Waqf: ಕಾಂಗ್ರೆಸ್ ನಾಯಕರಿಂದ 29 ಸಾವಿರ ಎಕರೆ ವಕ್ಫ್ ಆಸ್ತಿ ಕಬಳಿಕೆ: ಪ್ರಹ್ಲಾದ್ ಜೋಶಿ
ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲು ಟೋಕನ್ ಮೊರೆ, ಎಷ್ಟೇ ಕೇಸ್ ದಾಖಲಿಸಿದರೂ ಬಿಜೆಪಿ ಹೆದರಲ್ಲ: ಕೇಂದ್ರ ಸಚಿವ
Team Udayavani, Nov 10, 2024, 6:45 AM IST
ಹುಬ್ಬಳ್ಳಿ: ಅನ್ವರ್ ಮಾಣಿಪ್ಪಾಡಿ ವರದಿ ಪ್ರಕಾರ ಕಾಂಗ್ರೆಸ್‌ನ ಪ್ರಭಾವಿ ನಾಯಕರೇ ವಕ್ಫ್ನ 29 ಸಾವಿರ ಎಕರೆ ಆಸ್ತಿ ಕಬಳಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ವಿಧಾನ ಪರಿಷತ್‌ನ ಹಕ್ಕು ಬಾಧ್ಯತಾ ಸಮಿತಿ ಸಹ ಮಾಣಿಪ್ಪಾಡಿ ವರದಿ ಪರಿಶೀಲಿಸಿ ಮ ದು ವರದಿ ನೀಡಿದೆ. ವಕ್ಫ್ ಆಸ್ತಿ ದುರುಪಯೋಗವಾಗಿದೆ ಎಂಬ ಅಂಶ ವರದಿಯಲ್ಲಿ ವಿವರಿಸಲಾಗಿದೆ. ಆದರೆ ಕಾಂಗ್ರೆಸ್ ವಕ್ಫ್ ವಿವಾದದಲ್ಲಿ ಜನರ ದಿಕ್ಕು ತಪ್ಪಿಸುವ ಅಭಿಯಾನ ಆರಂಭಿಸಿದೆ. ಯಾವುದೇ ವಿವಾದ, ವಿಚಾರದಲ್ಲಿ ಜನರ ದಿಕ್ಕು ತಪ್ಪಿಸುವುದು ಕಾಂಗ್ರೆಸ್ ಸಂಸ್ಕೃತಿ ಆಗಿಬಿಟ್ಟಿದೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಜನರಲ್ಲಿ ಗೊಂದಲ ಸೃಷ್ಟಿ ಮಾಡುತ್ತಿದೆ. ಆದರೆ, ಬಿಜೆಪಿ ಯಾವತ್ತೂ ಸ್ಪಷ್ಟ ನಿಲುವು ತೋರಿದೆ. ವಕ್ಫ್ ಅತಿಕ್ರಮಿಸಲು ಬಿಡುವುದಿಲ್ಲ. ವಕ್ಫ್ ಆಸ್ತಿ ಸಂರಕ್ಷಿಸುವ ಕೆಲಸ ಬಿಜೆಪಿ ಹಿಂದೆಯೂ ಮಾಡಿದೆ, ಮುಂದೆಯೂ ಮಾಡುತ್ತದೆ ಎಂದರು.
ಕಾಂಗ್ರೆಸ್ ಟೋಕನ್ ಮೊರೆ
ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಲು ಟೋಕನ್ ಮೊರೆ ಹೋಗಿದೆ. ಟೋಕನ್ ಮೂಲಕ ಹಣ ಹಂಚಿಕೆ ಶುರು ಮಾಡಿದೆ. ತಾನು ಲೂಟಿ ಮಾಡಿದ್ದನ್ನು ಹೀಗೆ ಹಂಚುತ್ತಿದೆ ಎಂದು ದೂರಿದರು.
ಎಷ್ಟೇ ಕೇಸು ದಾಖಲಿಸಿದರೂ ಬಿಜೆಪಿ ಹೆದರಲ್ಲ: ಕೇಂದ್ರ ಸಚಿವ
ಶಿಕಾರಿಪುರದಲ್ಲಿ 30-40 ವರ್ಷಗಳ ಹಿಂದೆ ಬಿ.ಎಸ್.ಯಡಿಯೂರಪ್ಪ ಅವರನ್ನು ಕೊಲೆ ಮಾಡಲು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಕಾಂಗ್ರೆಸ್ ಸರ್ವನಾಶಕ್ಕೆ ಅವರ ನೀತಿಗಳೇ ಕಾರಣ. 30-40 ವರ್ಷಗಳ ಹಿಂದೆ ಅವರ ಕಾಲದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶಿಕಾರಿಪುರದಲ್ಲಿ ಕೊಲೆ ಮಾಡುವ ಸಂಚು ಮಾಡಲಾಗಿತ್ತು. ಅದೆಲ್ಲವನ್ನೂ ಯಡಿಯೂರಪ್ಪ ಅವರು ಎದುರಿಸಿ ಜನನಾಯಕರಾಗಿ ಹೊರಹೊಮ್ಮಿದ್ದಾರೆ. ಬಿಜೆಪಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ನವರ ಬೆದರಿಕೆ, ಹೆದರಿಕೆಗೆ ಬಗ್ಗಲ್ಲ, ಜಗ್ಗಲ್ಲ. ಎಷ್ಟೇ ಕೇಸ್ ದಾಖಲಿಸಿದರೂ ಹೆದರಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಪಿಲಿಕುಳದಲ್ಲಿ ನ. 17ರಂದು ಕಂಬಳ ಆಯೋಜನೆ ಇಲ್ಲ
Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ
Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ
JDS protest: ಎಚ್‌ಡಿಕೆ ಕರಿಯ: ಜಮೀರ್ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ
Congress: “40 ಪರ್ಸೆಂಟ್ ಸಿಎಂ’ಗೆ ಸಾಕ್ಷಿ ಕೊಟ್ಟಿದ್ರ್ಯಾ?: ಸಿಎಂಗೆ ಸಿ.ಟಿ. ರವಿ
MUST WATCH
ಹೊಸ ಸೇರ್ಪಡೆ
ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್
Bantwala: ಮೆಲ್ಕಾರ್-ಕಲ್ಲಡ್ಕ ಮಧ್ಯೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್
BGT 2024: ಆಸೀಸ್ ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ
Waqf issue; ಎರ್ನಾಕುಳಂನಲ್ಲಿ 400 ಎಕ್ರೆ ಜಮೀನು ಮೇಲೆ ವಕ್ಫ್ ಮಂಡಳಿ ಕಣ್ಣು: ಆರೋಪ
By Election: ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ: ಸಲ್ಲಿಕೆಯಾಗದ ನಾಮಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.