ಲಕ್ಷಾಂತರ ಮನೆಗಳಿಗೆ ನೀರು ; ಸಮೃದ್ಧಿಗೆ ಹೊಸ ಆಯಾಮ


Team Udayavani, Sep 18, 2021, 6:55 AM IST

ಲಕ್ಷಾಂತರ ಮನೆಗಳಿಗೆ ನೀರು ; ಸಮೃದ್ಧಿಗೆ ಹೊಸ ಆಯಾಮ

ಮಿಜೋರಾಂನ ಲ್ವಾಂಗ್‌ ಟೆಲೈ, ಜಮ್ಮು ಮತ್ತು ಕಾಶ್ಮೀರದ ಕುಪ್ವಾರ, ಗುಜರಾತ್‌ನ ಕಛ್ ಮತ್ತು ನಿಕೋಬಾರ್‌ ದ್ವೀಪಗಳ ನಡುವೆ ನಾಲ್ಕು ಅತೀ ಮೂಲೆಯ ಜಿಲ್ಲೆಗಳ ಹೊರತಾಗಿ ಸಾಮಾನ್ಯವಾದ್ದದ್ದು ಏನಿದೆ? ಈ ಎಲ್ಲ ಸ್ಥಳಗಳಲ್ಲಿನ ಸಾಮಾನ್ಯ ವಿಷಯವೆಂದರೆ, ಈಗ ನೀವು ಆ ಜನರನ್ನು ನೀರು ಕೇಳಿದರೆ ಅವರು ಹೊಸದಾಗಿ ಸ್ಥಾಪಿಸಿದ ಕೊಳಾಯಿಗಳಿಗೆ ಹೋಗುತ್ತಾರೆ ಮತ್ತು ಹೆಮ್ಮೆಯಿಂದ ಹಾಗೂ ಮುಖದಲ್ಲಿ ವಿಶಾಲ ನಗುವಿನೊಂದಿಗೆ ನಿಮ್ಮ ಬಾಯಾರಿಕೆಯನ್ನು ನೀಗಿಸುತ್ತಾರೆ. ನಕ್ಷೆ ಬಿಡಿಸುವವರ ಪೆನ್‌ ನಿಲ್ಲುವ ಮತ್ತು ಮಿಲಿಟರಿ ಯೋಧರ ಪಹರೆ ಆರಂಭ ವಾಗುವ ಈ ಗಡಿ ಜಿಲ್ಲೆಗಳು ಜಲಜೀವನ್‌ ಮಿಷನ್‌ (ಜೆಜೆಎಂ) ಯಶಸ್ಸಿನ ಸಂಕೇತವಾಗಿವೆ. ಈ ಯೋಜನೆ ಹಿಮಾಲಯದ ತಪ್ಪಲಿನಲ್ಲಿ ನಿರುಪದ್ರವಿ ಕುಗ್ರಾಮಗಳಿಂದ ಹಿಡಿದು ಕೇರಳದ ಬಾಳೆ ತೋಟಗಳವರೆಗೆ ದೇಶಾದ್ಯಂತ ಯಶಸ್ವಿಯಾಗಿದೆ ಮತ್ತು ಜೆಜೆಎಂ- ಜಲ್‌ ಜೀವನ್‌ ಮಿಷನ್‌ ಇದೀಗ ಜನರ ವಾಸ್ತವವಾಗಿದೆ. 70 ವರ್ಷಗ ಳಲ್ಲಿ ಮಾಡಲಾಗಿದ್ದನ್ನು ಕೇವಲ 2 ವರ್ಷಗ ಳಲ್ಲಿ ಅತ್ಯಂತ ಯಶಸ್ವಿ ಹಾಗೂ ಚತುರತೆಯಿಂದ ಜಾರಿಗೊಳಿಸಲಾಗಿದೆ. ಗೌರ ವಾನ್ವಿತ ಪ್ರಧಾನಮಂತ್ರಿ ಅವರು ಕೆಂಪುಕೋಟೆಯ ಪ್ರಾಂಗಣದ ಮೇಲೆ ಮೊದಲು ರಾಷ್ಟ್ರದಲ್ಲಿನ ನಲ್ಲಿ ನೀರಿನ ಸಂಪರ್ಕ ಹೊಂದಿಲ್ಲದ ಮನೆಗಳ ಬಗ್ಗೆ ಮಾತನಾಡುವ ಮೂಲಕ, ಜಲ ಜೀವನ್‌ ಮಿಷನ್‌ನ ಬೀಜವನ್ನು ಬಿತ್ತಿದರು.

ಅವರು ತಮ್ಮ “ಮನ್‌ ಕೀ ಬಾತ್‌’ನಲ್ಲಿ ಪಾನಿ – ನೀರನ್ನು ಪರಮೇಶ್ವರ ಅಂದರೆ ದೇವರು ಮತ್ತು ಪರಸ್‌ ಸ್ಪರ್ಷಮಣಿ ಅಥವಾ ಅಮೃತ(ಎಲಿಕ್ಸರ್‌ )ದ ಸಮಾನ ಹಾಗೂ ಜೆಜೆಎಂ ತಂಡವನ್ನು ಎತ್ತರದ ಸ್ಥಾನಮಾನಕ್ಕೇರಿಸಿದರು ಮತ್ತು ನೀರು ಒದಗಿಸುವುದು ದೇವರನ್ನು ಜನರ ಮನೆಗೆ ಕೊಂಡೊ ಯ್ದಂತೆ, ಅದು ಮಾನವೀಯ ಸೇವೆಯ ರೂಪ ಮತ್ತು ದೈವಿಕ ಸೇವೆ ಎಂದರು. ಅನಂತರ ಎರಡು ವರ್ಷಗ ಳಲ್ಲಿ ಸಂಪೂರ್ಣ ಗಮನಹರಿಸಿದ್ದರಿಂದ ಮತ್ತು ಅವಿರತ ಶ್ರಮದ ಫಲವಾಗಿ, ಭಾರತ 8.12 ಕೋಟಿ ಕುಟುಂಬಗಳಿಗೆ ಅಂದರೆ ಶೇ.42.46ರಷ್ಟು ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವಲ್ಲಿ ಸಫಲವಾಗಿದೆ. ಕಳೆದ 70 ವರ್ಷಗಳ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ, ಅಷ್ಟು ವರ್ಷಗಳಲ್ಲಿ ಕೇವಲ 3.23 ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ನೀಡಲಾಗಿತ್ತು. ಆದರೆ ಜೆಜೆಎಂ ಅಡಿ ಕೇವಲ 2 ವರ್ಷಗ ಳಲ್ಲಿ 4.92 ಕೋಟಿ ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ನೀಡಲಾಗಿದ್ದು, 78 ಜಿಲ್ಲೆಗಳ 930 ಬ್ಲಾಕ್‌ಗಳು, 56,696 ಪಂಚಾಯತ್‌ಗಳು ಮತ್ತು 1,13,005 ಗ್ರಾಮಗಳಲ್ಲಿ ಶೇ.100ರಷ್ಟು ಮನೆಗಳಿಗೆ ಕೊಳಾಯಿ ನೀರಿನ ಸಂಪರ್ಕ ಒದಗಿಸಲಾಗಿದೆ. ಸಂಖ್ಯೆಗಳು ಮತ್ತು ಅದರ ಪ್ರಗತಿಯ ಗ್ರಾಫ್‌ ನೋಡಿದಾಗ ಅದು ಗೂಳಿಯಂತೆ ಓಡುತ್ತಿದೆ. ಅಂಕಿ ಸಂಖ್ಯೆಯನ್ನು ಉಲ್ಲೇಖೀಸಿ ಭಾರತೀಯರ ಮೇಲೆ ಕಠಿನ ಪ್ರಭಾವ ಬೀರಲಾಗದು ಮತ್ತು ಈ ಸತ್ಯಾಸತ್ಯ ತೆಯ ವಿರುದ್ಧ ಅವರನ್ನು ಹಿಡಿದಿಡಲಾಗದು. ಸ್ವಾತಂತ್ರಾé ಅನಂತರ ಕಳೆದ 74 ಬೇಸಗೆಗಳಲ್ಲಿ ಅವರು, ಹಲವು ನೀತಿಗಳು ಮತ್ತು ಯೋಜನೆಗಳಿಂದ ಬಜೆಟ್‌ ವರೆಗೆ ಮತ್ತು ಕಾಗದಗಳಿಗೆ ದತ್ತಾಂಶ ವರ್ಗಾವಣೆಯಾಗಿರುವುದನ್ನು ಮತ್ತು ಅದು ನಿಜ ಜೀವನಕ್ಕೆ ಪರಿವರ್ತನೆಯಾಗದಿರುವು ದನ್ನು ಕಂಡಿದ್ದಾರೆ. ಹಾಗಾಗಿ ಅಂಕಿ ಸಂಖ್ಯೆಗಳು ಜನ ರ ನ್ನು ಪ್ರಭಾವಗೊಳಿಸುವಲ್ಲಿ ವಿಫಲವಾಗುತ್ತವೆ. ಆದರೆ ಯಾವುದು ವಿಫಲವಾಗುವುದಿಲ್ಲವೆಂದರೆ ಅವರೇ ತಮ್ಮ ಕಣ್ಣಾರೆ ನೋಡುತ್ತಿರುವುದು, ನಂಬುತ್ತಿರುವುದು ಮತ್ತು ಪರಿಶೀಲಿಸುತ್ತಿರುವುದು ಹಾಗೂ ಸ್ಪಷ್ಟವಾಗಿ ಕಾಣುತ್ತಿರು ವುದು. ಈ ಯೋಜನೆ ರಾಷ್ಟ್ರದ ಪರಿಶೀಲನೆಗೆ ಶೇ.100ರಷ್ಟು ಜವಾಬ್ದಾರಿಯುತ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಜೆಜೆಎಂ ಡ್ಯಾಶ್‌ ಬೋರ್ಡ್‌ನಲ್ಲಿಯೇ ತಮ್ಮ ಪ್ರದೇಶದಲ್ಲಿ ಪ್ರತೀ ದಿನ ನೀಡಿರುವ ಹೊಸ ನಲ್ಲಿ ನೀರಿನ ಸಂಪರ್ಕಗಳ ಕ್ಷಣ ಕ್ಷಣದ ನೈಜ ಮಾಹಿತಿಯನ್ನು ಯಾರು ಬೇಕಾದರೂ ಪಡೆಯಬಹುದು. ಜತೆಗೆ ಅವರು ಪ್ರತಿಯೊಂದು ಜಿಲ್ಲೆಗ ಳಲ್ಲಿ, ತಮ್ಮ ಗ್ರಾಮಗಳಲ್ಲಿ ಹಾಗೂ ಪ್ರತೀ ಗ್ರಾಮಗಳಲ್ಲಿನ ಫಲಾನುಭವಿಗಳ ಪಟ್ಟಿಯನ್ನು ನೋಡಬಹುದು, ಜತೆಗೆ ನೀರಿನ ಇತ್ತೀಚಿನ ಗುಣಮಟ್ಟವನ್ನೂ ಸಹ ಪರಿಶೀಲಿ ಸಬಹುದು, ಅಲ್ಲದೆ ಎಷ್ಟು ಸಂಖ್ಯೆಯ ಜಲಮೂಲಗಳನ್ನು ನಿರ್ಮಿಸಲಾಗಿದೆ ಗ್ರಾಮಗಳ ನೀರು ಬಳಕೆದಾರರ ಸಮಿತಿಯಲ್ಲಿ ಯಾರಿದ್ದಾರೆ ಮತ್ತು ತಂತ್ರಜ್ಞರ ಮಾಹಿತಿ ಯನ್ನೂ ಸಹ ಪಡೆಯಬಹುದಾಗಿದೆ. ಮಿಷನ್‌ನ ಸೆನ್ಸಾರ್‌ ಆಧಾರಿತ ನೀರಿನ ಗುಣಮಟ್ಟ ಪರೀಕ್ಷಾ ವ್ಯವಸ್ಥೆಯು ವಿಶ್ವ ದರ್ಜೆಯ ಮಟ್ಟಕ್ಕಿಂತ ಕಡಿಮೆಯಿಲ್ಲ. ಮುಕ್ತ ಸಾರ್ವಜನಿಕ ವೇದಿಕೆಗಳಲ್ಲಿ ದಿನದಲ್ಲಿ ಹಲವು ಬಾರಿ ನಿರ್ದಿಷ್ಟ ಮಾನ ದಂಡಗಳ ಮೂಲಕ ನೀರಿನ ನೈಜ ಸಮಯದ ಗುಣ ಮಟ್ಟ ವನ್ನು ಪರಿಶೀಲಿಸುವುದನ್ನು ನೋಡಬಹುದಾಗಿದೆ. ಮಿಷನ್‌ನ ನೀರಿನ ಗುಣಮಟ್ಟದ ಕುರಿತು ಪ್ರತ್ಯೇಕ ಲೇಖನ ಆವಶ್ಯಕತೆ ಇದೆ, ಅದನ್ನು ಇನ್ನೊಂದು ದಿನ ನೋಡೋಣ. ಒಟ್ಟಾರೆ ಒಂದೇ ಸಾಲಿನಲ್ಲಿ ಹೇಳುವುದಾದರೆ, ಜಲಜೀವನ್‌ ಮಿಷನ್‌ ಸ್ವತಃ ಜನರಿಗೆ ತಪಾಸಣೆ ಮಾಡಲು, ತೀರ್ಪು ನೀಡಲು ಮತ್ತು ನಿಜವಾಗಿಯೂ ಪ್ರಗತಿ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಅವಕಾಶ ಮಾಡಿಕೊಡುತ್ತದೆ.

ಜಲಜೀವನ್‌ ಮಿಷನ್‌ನ ಅಸಾಧಾರಣ ಕೆಲಸವನ್ನು ಉಲ್ಲೇಖೀಸುವಾಗ ನಾವು ಅದರ ಒಂದು ಸಾಧನೆಯನ್ನು ಹೆಚ್ಚಾಗಿ ಚರ್ಚಿಸುವುದಿಲ್ಲ, ಅದೆಂದರೆ ಮಹಿಳಾ ಸಶಕ್ತೀಕರಣ. ಮೊದಲಿಗೆ ಇದು, ಮಹಿಳೆಯರು ದೂರ ಕ್ರಮಿಸುವ ಅಗತ್ಯವನ್ನು ನಿವಾರಿಸುತ್ತದೆ, ಜತೆಗೆ ಸಮುದಾಯ ಮಟ್ಟದಲ್ಲಿ ಮಹಿಳಾ ನಾಯಕಿಯರನ್ನು ಸೃಷ್ಟಿಸುವ ಮೂಲಕ ಉದ್ಯೋಗ, ಕೌಶಲ ಮತ್ತು ಸಮಾಜದಲ್ಲಿ ಇದುವರೆಗೆ ಇದ್ದ ಲಿಂಗ ಪಾತ್ರಗಳಲ್ಲಿನ ಬದಲಾವಣೆಯನ್ನು ಪ್ರಮುಖವಾಗಿ ವೃದ್ಧಿಸುತ್ತಿದೆ. ಈ ಮಹಿಳಾ ನಾಯಕಿಯರು ತಮ್ಮನ್ನು ಶೇ.50ರಷ್ಟು ಮೀಸಲಿ ಟ್ಟಿರುವ ಗ್ರಾಮಗಳು ಮತ್ತು ಜಲ ನೈರ್ಮಲ್ಯ ಸಮಿತಿಗಳಲ್ಲಿ ಸ್ಥಾನ ಪಡೆಯುತ್ತಾರೆ ಮತ್ತು ಪೈಲಟ್‌ನ ಸ್ಥಾನ ಅಲಂಕರಿಸಿ, ಗ್ರಾಮಗಳ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಸಿದ್ಧಪಡಿಸುವುದು, ಅನುಷ್ಠಾನ, ನಿರ್ವಹಣೆ ಮತ್ತು ಕಾರ್ಯಾಚರಣೆ ಸೇರಿ ಎಲ್ಲ ಕಾರ್ಯದಲ್ಲಿ ಪ್ರತಿಕ್ಷಣವೂ ತೊಡಗಿಸಿಕೊಳ್ಳುತ್ತಾರೆ. ಅಲ್ಲದೆ ಪ್ರತೀ ಹಳ್ಳಿಯ 5ಕ್ಕಿಂತ ಹೆಚ್ಚು ಮಹಿಳೆಯರಿಗೆ ನೀರಿನ ಗುಣಮಟ್ಟದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿದೆ ಮತ್ತು ಹಲವು ಮಹಿಳೆಯರು ಪ್ಲಂಬರ್‌, ಮೆಕ್ಯಾನಿಕ್‌, ಪಂಪ್‌ ಆಪರೇಟರ್‌ ಮತ್ತಿತರ ಕೌಶಲ್ಯಗಳನ್ನು ಹೊಂದಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಈ ಎರಡು ವರ್ಷಗಳಲ್ಲಿ, ಮಹಿಳೆಯರು ಈ ಹೊಸ ಜವಾಬ್ದಾರಿಗಳಿಗೆ ಸಕ್ರಿಯವಾಗಿ ಹೆಜ್ಜೆ ಹಾಕುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಈ ಕ್ರಿಯಾಶೀಲ ಮಹಿಳೆಯರು ಯುವ ಬಾಲಕಿಯರ ಮೇಲೆ ಬೀರಲಿರುವ ಪರಿಣಾಮ ನಿಜಕ್ಕೂ ಅಪಾರ. ಅವರ ನೆರಳಿನಲ್ಲಿ ಯುವ ಬಾಲಕಿಯರು ಬೆಳೆಯುತ್ತಾರೆ ಮತ್ತು ಭವಿಷ್ಯದಲ್ಲಿ ಅವರು ಇತರೆ ಸ್ಥಾಪಿತ ಲಿಂಗಪಾತ್ರಗಳನ್ನು ಕಸಿದುಕೊಳ್ಳುತ್ತಾರೆ.

ಮೆಮೆಟಿಕ್ಸ್‌ ಎಂದು ಕರೆಯಲ್ಪಡುವ ವಿಭಿನ್ನ ಅಧ್ಯಯನವಿದೆ, ಅದರಲ್ಲಿ ಕೆಲವು ಆಲೋಚನೆಗಳು ಜೀವಂತ ಘಟಕಗಳಂತೆ ಕಾರ್ಯನಿರ್ವಹಿಸುತ್ತವೆ, ಅವು ಮರು ಉತ್ಪಾದಿಸುತ್ತವೆ, ಕೆಲವೊಮ್ಮೆ ಅವು ಸರಳವಾಗಿ ಪುನರಾವರ್ತನೆಯಾಗುತ್ತವೆ, ಕೆಲವೊಮ್ಮೆ ವಿಕಾಸ ಹೊಂದುತ್ತವೆ ಮತ್ತು ಅವು ದೀರ್ಘ‌ ಬದಲಾವಣೆಗೂ ಮುನ್ನ ವಾಸಿಸುವ ಜಗತ್ತನ್ನೇ ಬದಲಾಯಿಸುತ್ತದೆ. ಪ್ರಧಾನಿಯಿಂದ ಪ್ರತೀ ಮನೆಗೂ ಕೊಳಾಯಿ ಸಂಪರ್ಕ ಕಲ್ಪಿಸುವ ಕಲ್ಪನೆ ಜೀವಂತ ಘಟಕವಾಗಿ ಮಾರ್ಪಟ್ಟಿದ್ದು, ಅದೊಂದು ಜಗತ್ತಿಗೆ ಹೊಳೆಯದ ಕ್ರಿಯಾತ್ಮಕ ಯೋಜನೆ ಯಾಗಿದೆ. ಪ್ರತೀ ಕೊಳಾಯಿಯೊಂದಿಗೆ ಮತ್ತು ಪ್ರತೀ ಜಲ ನೈರ್ಮಲ್ಯ ಸಮಿತಿಗಳೊಂದಿಗೆ ಅದನ್ನು ಪುನರಾವರ್ತಿಸಲಾ ಗುತ್ತಿದೆ ಮತ್ತು ಈ ಆಲೋಚನೆಯೇ ಮಹಿಳಾ ಸಶಕ್ತೀ ಕರಣದ ಪರಿಕಲ್ಪನೆ ಯನ್ನು ತನ್ನೊಳಗೆ ಬೆಸೆಯುವುದಲ್ಲದೆ ಹೊಸತನ್ನು ಪರಿವರ್ತನೆ ಗೊಳಿಸುತ್ತಿದೆ. 2024ರ ವೇಳೆಗೆ ಪ್ರತೀ ಮನೆಗೂ ಕೊಳಾಯಿ ನೀರಿನ ಸಂಪರ್ಕ ಕಲ್ಪಿಸುವ ಜಲ ಜೀವನ್‌ ಮಿಷನ್‌ ಎಂಬ ಕಲ್ಪನೆಯು ನೀರಿನ ವಲಯದಲ್ಲಿ ಮಾತ್ರವಲ್ಲದೆ, ಇತರ ಸಂಬಂಧಿತ ವಲಯಗಳ ಮೇಲೂ ಯಾವ ರೀತಿಯ ಪರಿವರ್ತನೆ ತರಲಿದೆ. ಅಲ್ಲಿಯವರೆಗೆ ನಾವು ಮನೆಗಳಿಗೆ ಹೊಸ ನಲ್ಲಿ ನೀರಿನ ಸಂಪರ್ಕ ಒದಗಿಸುತ್ತಲೇ ಇರುತ್ತೇವೆ, ಹೊಸ ಮಹಿಳಾ ನಾಯಕಿ ಯರನ್ನು ಸೃಷ್ಟಿಸುತ್ತೇವೆ ಮತ್ತು ಅವರ ಮೊಗದಲ್ಲಿ ಹೊಸ ಮುಗುಳ್ನಗೆ ಮೂಡಿಸುತ್ತಲೇ ಇರುತ್ತೇವೆ.

– ಗಜೇಂದ್ರ ಸಿಂಗ್‌ ಶೇಖಾವತ್‌, ಕೇಂದ್ರ ಜಲಶಕ್ತಿ ಸಚಿವರು

ಟಾಪ್ ನ್ಯೂಸ್

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ­ಅತ್ಯಗತ್ಯ

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

One Nation, One Election; ಏಕ ಚುನಾವಣೆ: ಸಾಂವಿಧಾನಿಕ ಸವಾಲು

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

Train ಹಳಿ ಧ್ವಂಸ ತಡೆಯಲು ನಾವೇನು ಮಾಡಬಹುದು?

3-

Investigative Authorities: ಕುಸಿಯುತ್ತಿದೆ ತನಿಖಾ ಪ್ರಾಧಿಕಾರಗಳ ವಿಶ್ವಾಸಾರ್ಹತೆ !

ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

Employment: ಉದ್ಯೋಗ, ಅರ್ಹತೆ ಮತ್ತು ವೃತ್ತಿ ನಿಷ್ಠೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.