Water Dispute: ಈಗ ತೀಸ್ತಾ ನದಿ ನೀರಿಗಾಗಿ ಬಾಂಗ್ಲಾದೇಶ ಸರಕಾರ ಕ್ಯಾತೆ
ತೀಸ್ತಾ ಮಾತುಕತೆಗೆ ಶೀಘ್ರ ಚಾಲನೆ: ಸೈಯದಾ, ಶೀಘ್ರ ಮುಕ್ತಾಯ ಆಗಲಿರುವ ಗಂಗಾ ಒಪ್ಪಂದ ಚರ್ಚೆ
Team Udayavani, Sep 3, 2024, 1:13 AM IST
ಢಾಕಾ: ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿ ಭಾರತದ ಜತೆ ಮಾತುಕತೆ ನಡೆಸಲಾಗುವುದು ಎಂದು ಬಾಂಗ್ಲಾದೇಶದ ಮಧ್ಯಾಂತರ ಸರಕಾರ ದಲ್ಲಿ ಜಲಸಂಪನ್ಮೂಲ ಇಲಾಖೆಯ ಸಲಹೆಗಾರ್ತಿ ಸೈಯದಾ ರಿಜ್ವಾನ ಹಸನ್ ಹೇಳಿದ್ದಾರೆ. ತೀಸ್ತಾ ನದಿಯ ಮೇಲ್ದಂಡೆ ಮತ್ತು ಕೆಳದಂಡೆ ರಾಷ್ಟ್ರಗಳು ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲನೆ ಮಾಡಬೇಕೆಂದೂ ತಿಳಿಸಿದ್ದಾರೆ.
ತೀಸ್ತಾ ಸೇರಿದಂತೆ ಎಲ್ಲ ನದಿಗಳ ನೀರು ಹಂಚಿಕೆಯ ವಿವಾದಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬ ಹು ದಾಗಿದೆ. ಆದರೆ ಉಭಯ ರಾಷ್ಟ್ರಗಳ ನಡುವೆ ಒಪ್ಪಂದ ಏರ್ಪಡದಿದ್ದರೆ ಬಾಂಗ್ಲಾದೇಶವು ಅಂತಾರಾಷ್ಟ್ರೀಯ ಕಾನೂನುಗಳ ಆಯ್ಕೆಯನ್ನು ಪರಿಗಣಿಸಬಹುದು ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ತೀಸ್ತಾ ನದಿ ನೀರು ಹಂಚಿಕೆ ಸಂಬಂಧ ಈಗಾಗಲೇ ಬಾಂಗ್ಲಾ ದೇಶದಲ್ಲಿರುವ ಸಂಬಂಧಿಸಿದವರ ಜತೆ ಮಾತನಾಡಿದ್ದೇನೆ. ತೀಸ್ತಾ ಒಪ್ಪಂದ ಕುರಿತು ನಾವು ಮಾತುಕತೆ ಮತ್ತು ಪ್ರಕ್ರಿಯೆಗಳನ್ನು ಮರು ಆರಂಭಿಸುವ ಅಗತ್ಯದ ಬಗ್ಗೆ ಚರ್ಚಿಸಿದ್ದೇವೆ. ಜತೆಗೆ ಮುಂದಿನ 2 ವರ್ಷಗಳಲ್ಲಿ ಮುಕ್ತಾಯವಾಗಲಿರುವ ಗಂಗಾ ನದಿ ಒಪ್ಪಂದ ಕುರಿತೂ ಮಾತನಾಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.