ಉಳ್ಳಾಲ : ಲವ್ ಜಿಹಾದ್ ವಿರುದ್ಧ ಜನಜಾಗೃತಿ ಆಂದೋಲನ, ಪ್ರತಿಭಟನೆ ; ಹಲವರ ಬಂಧನ
Team Udayavani, Aug 11, 2021, 7:47 PM IST
ಉಳ್ಳಾಲ : ಜಿಹಾದಿ ಭಯೋತ್ಪಾದಕ ಚಟುವಟಿಕೆಗೆ ಲವ್ ಜಿಹಾದ್‍ಗೆ ಒಳಗಾದ ಹೆಣ್ಣುಮಕ್ಕಳ ಬಳಕೆಯಾಗುತ್ತಿದ್ದು, ಇದಕ್ಕೆ ಕಠಿಣ ಕಾನೂನು ತರಬೇಕು ಎಂದು ಆಗ್ರಹಿಸಿ ಉಳ್ಳಾಲ ತಾಲೂಕಿನ ಪ್ರತೀ ಜಂಕ್ಷನ್‍ಗಳಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಜನಜಾಗೃತಿ ಆಂದೋಲನ ನಡೆಸಿದ್ದು ಬಳಿಕ ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಆಂದೋಲನ ಮಾಡುತ್ತಿದ್ದ ಕಾರ್ಯಕರ್ತರು ಇತ್ತೀಚೆಗೆ ಎನ್ ಐಎ ದಾಳಿ ನಡೆಸಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿರುವ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಬಿ.ಎಂ ಇದಿನಬ್ಬ ಅವರ ಪುತ್ರನ ಮನೆಗೆ ನುಗ್ಗಲು ಯತ್ನಿಸಿದ್ದು ಪೊಲೀಸರು ತಡೆದು ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡ ಘಟನೆ ನಡೆಯಿತು.
ಉಳ್ಳಾಲದಲ್ಲಿಯೂ ಇಂತಹ ಲವ್ ಜಿಹಾದ್‍ಗೆ ಒಳಗಾಗಿರುವ ಮಹಿಳೆ ಸಿರಿಯಾ ಮೂಲದ ಭಯೋತ್ಪಾದಕ ಸಂಘಟನೆಗಳ ಸಂಪರ್ಕದಲ್ಲಿದ್ದು, ಉಳ್ಳಾಲ ಬಯೋತ್ಪಾದಕ ತಾಣವಾಗುತ್ತಿದೆ. ಗ್ರಾಮಮಟ್ಟದಲ್ಲಿ ಹಿಂದೂ ಯುವತಿಯರು ಜಾಗೃತರಾಗಬೇಕು ಮತ್ತು ಲವ್ ಜಿಹಾದ್‍ಗೆ ಕಠಿಣ ಕಾನೂನು ಜಾರಿಯಾಗಬೇಕು ಎಂದು ಪ್ರತಿಭಟನಾ ಕಾರರು ಆಗ್ರಹಿಸಿದರು.
ಉಳ್ಳಾಲ ಮಾಸ್ತಿಕಟ್ಟೆಯಲ್ಲಿ ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಇದಿನಬ್ಬ ಪುತ್ರ ಬಿ.ಎಂ ಬಾಷಾ ಮನೆಗೆ ಎನ್ ಐಎ ದಾಳಿ ನಡೆಸಿ ಆತನ ಪುತ್ರನನ್ನು ಬಂಧಿಸಿತ್ತು. ಅಲ್ಲದೆ ಈ ಹಿಂದೆಯೂ ಮನೆಯ ಒಂದು ಸದಸ್ಯೆ ಉಗ್ರ ಸಂಘಟನೆಗಳ ಜೊತೆಗೆ ನಂಟು ಹೊಂದಿ ಸಿರಿಯಾ ದೇಶಕ್ಕೆ ತೆರಳಿದ್ದಳು. ಜೊತೆಗೆ ಮನೆಯಲ್ಲಿ ಲವ್ ಜಿಹಾದ್ ಮೋಲಕ ಹಿಂದೂ ಧರ್ಮದ ಮಹಿಳೆಯನ್ನು ಮತಾಂತರಗೊಳಿಸಿ ಐಸಿಸ್ ನಂತಹ ಉಗ್ರ ಸಂಘಟನೆಯ ಸಂಪರ್ಕದ ಮೂಲಕ ರಾಷ್ಟ್ರ ವಿರೋಧಿ ಕೃತ್ಯದಲ್ಲಿ ಬಳಸಲಾಗುತ್ತಿದೆ ಈ ಹಿನ್ನಲೆಯಲ್ಲಿಉಳ್ಳಾಲದ ಮಾಜಿ ಶಾಸಕರ ಕುಟುಂಬವನ್ನು ಬಹಿಷ್ಕರಿಸಬೇಕು ಎಂದು ವಿ.ಹಿಂ. ಪ ಬಜರಂಗದಳ ಬೆಳಗ್ಗಿನಿಂದ ರಾ.ಹೆ66 ಹಾಗೂ ಉಳ್ಳಾಲ ತಾಲೂಕು ವ್ಯಾಪ್ತಿಯ ಪ್ರಮುಖ ಜಂಕ್ಷನ್ ಗಳಲ್ಲಿ ಬ್ಯಾನ್ ಟೆರರಿಸಂ ಅನ್ನುವ ಫಲಕಗಳನನ್ನು ಹಿಡಿದುಕೊಂಡು ಜನಜಾಗೃತಿ ಆಂದೋಲನ ಆರಂಭಿಸಿತ್ತು.
ತಲಪಾಡಿ, ಕೋಟೆಕಾರು, ಬೀರಿ, ತೊಕ್ಕೊಟ್ಟು, ಮುಡಿಪು, ನೇತ್ರಾವತಿ ಸೇತುವೆ, ಕಲ್ಲಾಪು, ಕೊಣಾಜೆ , ಗ್ರಾಮಚಾವಡಿ, ಪಾವೂರು, ಹರೇಕಳ, ಮಂಗಳೂರು ವಿವಿ ಬಸ್ ನಿಲ್ದಾಣ, ಅಸೈಗೋಳಿ ಸಹಿತ ವಿವಿದೆಡೆ ಹಿಂದೂ ಕಾರ್ಯಕರ್ತರು ಜನಜಾಗೃತಿ ಆಂದೋಲನ ಹಮ್ಮಿಕೊಂಡಿದ್ದರು.
ವಿಹಿಂಪ ಮುಖಂಡ ಶರಣ್ ಪಂಪ್‍ವೆಲ್ ನೇತೃತ್ವದಲ್ಲಿ ಎನ್ ಐಎ ದಾಳಿ ನಡೆದ ಮಾಸ್ತಿಕಟ್ಟೆಯಲ್ಲಿರುವ ಬಿ.ಎಂ ಬಾಷಾ ಮನೆಗೆ ನುಗ್ಗಲು ಯತ್ನಿಸಿತ್ತು. ಅಲ್ಲದೆ ಹಿಂದೂ ಧರ್ಮದಿಂದ ಮತಾಂತರಗೊಂಡಿರುವ ಮಹಿಳೆ ಮನೆಯಿಂದ ಹೊರಬರುವಂತೆ ಒತ್ತಾಯಿಸಿದರು. ಕಾರ್ಯಕರ್ತರನ್ನು ತಡೆದ ಪೊಲೀಸರು ಬಳಿಕ ಬಂಧಿಸಿದರು. ಸ್ಥಳದಲ್ಲಿ ಉಳ್ಳಾಲ ಪೊಲೀಸರು ಸೇರಿದಂತೆ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಠಾಣೆಗಳ ಪೊಲೀಸರು, KSRP ಪಡೆಗಳು ಸ್ಥಳದಲ್ಲಿದ್ದು ಭದ್ರತೆ ಏರ್ಪಡಿಸಿದ್ದರು. ಭಾಷಾ ಅವರ ಮನೆಯ ಎದುರು ಪ್ರತಿಭಟನಾಕಾರರು ಮನೆಯ ಒಳಗೆ ನುಗ್ಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.