Viral Video: ಆಡಿ ಕಾರಿನಲ್ಲಿ ಬಂದು ರಸ್ತೆ ಬದಿ ತರಕಾರಿ ಮಾರುವ ಕೇರಳದ ರೈತ…
Team Udayavani, Sep 30, 2023, 3:54 PM IST
ಕೇರಳ: ಸಾಮಾಜಿಕ ಜಾಲತಾಣದಲ್ಲಿ ದಿನಾಲೂ ಒಂದಕ್ಕಿಂತ ಒಂದು ವಿಶೇಷವಾದ ವಿಡಿಯೋಗಳು ಹರಿದಾಡುತ್ತಿರುತ್ತವೆ ಕೆಲವೊಂದು ಮನಸ್ಸಿಗೆ ಕಿರಿ ಕಿರಿ ನೀಡಿದರೆ ಇನ್ನೂ ಕೆಲವು ನಮ್ಮ ಜೀವನಕ್ಕೆ ಪ್ರೇರಣೆ ನೀಡುವಂತ್ತಿರುತ್ತದೆ. ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು ನೆಟ್ಟಿಗರಿಂದ ಭಾರಿ ಪ್ರಶಂಸೆ ಕೂಡಾ ವ್ಯಕ್ತವಾಗಿದೆ.
ಕೇರಳ ಮೂಲದ ರೈತರೊಬ್ಬರು ಆಡಿ ಎ4 ಐಷಾರಾಮಿ ಸೆಡಾನ್ ಕಾರಿನಲ್ಲಿ ಬಂದು ರಸ್ತೆ ಬದಿಯಲ್ಲಿ ತರಕಾರಿ ಮಾರಾಟ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಸೋಷಿಯಲ್ ಮೀಡಿಯಾದಲ್ಲಿ ಸದಾ ಕ್ರಿಯಾಶೀಲರಾಗಿರುವ ಸುಜಿತ್ ‘ವೆರೈಟಿ ಫಾರ್ಮರ್’ ಎಂಬ ಇನ್‌ಸ್ಟಾಗ್ರಾಮ್ ಚಾನೆಲ್ ಮೂಲಕ ಪ್ರಸಿದ್ದಿ ಪಡೆದಿದ್ದಾನೆ. ಈ ವ್ಯಕ್ತಿ ತನ್ನದೇ ತೋಟದಲ್ಲಿ ಬೆಳೆದ ತರಕಾರಿಗಳನ್ನು ಕಟಾವು ಮಾಡಿ ತಂದು ನಗರದ ಪ್ರಮುಖ ರಸ್ತೆ ಬದಿಯಲ್ಲಿ ಮಾರಾಟ ಮಾಡುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇತ್ತೀಚಿಗೆ ಸುಜಿತ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ನಲ್ಲಿ ಅಪ್‌ಲೋಡ್ ಮಾಡಿದ ಕ್ಲಿಪ್ ಒಂದು ಸಿಕ್ಕಾಪಟ್ಟೆ ವೈರಲ್ ಆಗಿದೆ ಅದು ಹೇಗೆಂದರೆ ಸುಜಿತ್ ತೋಟದಲ್ಲಿ ಬೆಳೆದ ಹರಿವೆ ಸೊಪ್ಪನ್ನು ಕಟಾವು ಮಾಡಿ ಬಳಿಕ ಮಾರುಕಟ್ಟೆಯಲ್ಲಿ ಸೊಪ್ಪು ಮಾರಲು ಆಡಿ ಎ4 ಕಾರಿನಲ್ಲಿ ಬರುತ್ತಾನೆ ಬಳಿಕ ರಿಕ್ಷಾದಲ್ಲಿದ್ದ ತರಕಾರಿ ಸೊಪ್ಪನ್ನು ಒಂದು ಟಾರ್ಪಲ್ ಬಿಡಿಸಿ ಅದರಲ್ಲಿ ಹಾಕಿ ರಸ್ತೆ ಬದಿಯಲ್ಲೇ ಜನರಿಗೆ ಮಾರಾಟ ಮಾಡಿ ಬಳಿಕ ತನ್ನ ಕಾರಿನಲ್ಲೇ ಹೊರಟು ಹೋಗುತ್ತಾನೆ.
View this post on Instagram
ಈ ವಿಡಿಯೋ ಅಪ್ ಲೋಡ್ ಆದ ಎರಡೇ ದಿನಕ್ಕೆ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದು ಅಲ್ಲದೆ ನೆಟ್ಟಿಗರಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದೆ.
ಅಂದಹಾಗೆ ಸುಜಿತ್ ತನ್ನದೇ ಪರಿಶ್ರಮದಿಂದ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದು ತಾನೊಂದು ಐಷಾರಾಮಿ ಕಾರು ತೆಗೆದುಕೊಳ್ಳಬೇಕು ಎಂಬ ಆತನ ಅಸೆ ಈಡೇರಿದೆ.
ಇದನ್ನೂ ಓದಿ:World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
India Gate; ಅಸಹ್ಯ ಟವೆಲ್ ಡ್ಯಾನ್ಸ್ ಮಾಡಿದ ಮಾಡೆಲ್: ಆಕ್ರೋಶ
Viral: ಮದುವೆ ಸಂಭ್ರಮದಲ್ಲಿ 20 ಲಕ್ಷ ರೂಪಾಯಿಯನ್ನು ಗಾಳಿಯಲ್ಲಿ ಎಸೆದ ಅತಿಥಿಗಳು.!
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.