Vitla: 16 ಬೋರ್‌ವೆಲ್ ಪಂಪು ಕಳವು ಪ್ರಕರಣ; ಆರೋಪಿ ಸೆರೆ
ಕಡಬ ತಾಲೂಕಿನ ಪೆರಬೆ, ಕೋಚಕಟ್ಟೆ ನಿವಾಸಿ ಮಹಮ್ಮದ್ ಶಾಕೀರ್‌ನನ್ನು ಬಂಧಿಸಿದ ಪೊಲೀಸರು
Team Udayavani, Aug 15, 2024, 1:26 AM IST
ವಿಟ್ಲ: ಬಂಟ್ವಾಳ ತಾಲೂಕು ಪುಣಚ ಗ್ರಾಮದ ಗುರ್ಮೆ ಎಂಬಲ್ಲಿರುವ ಗಣೇಶ್ ಗೌಡ ಎಂಬವರ ಮನೆಯ ಬಳಿಯ ಕಟ್ಟಡದಲ್ಲಿ ದುರಸ್ತಿಗಾಗಿ ಇರಿಸಿದ್ದ ಅಂದಾಜು 1 ಲಕ್ಷ 81 ಸಾವಿರ ರೂ ಮೌಲ್ಯದ ಒಟ್ಟು 16 ಬೋರ್‌ವೆಲ್ ಪಂಪುಗಳ ಕಳ್ಳತನ ಮಾಡಿದ್ಧ ಆರೋಪಿಯ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಬುಧವಾರ ಪೊಲೀಸರ ವಿಶೇಷ ತಂಡವು ಕಡಬ ತಾಲೂಕಿನ ಪೆರಬೆ, ಕೋಚಕಟ್ಟೆ ನಿವಾಸಿ ಆರೋಪಿ ಮಹಮ್ಮದ್ ಶಾಕೀರ್ ನನ್ನು ಬಂಧಿಸಿದೆ .
ವಿಟ್ಲ ಠಾಣೆಯಲ್ಲಿ ದಾಖಲಾದ ಪ್ರಕರಣದ ಅನ್ವಯ ಪತ್ತೆಗಾಗಿ ವಿಶೇಷ ತಂಡ ರಚಿಸಿತ್ತು ಬಂಧನದ ವೇಳೆ ಆರೋಪಿಯಿಂದ 1 ಲಕ್ಷ 81 ಸಾವಿರ ರೂ ಮೌಲ್ಯದ 16 ಬೋರ್ ವೆಲ್ ಪಂಪ್ ಗಳು ಹಾಗೂ ಕಳವಿಗೆ ಉಪಯೋಗಿಸಿದ 2ಲಕ್ಷ ಮೌಲ್ಯದ ವಾಹನವಶಪಡಿಸಿಕೊಳ್ಳಲಾಗಿದೆ ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯವು 3,81,000 ರೂ ಆಗಬಹುದು ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.
ಆರೋಪಿ ಪತ್ತೆಯ ಕಾರ್ಯಾಚರಣೆಯಲ್ಲಿ ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್. ವಿಜಯ ಪ್ರಸಾದ್ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ನಾಗರಾಜ್ .ಎಚ್ ನಿರ್ದೇಶನದಂತೆ ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Karnataka By Poll Results: ಜೆಡಿಎಸ್ ಅಂತಿಮ ದಿನ ಎಣಿಸತೊಡಗಿದೆ: ಸಿ.ಪಿ.ಯೋಗೇಶ್ವರ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.