ವಿಡಿಯೋ ವೈರಲ್: 60 ವರ್ಷದ ಕೂಲಿ ಕಾರ್ಮಿಕ ಈಗ ಸ್ಟೈಲಿಷ್ ರೂಪದರ್ಶಿ
ಮಮ್ಮಿಕ್ಕಾನ್ ಅವರನ್ನು ತಮ್ಮ ವೆಡ್ಡಿಂಗ್ ಸೂಟ್ ಕಂಪನಿಯ ರೂಪದರ್ಶಿಯಾಗುವಂತೆ ಆಹ್ವಾನ ನೀಡಿದ್ದರು.
Team Udayavani, Feb 15, 2022, 4:36 PM IST
ತಿರುವನಂತಪುರಂ: 60 ವರ್ಷದ ದಿನಗೂಲಿ ಕಾರ್ಮಿಕರೊಬ್ಬರು ಇದೀಗ ಅಂತರ್ಜಾಲ ತಾಣ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗಿ ಎಲ್ಲರ ಗಮನಸೆಳೆಯುತ್ತಿದ್ದಾರೆ. ಹೌದು ಕೇರಳದ ಕೋಝಿಕೋಡ್ ಜಿಲ್ಲೆಯ ಮಮ್ಮಕ್ಕಾ ಎಂಬ ದಿನಗೂಲಿ ಕಾರ್ಮಿಕ ಈಗ ರೂಪದರ್ಶಿಯಾಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ಕೇಳಿದವರಿಗೆ ಖಡಕ್ ಉತ್ತರ ನೀಡಿದ ನಾಯಕ ರೋಹಿತ್ ಶರ್ಮಾ
60 ವರ್ಷದ ಮಮ್ಮಕ್ಕಾ ಕೋಝಿಕೋಡ್ ನಲ್ಲಿ ತಲೆಗೊಂದು ಕೆಂಪು ಮುಂಡಾಸು ಹಾಗೂ ಬಣ್ಣ ಮಾಸಿದ ಲುಂಗಿ ಸುತ್ತಿಕೊಂಡು ಕೂಲಿ ಕೆಲಸ ಮಾಡಿಕೊಂಡು ಓಡಾಡಿಕೊಂಡಿದ್ದರು. ಆದರೆ ಫೋಟೋಗ್ರಾಫರ್ ಶರೀಕ್ ವಯಾಲಿಲ್ ಎಂಬವರು ಈ ಹಿಂದೆ ಮಮ್ಮಕ್ಕಾನ್ ಅವರ ಫೋಟೊ ತೆಗೆದು ತಮ್ಮ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಕುತೂಹಲವೆಂದರೆ ಈ ದಿನಗೂಲಿ ಕಾರ್ಮಿಕ ಮಮ್ಮಕ್ಕಾನ್ ಅವರ ಫೋಟೊ ವೀಕ್ಷಿಸಿದವರು ಮಲಯಾಳಂ ನಟ ವಿನಾಯಕನ್ ಅವರಿಗೆ ಹೋಲಿಸುವ ಮೂಲಕ ವೈರಲ್ ಆಗಿತ್ತು ಎಂದು ಮನೋರಮಾ ನ್ಯೂಸ್ ವರದಿ ಮಾಡಿದೆ.
ನಂತರ ಶರೀಕ್ ಅವರು ಮಮ್ಮಿಕ್ಕಾನ್ ಅವರನ್ನು ತಮ್ಮ ವೆಡ್ಡಿಂಗ್ ಸೂಟ್ ಕಂಪನಿಯ ರೂಪದರ್ಶಿಯಾಗುವಂತೆ ಆಹ್ವಾನ ನೀಡಿದ್ದರು. ತದನಂತರ ಮಮ್ಮಿಕ್ಕಾನ್ ಅವರನ್ನು ಮೇಕಪ್ ಮೂಲಕ ಹೊಸ ಲುಕ್ ಕೊಡಿಸಿ, ಫೋಟೋ ಶೂಟ್ ಮಾಡಿಸಿ, ಆ ವಿಡಿಯೋವನ್ನು ತಮ್ಮ ಎಸ್ ಎಚ್ ಕೆ ಡಿಜಿಟಲ್ ಹೆಸರಿನ ಇನ್ಸ್ ಟಾಗ್ರಾಮ್ ಖಾತೆಯಲ್ಲಿ ಅಪ್ ಲೋಡ್ ಮಾಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.