ಎಚ್‌ಸಿಕ್ಯೂ ಬಗ್ಗೆ ಎಚ್ಚರಿಕೆ ,ಮಲೇರಿಯಾ ನಿಯಂತ್ರಣ ಮಾತ್ರೆಗಳಿಂದ ಹೃದಯ ಸ್ತಂಭನ: ಐಸಿಎಂಆರ್
Team Udayavani, May 24, 2020, 6:50 AM IST
ನವದೆಹಲಿ: ಕೋವಿಡ್-19 ಸೋಂಕಿನ ಅಪಾಯವನ್ನು ಮುಂಚಿತವಾಗಿ ಕಟ್ಟಿಹಾಕಲು, ಮಲೇರಿಯಾ ಗುಳಿಗೆ ಹೈಡ್ರೊಕ್ಸಿಕ್ಲೊರೊಕ್ವಿನ್ (ಎಚ್‌ಸಿಕ್ಯೂ) ಬಳಸಬಹುದು. ಆದರೆ, ಇದರಿಂದ ಹೃದಯಸ್ತಂಭನವೂ ಉಂಟಾಗುವ ಸಾಧ್ಯತೆ ಇದೆಯೆಂದು ಭಾರತೀಯ ವೈದ್ಯಕೀಯ ಸಂಶೋಧನಾ ಕೌನ್ಸಿಲ್ (ಐಸಿಎಂಆರ್) ಪತ್ತೆಹಚ್ಚಿದೆ.
ಕೋವಿಡ್-19 ಸೋಂಕಿತರಲ್ಲದೆ, ಅವರನ್ನು ನೋಡಿಕೊಳ್ಳುವ ಆರೋಗ್ಯ ಸಿಬ್ಬಂದಿ, ಕಂಟೈನ್‌ಮೆಂಟ್ ವಲಯಗಳಲ್ಲಿ ಕೆಲಸ ಮಾಡುವವರು ವಾರಕ್ಕೆ ಒಮ್ಮೆ ಎಚ್‌ಸಿಕ್ಯೂ ಬಳಸುತ್ತಿದ್ದರು. ಆ್ಯಂಟಿ ಮಲೇರಿಯಾ ಗುಳಗೆ ಸೇವನೆಯಿಂದ ಅಡ್ಡಪರಿಣಾಮಗಳು ಇವೆಯೆಂದು ಡಬ್ಲ್ಯು ಎಚ್‌ಒ ಸೇರಿದಂತೆ ಕೆನಡಾದಂಥ ಕೆಲವು ದೇಶಗಳು ಆಕ್ಷೇಪ ತೆಗೆದಾಗ, ಐಸಿಎಂಆರ್ 1323 ಆರೋಗ್ಯ ಸಿಬ್ಬಂದಿ ಮೇಲೆ ಮರು ಪರೀಕ್ಷೆಗೆ ಮುಂದಾಗಿತ್ತು.
ಪರೀಕ್ಷೆ ಹೇಳಿದ್ದೇನು?: ಎಚ್‌ಸಿಕ್ಯೂ ಬಳಕೆಯಿಂದ ಕೋವಿಡ್-19 ತಗುಲುವ ಅಪಾಯ ತೀರಾ ಕಡಿಮೆ ಎಂದು ಐಸಿಎಂಆರ್ ಹೇಳಿದೆ. ಆದರೆ, ಕೆಲವು ಸೌಮ್ಯ ಅಡ್ಡಪರಿಣಾಮಗಳನ್ನೂ ಅದು ಉಲ್ಲೇಖೀಸಿದೆ. ಮಾತ್ರೆ ನುಂಗಿದ ಹಲವರಲ್ಲಿ ಶೇ.8.9 ಮಂದಿಗೆ ವಾಕರಿಕೆ, ಶೇ.7.3 ಮಂದಿಗೆ ಹೊಟ್ಟೆನೋವು, ಶೇ.1.5 ಮಂದಿಗೆ ವಾಂತಿ ಲಕ್ಷಣ ಕಂಡುಬಂದಿದೆ.
ಅಲ್ಲದೆ, ಶೇ.1.9 ಮಂದಿಯ ಹೃದಯದಲ್ಲಿ ಕಾರ್ಡಿಯೊಮಿಯೋಪತಿ ಪತ್ತೆಯಾಗಿದೆ. ಹೃದಯದಲ್ಲಿ ರಕ್ತ ಪಂಪ್ ಮಾಡಲು ಕಷ್ಟವಾಗುವ ಈ ಸ್ಥಿತಿಯನ್ನು ಕೆಲವರು ಎದುರಿಸಿದ್ದಾರೆ. ಮತ್ತೆ ಕೆಲವರಲ್ಲಿ ಹೃದಯ ಬಡಿತದಲ್ಲಿ ಏರಿಳಿತ ಕಂಡುಬಂದಿದೆ. ಅಪರೂಪವಾಗಿ ದೃಷ್ಟಿ ಮಸುಕಾಗುವ ಲಕ್ಷಣಗಳೂ ಕಂಡುಬಂದಿವೆ.
ಮಾತ್ರೆ ಬಳಕೆಗೆ ಹೊಸ ಮಾರ್ಗಸೂಚಿ
-ಸೌಮ್ಯ ಅಡ್ಡಪರಿಣಾಮದ ಹೊರತಾಗಿಯೂ, ಕೋವಿಡ್-19 ತಡೆಗೆ ಬಳಕೆಗೆ ಯೋಗ್ಯ.
-ಎಚ್‌ಸಿಕ್ಯೂ ತೆಗೆದುಕೊಳ್ಳುವ ಮುನ್ನ ಇಸಿಜಿ ಮಾಡಿಸಿಕೊಳ್ಳುವುದು ಕಡ್ಡಾಯ.
-ಹೃದಯ ತೊಂದರೆ ಇರುವವರಿಗೆ ಎಚ್‌ಸಿಕ್ಯೂ ನೀಡುವಂತಿಲ್ಲ.
ಪ್ರಸ್ತುತ ಎಚ್‌ಸಿಕ್ಯೂ ಬಳಕೆ
ಸೋಂಕಿತರಿಗೆ: ಮೊದಲ ದಿನ 400 ಎಂ.ಜಿ. 2 ಬಾರಿ. ನಂತರ ವಾರಕ್ಕೊಮ್ಮೆ 400 ಎಂ.ಜಿ.ಯಂತೆ 3 ವಾರ.
ಆರೋಗ್ಯ ಸಿಬ್ಬಂದಿ: ಮೊದಲ ದಿನ 400 ಎಂ.ಜಿ. 2 ಬಾರಿ. ನಂತರ ವಾರಕ್ಕೊಮ್ಮೆ 400 ಎಂ.ಜಿ.ಯಂತೆ 7 ವಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.