Waqf Property: ಬೊಮ್ಮಾಯಿ ಕಾಲದಲ್ಲೂ ವಕ್ಫ್ ಆಸ್ತಿ ತೆರವಿಗೆ ಹೇಳಿದ್ರು: ಸಚಿವ ಜಮೀರ್
84 ಸಾವಿರ ಎಕರೆ ಒತ್ತುವರಿಯಾಗಿದ್ದು, ಈಗ ಬರೀ 23 ಸಾವಿರ ಎಕರೆ ಮಾತ್ರ ಉಳಿದಿದೆ
Team Udayavani, Nov 4, 2024, 6:21 AM IST
ವಿಜಯಪುರ: ಮುಜರಾಯಿ ಆಸ್ತಿ ಇರಲಿ, ವಕ್ಫ್ ಆಸ್ತಿ ಇರಲಿ, ಅದನ್ನು ನಾವು ಉಳಿಸಿಕೊಳ್ಳಬೇಕು. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಒತ್ತುವರಿಯಾದ ವಕ್ಫ್ ಆಸ್ತಿ ತೆರವು ಮಾಡಲು ತಿಳಿಸಿದ್ದರು. ಅದು ಅಲ್ಲಾನ ಆಸ್ತಿ, ನಾವು ಅಲ್ಲಾನಿಗೆ ಉತ್ತರ ಹೇಳಬೇಕಾಗುತ್ತದೆ ಎಂದಿದ್ದರು ಎಂದು ಬೊಮ್ಮಾಯಿ ಹೇಳಿಕೆಯ ಹಳೇ ವೀಡಿಯೋ ತುಣುಕನ್ನು ವಕ್ಫ್ ಮತ್ತು ವಸತಿ ಇಲಾಖೆ ಸಚಿವ ಜಮೀರ್ ಅಹ್ಮದ್ ಖಾನ್ ಪ್ರದರ್ಶಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ದೇವರ ಆಸ್ತಿ, ವಕ್ಫ್ ವ್ಯಾಪ್ತಿಯಲ್ಲಿರುವ ಆಸ್ತಿಯನ್ನು ಅಲ್ಲಾನ ಆಸ್ತಿ ಎನ್ನುತ್ತೇವೆ. ಮುಜರಾಯಿ ಇಲಾಖೆಯ 36,000 ಎಕರೆ ಪೈಕಿ 800 ಎಕರೆ ಒತ್ತುವರಿಯಾಗಿದೆ. ವಕ್ಫ್ನಲ್ಲಿ 1.12 ಲಕ್ಷ ಎಕರೆ ದಾನಿಗಳು ನೀಡಿದ ಆಸ್ತಿ ಇದೆ. ಇದರಲ್ಲಿ 84 ಸಾವಿರ ಎಕರೆ ಒತ್ತುವರಿಯಾಗಿದ್ದು, ಈಗ ಬರೀ 23 ಸಾವಿರ ಎಕರೆ ಮಾತ್ರ ಉಳಿದಿದೆ. ಇದನ್ನಾದರೂ ನಾವು ಉಳಿಸಿಕೊಳ್ಳಬೇಕಿದೆ ಎಂದರು.
ವಕ್ಫ್ ನೋಟಿಸ್ ಕೊಡುವ ಪದ್ಧತಿ ಮೊದಲಿನಿಂದಲೂ ಇದೆ. 2008ರಿಂದ 2013 ಮತ್ತು 2019ರಿಂದ 2023ರ ಬಿಜೆಪಿ ಸರ್ಕಾರದಲ್ಲೂ ನೋಟಿಸ್ ಕೊಡಲಾಗಿದೆ. ಬಿಜೆಪಿಯವರ ಕಾಲದಲ್ಲಿ ನೂರಾರಲ್ಲ, ಸಾವಿರಾರು ನೋಟಿಸ್‌ಗಳು ಜಾರಿಯಾಗಿವೆ. ವಿಜಯಪುರ ಜಿಲ್ಲೆಯಲ್ಲಿ 14 ಸಾವಿರಕ್ಕೂ ಅಧಿಕ ಎಕರೆ ವಕ್ಫ್ ಜಾಗದಲ್ಲಿ ಈಗ 700 ಎಕರೆ ಮಾತ್ರ ಉಳಿದಿದೆ. ನಾನು ಎಲ್ಲ ಕಡೆ ವಕ್ಫ್ ಅದಾಲತ್ ಮಾಡಿ ಅದನ್ನು ಸರಿಪಡಿಸಲು ಹೊರಟಿದ್ದೇನೆ ಅಷ್ಟೇ ಎಂದರು.
ಮುಸ್ಲಿಮರಿಂದಲೇ ಶೇ. 90 ವಕ್ಫ್ ಆಸ್ತಿ ಒತ್ತುವರಿ: ಸಚಿವ ಜಮೀರ್
ವಿಜಯಪುರ: ವಕ್ಫ್ ಆಸ್ತಿಯ ಪೈಕಿ ಶೇ. 90ರಷ್ಟು ಮುಸ್ಲಿಮರಿಂದಲೇ ಒತ್ತುವರಿಯಾಗಿದೆ. ದಾನಿಗಳು ಮಜಾ ಮಾಡಿ ಅಂತಾ ದಾನ ಮಾಡಿಲ್ಲ. ಸಮಾಜಕ್ಕೆ ಒಳ್ಳೆದಾಗಲಿ ಎಂದು ಕೊಟ್ಟಿರುವುದು. ಒತ್ತುವರಿ ತೆರವು ಮಾಡಿ ದಾಖಲೆ ಸರಿ ಮಾಡುತ್ತಿದ್ದೇವೆ. ಇದನ್ನೆಲ್ಲ ಮುಂಚೆಯೇ ಮಾಡಬೇಕಿತ್ತು. ಈಗ ನನ್ನ ಕಾಲದಲ್ಲಾದರೂ ಆಗಲಿ ಎಂದು ಮಾಡುತ್ತಿದ್ದೇನೆ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಖಾಸಗಿಯವರು ವಕ್ಫ್ ಆಸ್ತಿ ಒತ್ತುವರಿ ಮಾಡಿದ್ದರೆ ಅದನ್ನು ತೆರವು ಮಾಡುತ್ತೇವೆ. ರೈತರಿಗೆ ನೋಟಿಸ್ ಕೊಟ್ಟಿದ್ದರೆ ಹಿಂಪಡೆಯುತ್ತೇವೆ. ಸಿಎಂ ಸಿದ್ದರಾಮಯ್ಯ ಸಹ ನೋಟಿಸ್ ವಾಪಸ್ ಪಡೆಯುವ ನಿರ್ಧಾರ ತೆಗೆದುಕೊಂಡಿದ್ದಾರೆ. ಅಧಿಕಾರಿಗಳಿಗೂ ಸೂಚಿಸಿ ದ್ದಾರೆ. ಈ ಬಗ್ಗೆ ಯಾವ ರೈತರೂ ಆತಂಕ ಪಡುವ ಅಗತ್ಯವಿಲ್ಲ. ನಾವು ರೈತರಿಗೆ ತೊಂದರೆ ಕೊಡುವುದಿಲ್ಲ. ಅಲ್ಲದೇ, ವಕ್ಫ್ನಲ್ಲಿ ಸರಕಾರದ ಜಾಗವಿಲ್ಲ ಎಂದು ಸ್ಪಷ್ಟಪಡಿಸಿದರು.
ವಕ್ಫ್ ಗೆಜೆಟ್ ನೋಟಿಫಿಕೇಶನ್; ಬಿಜೆಪಿ ಪಾತ್ರವೂ ಇದೆ: ಎಚ್‌ಕೆಪಿ
ಹುಬ್ಬಳ್ಳಿ: ವಕ್ಫ್ ಗೆಜೆಟ್ ನೋಟಿಫಿಕೇಶನ್ ಮಾಡಿರುವವರಲ್ಲಿ ಬಿಜೆಪಿಯ ದೊಡ್ಡ ಪಾತ್ರವಿದೆ. ನೋಟಿಸ್ ಕೊಟ್ಟು ನೋಂದಣಿ ಮಾಡಿಸಲು ಹೇಳಿದ್ದರಲ್ಲಿ ಅವರ ಪಾಲಿದೆ. ಈಗ ನಾಟಕ ಮಾಡುತ್ತಿದ್ದಾರೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ವಕ್ಫ್ ವಿಚಾರವಾಗಿ ಮೊದಲು ಪತ್ರ ಬರೆದಿದ್ದು ಬಿಜೆಪಿಯವರು. ಇದೀಗ ಚುನಾವಣೆ ಇದೆ ಎಂದು ಕಪಟ ರಾಜಕೀಯ ನಾಟಕ ಮಾಡುತ್ತಿದ್ದಾರೆ. ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇವಲ ಹಿಂದೂ ರೈತರಿಗೆ ನೋಟಿಸ್ ನೀಡಿಲ್ಲ. ಹಾವೇರಿಯಲ್ಲಿ 555 ಪ್ರಕರಣಗಳಲ್ಲಿ 485 ಮುಸ್ಲಿಂ ರೈತರ ಜಮೀನಿಗೂ ನೋಟಿಸ್ ಕೊಡಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.