ಗರ್ಡಾಡಿಯ ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!
Team Udayavani, May 17, 2021, 4:22 AM IST
ಬೆಳ್ತಂಗಡಿ : ಗರ್ಡಾಡಿಯ ಕುಬಳಬೆಟ್ಟು ಗುತ್ತು ಸಮೀಪ ಫಲ್ಗುಣಿ ನದಿಯ ಹಳ್ಳದಲ್ಲಿ 10ರಿಂದ 15ರಷ್ಟಿರುವ ನೀರುನಾಯಿ ಗುಂಪು ಪತ್ತೆಯಾಗಿದೆ.
ಸಂಪತ್ ಕೊಂಬ ಅವರು ಮನೆ ಸಮೀಪ ಶನಿವಾರ ಸಂಜೆ ಕಂಡುಬಂದ ನೀರುನಾಯಿಗಳ ವೀಡಿಯೋ ಚಿತ್ರೀ ಕರಿಸಿದ್ದರು. ರವಿವಾರ ಸಂಜೆ ಮತ್ತೆ ಅದೇ ಸ್ಥಳದಲ್ಲಿ ಅವು ಕಾಣಸಿಕ್ಕಿವೆ. ವೇಣೂರು ವಲಯ ಅರಣ್ಯಾಧಿಕಾರಿ ಮಹೀಮ್ ಜನ್ನು ಮತ್ತು ಉಪವಲಯ ಅರಣ್ಯ ಅಧಿಕಾರಿ ಸುನೀಲ್ ಕುಮಾರ್ ಕೆ.ಎಸ್. ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದಾರೆ.
ಸಿಹಿನೀರು ವಾಸಿಗಳು
ನೀರುನಾಯಿಗಳ ಪೈಕಿ ಪ್ರಪಂಚದಲ್ಲಿ 13 ಪ್ರಭೇದಗಳಿವೆ. ಭಾರತದಲ್ಲಿ ಮೂರೇ ಪ್ರಭೇದಗಳಿದ್ದು, ಇಲ್ಲಿ ಪತ್ತೆಯಾಗಿರು ವುದು Indian smooth coated otters ಎಂಬ ಪ್ರಭೇದಕ್ಕೆ ಸೇರಿದವು. ಸಿಹಿನೀರು ವಾಸಿಗಳಾಗಿರುವ ಇವು ಮೀನು, ಏಡಿ ಇತ್ಯಾದಿಗಳನ್ನು ತಿಂದು ಬದುಕುತ್ತವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕುಬಳಬೆಟ್ಟು ಪರಿಸರದಲ್ಲಿ ಕಿಂಡಿಅಣೆಕಟ್ಟು ಇದ್ದು, ಕಳೆದ ಡಿಸೆಂಬರ್‌ನಲ್ಲಿ ಒಮ್ಮೆ ಕಾಣಸಿಕ್ಕಿದ್ದವು. ರಾತ್ರಿವೇಳೆ ಕೂಗುವುದು ಕೇಳಿಸುತ್ತಿತ್ತು. ಆದರೆ ನೀರುನಾಯಿ ಎಂದು ತಿಳಿದಿರಲಿಲ್ಲ. ಇಂದು ಹಳ್ಳದಲ್ಲಿ ಕಾಣಿಸಿಕೊಂಡದ್ದರಿಂದ ಸ್ಪಷ್ಟವಾಗಿದೆ ಎಂದು ಸಂಪತ್ ಕೊಂಬ ಅವರು ಉದಯವಾಣಿಗೆ ತಿಳಿಸಿದ್ದಾರೆ.
ನೀರುನಾಯಿಗಳು ಕುದುರೆಮುಖ ಆಸುಪಾಸಿನ ನದಿಗಳಲ್ಲಿ ಕಾಣಸಿಗುತ್ತಿದ್ದು, ಕಳೆದ ವರ್ಷದ ಪ್ರವಾಹಕ್ಕೆ ನದಿಗಳಲ್ಲಿ ಸಾಗಿಬಂದಿರುವ ಸಾಧ್ಯತೆ ಇದೆ. ಇವುಗಳಿಂದ ಮನುಷ್ಯರಿಗಾಗಲೀ ಇತರ ಪ್ರಾಣಿಗಳಿಗಾಗಲೀ ಅಪಾಯವಿಲ್ಲ. ಸಿಹಿನೀರಿನ ಚೆಕ್‌ಡ್ಯಾಮ್ ಪ್ರದೇಶಗಳಲ್ಲಿ ಮರದ ಕಟ್ಟಿಗೆ ನಿಂತಿರುವ ಸ್ಥಳಗಳಲ್ಲಿ ಪೊಟರೆಗಳಂತೆ ಮಾಡಿ ಇವು ವಾಸಿಸುತ್ತವೆ.
– ಮಹೀಮ್ ಜನ್ನು, ವಲಯ ಅರಣ್ಯಾಧಿಕಾರಿ, ವೇಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kokkada: ಯಾತ್ರಾರ್ಥಿಯಿಂದ ಸೌತಡ್ಕ ಕ್ಷೇತ್ರದ ಸಿಬಂದಿ ಮೇಲೆ ಹಲ್ಲೆ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Shishila:ಮಕ್ಕಳನ್ನು ಶಾಲೆಗೆ ಕಳುಹಿಸುವ ವೇಳೆ ಕಾಡಾನೆ ದಾಳಿ;ಸೊಂಡಿಲಿನಿಂದ ಬೈಕ್ ಕೆಡವಿದ ಆನೆ
Vitla: ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ; 2 ದಿನಗಳ ಹಿಂದೆ ಮೃತಪಟ್ಟಿರುವುದಾಗಿ ಶಂಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.