಿಗೆ ಹೊಟೇಲ್‌ನಿಂದ ಆಹಾರ ಪಾರ್ಸೆಲ್ ಕೊಂಡೊಯ್ಯುತ್ತಿದ್ದ. ಇದೇ ವೇಳೆ ನಕ್ಸಲ್ ಸಿದ್ಧಾಂತದ ವ್ಯಕ್ತಿಗಳ ಪರಿಚಯ ಆಗಿತ್ತು. ಕ್ರಮೇಣ ಅವರ ಜತೆ ಸೇರಿ ಊರು ಬಿಟ್ಟಿದ್ದ ಎಂದು ತಿಳಿದುಬಂದಿದೆ.
8 ದಿನ ಮುಂಬಯಿಯಲ್ಲಿದ್ದ
ವಿಕ್ರಂ ಗೌಡನ ತಂಗಿ ಸುಗುಣಾ ಪತಿಯ ಜತೆ 10 ವರುಷ ಕಾಲ ಮುಂಬಯಿಯಲ್ಲಿ ವಾಸವಿದ್ದರು. ಈ ವೇಳೆ ವಿಕ್ರಂ ಗೌಡ ಮುಂಬಯಿಯ ತಂಗಿ-ಭಾವನ ಮನೆಗೆ ಹೋಗಿ ಬರುತಿದ್ದ. ಅಲ್ಲಿ ಉದ್ಯೋಗಕ್ಕೆ ಸೇರಿರಲಿಲ್ಲ. ಎಂಟು ದಿನ ಮಾತ್ರ ಅಲ್ಲಿ ವಾಸ್ತವ್ಯವಿದ್ದ ಎಂದು ಮನೆಯ ಮೂಲಗಳು ತಿಳಿಸಿವೆ. ಕಿರಿಯ ಸಹೋದರ ಸುರೇಶ್ ಗೌಡ ತಂಗಿ ಜೊತೆ ಮುಂಬಯಿಯಲ್ಲಿ ಹೊಟೇಲಿನಲ್ಲಿ ಕೆಲಸ ಮಾಡಿ ಊರಿಗೆ ಮರಳಿ ಹೆಬ್ರಿ ಹೊಟೇಲಿಗೆ ಸೇರಿದ್ದು, ಪ್ರಸ್ತುತ ಹೆಬ್ರಿ ಪರಿಸರದಲ್ಲಿ ಪ್ರತ್ಯೇಕವಾಗಿ ವಾಸವಿದ್ದಾರೆ.
ವಿಕ್ರಂನ ಶವ ಸಾಗಿಸಿದ್ದು ಗೆಳೆಯ
ವಿಕ್ರಂ ಗೌಡ ಎನ್‌ಕೌಂಟರ್‌ಗೆ ಬಲಿಯಾದ ಬಳಿಕ ಆಸ್ಪತ್ರೆಯಿಂದ ಆತನ ಶವ ಸಾಗಾಟ ಮಾಡಿದ ಆ್ಯಂಬುಲೆನ್ಸ್ ಚಾಲಕ ವಿಕ್ರಂನ ಜತೆ ಮಂಗಳೂರಿನ ಹೊಟೇಲಿನಲ್ಲಿ ಜತೆಯಾಗಿ ಕೆಲಸ ಮಾಡಿಕೊಂಡಿದ್ದವರು.
ವಿಕ್ರಂಗೆ ಆರೋಗ್ಯ ಸಮಸ್ಯೆ ಇತ್ತೇ?
ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದ ವಿಕ್ರಂ ಗೌಡ ಕೆಲವು ಸಮಯದಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದನೇ ಎಂಬ ಶಂಕೆ ವ್ಯಕ್ತವಾಗಿದೆ. 46ರ ಹರೆಯದ ವಿಕ್ರಂ ಗೌಡ ಹಿಂದೊಮ್ಮೆ ಗಟ್ಟಿಮುಟ್ಟಾಗಿದ್ದ ಮಾಹಿತಿ ಇತ್ತು. ಆದರೆ ಈಗ ತುಂಬ ಸಣಕಲು ಆಗಿರುವುದನ್ನು ಬುಧವಾರ ಅಂತ್ಯಕ್ರಿಯೆಯ ವೇಳೆ ಸ್ಥಳೀಯರು ಗಮನಿಸಿದ್ದಾರೆ. ಈ ಸ್ಥಿತಿಯಲ್ಲಿ ಪೀತಬೈಲು ಎಂಬ ಕಾಡಂಚಿನ ಗ್ರಾಮೀಣ ಪ್ರದೇಶ ಸಹಿತ ಪಶ್ಚಿಮ ಘಟ್ಟದ ದಟ್ಟ ಕಾಡಿನಲ್ಲಿ ಈತ ಹೇಗೆ ಓಡಾಡುತ್ತಿದ್ದ ಎಂಬುದೇ ಕುತೂಹಲಕಾರಿ ಎಂದು ಸ್ಥಳೀಯರು ಅಭಿಪ್ರಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.