Waqf Notice: ರಾಜ್ಯ ಸರ್ಕಾರದ ವಿರುದ್ಧ ಹಕ್ಕುಚ್ಯುತಿ ಮಂಡಿಸುವೆವು: ಸಂಸದ ಗೋವಿಂದ ಕಾರಜೋಳ
ಬಿಜೆಪಿ ತಂಡದಿಂದ ವಿಜಯಪುರ ಜಿಲ್ಲೆಯ ವಿವಿಧೆಡೆ ಪರಿಶೀಲನೆ, ಜಿಲ್ಲಾಧಿಕಾರಿ ಜೊತೆಗಿನ ಸಭೆಯಲ್ಲಿ ಹೇಳಿದ್ದೇನು?
Team Udayavani, Oct 29, 2024, 9:55 PM IST
ವಿಜಯಪುರ: ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯ ಆಗಸ್ಟ್ ನಲ್ಲಿ ಕೇಂದ್ರ ಸರ್ಕಾರ ಮಂಡಿಸಿದ್ದು, ಈ ಮಸೂದೆ ಬಗ್ಗೆ ಚರ್ಚಿಸಲು ಕಾಂಗ್ರೆಸ್‌ನವರು ವಿರೋಧಿಸಿದರು. ಹೀಗಾಗಿ ಕೇಂದ್ರ ಸರಕಾರವು ಜಂಟಿ ಸಂಸದೀಯ ಸಮಿತಿ (ಜೆಪಿಸಿ)ಗೆ ಮಸೂದೆ ವಹಿಸಿದ್ದಾರೆ. ಈಗ ಸಭೆಗಳು ನಡೆದು ಚರ್ಚೆಗಳಾಗುತ್ತಿವೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ವಕ್ಫ್ ಆಸ್ತಿ ನೋಟಿಸ್‌ಗಳ ಜಾರಿ ಮಾಡುತ್ತಿದೆ. ಈ ನಡೆಯ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದು ಮಾಜಿ ಡಿಸಿಎಂ, ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಎಚ್ಚರಿಸಿದರು.
ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತಾಗಿ ರೈತರಿಗೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಗೋವಿಂದ ಕಾರಜೋಳ ನೇತೃತ್ವದ ಬಿಜೆಪಿ ತಂಡವು ಮಂಗಳವಾರ ಅಧ್ಯಯನ ಕೈಗೊಂಡಿತು. ಸಿಂದಗಿ ತಾಲೂಕಿನ ವಿರಕ್ತಮಠ, ಪಡಗಾನೂರ, ನಾಗಠಾಣ ಕ್ಷೇತ್ರದ ಹಡಗಲಿ ಗ್ರಾಮಕ್ಕೆ ಶಾಸಕರಾದ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ ಹಾಗೂ ಇತರ ನಾಯಕರು ಭೇಟಿ ನೀಡಿದರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಡಿಸಿ ಟಿ.ಭೂ ಬಾಲನ್ ಅವರೊಂದಿಗೆ ಸಭೆ ನಡೆಸಿ, ಜಿಲ್ಲೆಯ ವಕ್ಫ್ ಆಸ್ತಿ ಹಾಗೂ ನೋಟಿಸ್‌ಗಳ ಬಗ್ಗೆ ಮಾಹಿತಿ ಪಡೆದರು. ಸಂಜೆ ತಿಕೋಟಾ ತಾಲೂಕಿನ ಹೊನವಾಡ ಗ್ರಾಮಕ್ಕೆ ಭೇಟಿ ಕೊಟ್ಟು ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ಕಾನೂನಿಗೆ ದ್ರೋಹ ಮಾಡುವ ಕೆಲಸ:
ಜಿಲ್ಲಾಧಿಕಾರಿ ಜೊತೆಗಿನ ಸಭೆ ಬಳಿಕ ಮಾತನಾಡಿದ ಕಾರಜೋಳ, ಲೋಕಸಭೆಯಲ್ಲಿ ಆ.8ರಂದು ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಲಾಗಿದೆ. ಈಗ ಜಂಟಿ ಸಂಸದೀಯ ಸಮಿತಿಯಲ್ಲಿ 21 ಮಂದಿ ಲೋಕಸಭೆ ಸದಸ್ಯರು, 10 ರಾಜ್ಯಸಭಾ ಸದಸ್ಯರಿದ್ದಾರೆ. ಇದರಲ್ಲಿ ಎಲ್ಲ ಪಕ್ಷದವರು, ಜಾತಿ, ಧರ್ಮದವರೂ ಇದ್ದು, ಚರ್ಚೆ ಮಾಡಲಾಗುತ್ತಿದೆ. ಇಂತಹ ಸಮಯದಲ್ಲಿ ರಾಜ್ಯ ಸರ್ಕಾರ ಅನಾಹುತ ಮಾಡಿದೆ. ಇದು ಹಕ್ಕುಚ್ಯುತಿಯಾಗುತ್ತದೆ. ಅಲ್ಲದೇ, ವಿಷಯ ಚರ್ಚೆಗೆ ಬಂದು, ಮಸೂದೆ ಮಂಡಿಸಿದ ಸಮಯದಲ್ಲಿ ವಿಷಯ ಕೈಗೆತ್ತಿಕೊಂಡು ಕರ್ನಾಟಕ ಸರ್ಕಾರ ಕಾನೂನಿಗೆ ದ್ರೋಹ ಮಾಡುವ ಕೆಲಸ ಮಾಡಿದೆ. ರಾಜ್ಯ ಸರ್ಕಾರ ಪಹಣಿಗಳನ್ನೂ ತಿದ್ದುಪಡಿ ಮಾಡಲು ಹೊರಟಿದೆ. ಆದ್ದರಿಂದ ಕೂಡಲೇ ವಕ್ಫ್ ಚಟುವಟಿಕೆಗಳ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ವಿರಕ್ತಮಠ ಆಸ್ತಿ, ಸೋಮೇಶ್ವರ ದೇಗುಲಕ್ಕೂ ನೋಟಿಸ್: ಕಾರಜೋಳ
ಜಿಲ್ಲೆಯಲ್ಲಿ ವಕ್ಫ್ ಆಸ್ತಿ ಕುರಿತು ಪರಿಶೀಲನೆ ವೇಳೆ ದೊಡ್ಡ ಆಘಾತ ಎದುರಾಗಿದೆ. ಸಿಂದಗಿಯ 12ನೇ ಶತಮಾನದ ವಿರಕ್ತಮಠದ ಆಸ್ತಿಯೂ ವಕ್ಫ್ ಆಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ, ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಇಷ್ಟೇ ಅಲ್ಲ, ಪಡಗಾನೂರ ಗ್ರಾಮದ ರ‍್ವೆ ನಂ.220ರಲ್ಲಿ ಚಾಲುಕ್ಯ ಕಾಲದ ಐತಿಹಾಸಿಕ ಸೋಮೇಶ್ವರ ದೇವಸ್ಥಾನಕ್ಕೂ ವಕ್ಫ್ ಆಸ್ತಿ ಎಂದು ನೋಟಿಸ್ ಕೊಟ್ಟಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಕಾರಜೋಳ ಹೇಳಿದರು.
ಜಿಲ್ಲೆಯಲ್ಲಿ ಅನೇಕ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯದ ರೈತರ ಜಮೀನನ್ನೂ ವಕ್ಫ್ ಮೂಲಕ ಸಿದ್ದರಾಮಯ್ಯ ಸರ್ಕಾರ ನುಂಗಿ ಹಾಕುವ ಹುನ್ನಾರ ಮಾಡಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮಟ್ಟದಲ್ಲಿ ಸಭೆ ಮಾಡಿ ಮಾಹಿತಿ ಪಡೆದಿದ್ದೇವೆ. ತಮ್ಮ ವ್ಯಾಪ್ತಿಯಲ್ಲಿ ಆಗುವ ಕಾರ್ಯದ ಬಗ್ಗೆ ಡಿಸಿ ಹೇಳಿದ್ದಾರೆ. ಆದರೆ, ನಾವು ಇದನ್ನು ಒಪ್ಪಲ್ಲ. ಚಿತ್ರದುರ್ಗದ ಚಳ್ಳಿಕೇರಿ ಗ್ರಾಮದ ಚರ್ಮ ಬಂಡಿ ವಕ್ಫ್ ಎಂದಾಗಿದೆ. ಆದ್ದರಿಂದ ರೈತರಿಗೆ ಅನ್ಯಾಯ ಸಿಗುವವರೆಗೂ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.