ಉಡುಪಿ: ನ್ಯಾಯಕ್ಕಾಗಿ 29 ತಿಂಗಳಿಂದ ನ್ಯಾಯಮಂಡಳಿಗೆ ಅಲೆದಾಟ
ತಂದೆಯನ್ನೇ ಹೊರದಬ್ಬಿದ ಮಕ್ಕಳು ; 29 ತಿಂಗಳಿಂದ ಸಿಗದ ನ್ಯಾಯ
Team Udayavani, Mar 8, 2022, 10:40 AM IST
ಉಡುಪಿ: ಲಕ್ಷಾಂತರ ರೂ. ಆದಾಯವಿರುವ ಕುಟುಂಬದ ಹಿರಿಯರಾಗಿ ದ್ದರೂ ದಿನದ ಊಟಕ್ಕಾಗಿ ದೇವಸ್ಥಾನ, ಭೂತ ಕೋಲ, ರಥೋತ್ಸವಗಳನ್ನು ಅವಲಂಬಿಸಿದೆ ಈ ಹಿರಿ ಜೀವ. ಮಕ್ಕಳಿಂದಲೇ ಮನೆಯಿಂದ ಹೊರದಬ್ಬಿಸಿಕೊಂಡ ಸಾಸ್ತಾನ ಮೂಲದ 72 ವರ್ಷದ ಹಿರಿಯ ನಾಗರಿಕ ಶ್ರೀನಿವಾಸ ತುಂಗರುನ್ಯಾಯಕ್ಕಾಗಿ ಕಳೆದ 29 ತಿಂಗಳಿಂದ ಎಸಿ, ಡಿಸಿ,ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ಅಲೆಯುತ್ತಿ ದ್ದಾರೆ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಅಧ್ಯಕ್ಷ ಡಾ| ರವೀಂದ್ರನಾಥ್ ಶಾನುಭಾಗ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಐರೋಡಿ ಗ್ರಾಮದ ತುಂಗ ಅವರಿಗೆ ಇಬ್ಬರು ಪುತ್ರರು, ಒರ್ವ ಪುತ್ರಿಯಿದ್ದಾಳೆ. ಇಬ್ಬರು ಎಂಜಿನಿ ಯರ್‌ಗಳಾಗಿದ್ದು, ಒಬ್ಬರು ಖಾಸಗಿ ವೃತ್ತಿಯಲ್ಲಿದ್ದು, ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಆದರೂ ತಂದೆಯನ್ನು ದೂರ ಇಟ್ಟಿದ್ದಾರೆ. ನ್ಯಾಯ ಮಂಡಳಿಯ ಮೊರೆ ಹೋಗಿದ್ದರೂ ನ್ಯಾಯ ಸಿಗಲಿಲ್ಲ ಎಂದು ಹೇಳಿದರು.
ಮಾಸಾಶನಕ್ಕೆ ಗೋಳಾಟ
2019ರಲ್ಲಿ ಉಡುಪಿಯ ಹಿರಿಯ ನಾಗರಿಕರ ಸಹಾಯವಾಣಿಯನ್ನು ಸಂಪರ್ಕಿಸಿ, ಹೆಂಡತಿ ಮಕ್ಕಳು ತಮ್ಮನ್ನು ಮನೆಗೆ ಸೇರಿಸಿಕೊಳ್ಳುವಂತೆ ಸಹಾಯವನ್ನು ಕೋರಿದ್ದರು. ಮಕ್ಕಳು ಇದಕ್ಕೆ ಒಪ್ಪಿಗೆ ನೀಡದಿದ್ದಾಗ ಮಾಸಾಶನಕ್ಕೆ ಬೇಡಿಕೆ ಇಟ್ಟಿದ್ದರು. ಸಹಾಯವಾಣಿ ಕೇಂದ್ರದಿಂದ ಪ್ರಯತ್ನಿಸಿದರೂ ಮನೆಯವರು ಪೂರಕವಾಗಿ ಸ್ಪಂದಿಸಿಲ್ಲ ಎಂದು ವಿವರ ನೀಡಿದರು.
2019ರಲ್ಲಿ ಕುಂದಾಪುರ ಹಿರಿಯ ನಾಗರಿಕರ ನ್ಯಾಯಮಂಡಳಿ ಅಧ್ಯಕ್ಷರಾದ ಎಸಿ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ 29 ತಿಂಗಳಲ್ಲಿ ನ್ಯಾಯಮಂಡಳಿ ವಿಚಾರಣೆ ನಡೆಸುತ್ತಲೇ ಇದ್ದು ಮಕ್ಕಳು ಹಾಜರಾಗದೇ
ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.
ಇದೆಂತ ನ್ಯಾಯ ವ್ಯವಸ್ಥೆ ?
ನೋಟಿಸ್ ನೀಡಿದ ಮೂರು ತಿಂಗಳೊಳಗೆ ಪ್ರಕರಣದ ವಿಚಾರಣೆ ನಡೆಸಿ ಆದೇಶ ನೀಡಬೇಕು ಎಂದು ಹಿರಿಯ ನಾಗರಿಕರ ಸಂರಕ್ಷಣ ಕಾಯ್ದೆಯ ಸೆಕ್ಷನ್ 5(4)ರಲ್ಲಿ ಸ್ಪಷ್ಟವಿದೆ. ಪ್ರಕರಣದಲ್ಲಿ 29 ತಿಂಗಳು ಕಳೆದರೂ ಆದೇಶ ನೀಡುವುದು ಬಿಡಿ, ಆಪಾದಿತರನ್ನು ಕರೆತರಲೂ ನ್ಯಾಯ ಮಂಡಳಿಗೆ ಸಾಧ್ಯವಾಗಿಲ್ಲ. ಇಂತಹ ನ್ಯಾಯ ವ್ಯವಸ್ಥೆಯಿಂದ ಏನನ್ನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನಿಸಿದರು.
ಪಿಐಎಲ್ ಹೂಡಲು ನಿರ್ಧಾರ
ತುಂಗರು 2021ರಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರಕ್ಕೂ ಸ್ಪಂದನೆ ಇಲ್ಲ. ಈ ಬಗ್ಗೆ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲು ನಿರ್ಧರಿಸಿದೆ ಡಾ| ರವೀಂದ್ರನಾಥ್ ತಿಳಿಸಿದ್ದಾರೆ.
ಶ್ರೀನಿವಾಸರ ಅಳಲು
20 ವರ್ಷಗಳ ಹಿಂದೆ ಕುಟುಂಬದ ಕೆಲ ಸದಸ್ಯರೊಂದಿಗೆ ಮಂಡ್ಯದಲ್ಲಿ ಹೊಟೇಲ್ ನಡೆಸುತ್ತಿದ್ದೆ.ಭಿನ್ನಾಭಿಪ್ರಾಯವು ಕೌಟುಂಬಿಕ ಕಲಹವಾಗಿ ಪರಿಣಮಿಸಿ, ಮಕ್ಕಳು ಮನೆಯಿಂದ ಹೊರ ಹಾಕಿದರು. ಅನಂತರ ಬೆಂಗಳೂರಿನಲ್ಲಿ ಕೆಲವರ್ಷ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದು, ಪ್ರಸ್ತುತ ವೃದ್ಧಾಪ್ಯದಿಂದ ಬಳಲುತ್ತಿದ್ದೇನೆ. 2018ರಲ್ಲಿ ಸ್ವಗ್ರಾಮ ಸಾಸ್ತಾನಕ್ಕೆ ಹಿಂದಿರುಗಿದ್ದೇನೆ. ಈ ಮಧ್ಯೆ ರಸ್ತೆ ಅಪಘಾತವೊಂದರಲ್ಲಿ ಗಾಯಗೊಂಡು ನಡೆದಾಡಲೂ ಅಸಾಧ್ಯವಾಗಿದೆ ಎಂದು ಶ್ರೀನಿವಾಸ್ ತುಂಗರು ಸಂಕಷ್ಟ ತೋಡಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.