Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
ಶಿರಸಿಯ ಇಳಸೂರಿನ ಅರಣ್ಯ ಭೂಮಿ ವಕ್ಫ್ ಆಗಿರುವುದು ನಿಜಕ್ಕೂ ಹಾಸ್ಯಾಸ್ಪದ: ಬಿಜೆಪಿ ಶಾಸಕ
Team Udayavani, Nov 8, 2024, 10:42 PM IST
ಹಾವೇರಿ (ಶಿಗ್ಗಾವಿ): ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ ಎಕರೆ ಇದ್ದರೆ, ಭಾರತದಲ್ಲಿ 9.5 ಲಕ್ಷ ಎಕರೆ ಇದೆ. ಕಾಂಗ್ರೆಸ್‌ನವರು ಭಾರತದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿ ಮಾಡಲು ಹೊರಟಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು.
ಶಿಗ್ಗಾವಿ ತಾಲೂಕಿನ ತಡಸ್ ಗ್ರಾಮದಲ್ಲಿ ಬಿಜೆಪಿ ಪ್ರಚಾರದಲ್ಲಿ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ದೇಶದ ಜನರು ಮುನ್ನೂರು ಸ್ಥಾನ ಕೊಟ್ಟಿದ್ದರೆ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದಂತೆ ವಕ್ಫ್ ಕಾಯಿದೆ ತಿದ್ದುಪಡಿ ಮಾಡಲು ಅನುಕೂಲವಾಗುತ್ತಿತ್ತು. ಸಿಎಂ ಸಿದ್ದರಾಮಯ್ಯ ಜಮೀರ್‌ಗೆ ಎಲ್ಲ ವಕ್ಫ್ ಆಸ್ತಿ ಸಮೀಕ್ಷೆ ಮಾಡಲು ಹೇಳಿದ್ದರಿಂದ ಜಮೀರ್ ಮುಸ್ಲಿಮರಿಗೆ ಘೋರಿ ತೋರಿಸಿ ವಕ್ಫ್ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮುಂದಿನ ಜನ್ಮದಲ್ಲಿ ಮುಸ್ಲಿಂ ಆಗಿ ಹುಟ್ಟುವುದಾಗಿ ಹೇಳುತ್ತಿದ್ದಾರೆ. ಅದಕ್ಕಾಗಿ ಈಗಲೇ ಎಲ್ಲ ಆಸ್ತಿಯನ್ನು ವಕ್ಫ್ ಆಸ್ತಿ ಮಾಡುತ್ತಿದ್ದಾರೆ ಎಂದರು.
ಮೂರ್ಖತನದ ಪರಮಾವಧಿ:
ಶಿರಸಿಯ ಇಳಸೂರಿನಲ್ಲಿ ದಟ್ಟಾರಣ್ಯದ ಭೂಮಿಯೂ ವಕ್ಫ್ ಎಂದು ನಮೂದಾಗಿರುವುದಕ್ಕೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ ಯತ್ನಾಳ್ ಅರಣ್ಯ ಭೂಮಿ ವಕ್ಫ್ ಆಗಿರುವುದು ನಿಜಕ್ಕೂ ಹಾಸ್ಯಾಸ್ಪದ. ಅರಣ್ಯ ಸಂಪತ್ತು ಸರ್ಕಾರಕ್ಕೆ ಸೇರಿದ ಸ್ವತ್ತು. ಇದು ನಮ್ಮದು ಎಂದು ಹೇಳುವುದು ಮೂರ್ಖತನದ ಪರಮಾವಧಿ. ರೈತರಾಯಿತು, ಸರ್ಕಾರಿ ಕಚೇರಿ ಆಯಿತು, ಸ್ಮಾರಕಗಳ ಮೇಲೆ ಕಣ್ಣಿಟ್ಟಾಯಿತು, ಶ್ಮಶಾನಗಳು ನಮ್ಮದೆಂದರು, ರಸ್ತೆ ವಕ್ಫ್ ಸೇರಿದ್ದು ಅಂದರು, ಶಾಲಾ ಕಾಲೇಜುಗಳು ವಕ್ಫ್ ಭೂಮಿ, ವಿಧಾನ ಸೌಧ ನಮ್ಮದು, ಪೊಲೀಸ್ ಕಚೇರಿ ನಮ್ಮದು ಎಂದರು ಈಗ ಅರಣ್ಯವೇ ಇವರದ್ದಂತೆ…ಇವರ ಅಜ್ಞಾನವನ್ನು ಅವರ ದೇವರೇ ತಿದ್ದಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.