ಜಿಲ್ಲಾಡಳಿತದ ಎಚ್ಚರಿಕೆ ನಡುವೆಯೂ ವಿರೂಪಾಪೂರಗಡ್ಡಿ ರೆಸಾರ್ಟ್ ಗಳು ಬುಕ್
ಮತ್ತೆ ಪ್ರವಾಹದ ಭೀತಿಯಲ್ಲಿ ಮಾಲೀಕರು
Team Udayavani, Oct 26, 2019, 8:14 PM IST
ಗಂಗಾವತಿ: ಜಿಲ್ಲಾಡಳಿತದ ಮುನ್ನೆಚ್ಚರಿಕೆ ಮಧ್ಯೆದಲ್ಲಿಯೂ ತಾಲ್ಲೂಕಿನ ವಿರೂಪಾಪೂರಗಡ್ಡಿ ರೆಸಾರ್ಟ್ ಗಳಲ್ಲಿ ರೂಂಗಳು ಬುಕ್ ಆಗಿವೆ. ಈ ಮಧ್ಯೆ ತುಂಗಭದ್ರಾ ಡ್ಯಾಂ ಒಳಹರಿವು ಹೆಚ್ಚಾಗಿದ್ದು ನದಿಗೆ ಶನಿವಾರ ರಾತ್ರಿ 50ಸಾವಿರ ಕ್ಯೂಸೆಕ್ಸ್ ನೀರು ಬಿಡುವ ಸಾಧ್ಯತೆ ಇದ್ದು ಪ್ರವಾಸಿಗರನ್ನು ವಾಪಸ್ ಕಳುಹಿಸುವಂತೆ ವಿರೂಪಾಪೂರಗಡ್ಡಿ ಸುತ್ತಲಿನ ಗ್ರಾಮಗಳಲ್ಲಿ ತಾಲೂಕು ಆಡಳಿತದಿಂದ ಡಂಗೂರ ಹಾಕಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಡಂಗೂರ ಹಾಕಿದ ನಂತರ ಕೆಲ ಪ್ರವಾಸಿಗರು ಸ್ವಯಂ ಪ್ರೇರಣೆಯಿಂದ ರೂಂಗಳನ್ನು ಖಾಲಿ ಮಾಡಿದ್ದಾರೆ. ವಿರೂಪಾಪೂರಗಡ್ಡಿಯಲ್ಲಿರುವ ರೆಸಾರ್ಟ್ ಗಳ ಪೈಕಿ ಲಕ್ಷ್ಮಿ ಗೋಲ್ಡನ್ ಬೀಚ್,ಸಾಯಿಪ್ಲಾಜಾ ಹಾಗೂ ಶಾಂತಿಗೆಸ್ಟ್ ಸೇರಿ ಕೆಲವು ರೆಸಾರ್ಟ್ ಗಳು ಮುಚ್ಚಿದ್ದು ಬಹುತೇಕ ರೆಸಾರ್ಟ್ ಗಳು ಆರಂಭವಾಗಿ ವ್ಯವಹಾರ ನಡೆಸಿವೆ.
ಮುನ್ನೆಚ್ಚರಿಕೆ: ತುಂಗಭದ್ರಾ ನದಿಗೆ ಹೆಚ್ಚುವರಿ ನೀರು ಬಿಡುವ ಸಾಧ್ಯತೆ ಇರುವುದರಿಂದ ವಿರೂಪಾಪೂರಗಡ್ಡಿ ಹಾಗೂ ನದಿ ಪಾತ್ರದ ಗ್ರಾಮಗಳಲ್ಲಿ ಡಂಗೂರ ಹಾಕಲಾಗಿದೆ ಎಂದು ತಹಸೀಲ್ದಾರ್ ಎಲ್.ಡಿ.ಚಂದ್ರಕಾಂತ ಉದಯವಾಣಿ ಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.