Congressನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ’: ಆರ್. ಅಶೋಕ್
Team Udayavani, Aug 9, 2024, 1:22 AM IST
ಶ್ರೀರಂಗಪಟ್ಟಣ: ಕಳ್ಳರನ್ನು ಪೊಲೀಸರು ಓಡಿಸಿಕೊಂಡು ಹೋದಂತೆ ನಾವು ಕಾಂಗ್ರೆಸ್‌ನವರನ್ನು ಓಡಿಸಿಕೊಂಡು ಮೈಸೂರಿನತ್ತ ಹೋಗುತ್ತಿದ್ದೇವೆ ಎಂದು ವಿಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದರು.
ಪಟ್ಟಣದ ಬೆಂಗಳೂರು-ಮೈಸೂರು ಹೆದ್ದಾರಿ ವೃತ್ತದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ನಮ್ಮ ಖಜಾನೆಯಲ್ಲಿದ್ದ ಬಡವರ ದುಡ್ಡನ್ನು ಕಾಂಗ್ರೆಸ್‌ನವರು ಲೂಟಿ ಮಾಡಿದ್ದಾರೆ. ಅವರು ಮೈಸೂರಿನತ್ತ ಹೋಗುತ್ತಿದ್ದಾರೆ. ನಾವು ಅವರನ್ನು ಹಿಡಿಯಲು ಹೋಗುತ್ತಿದ್ದೇವೆ. ನಾವು ಮೈಸೂರು ನೋಡಲು ಹೋಗುತ್ತಿಲ್ಲ ಎಂದು ಕಿಡಿಕಾರಿದರು.
ಮುಡಾದಲ್ಲಿ ಬಡವರಿಗೆ ಹಂಚಬೇಕಾದ ನಿವೇಶನಗಳನ್ನು ಕಾವಲು ಕಾಯಿರಿ ಎಂದು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಆದರೆ ನೀನು ಬಂದಿದ್ದನ್ನೆಲ್ಲ ಬಾಚಿಕೊಳ್ಳಲು ಆರಂಭಿಸಿದ್ದೀಯಾ. ಆ ಕಡೆ ಶಾಸಕರು ವರ್ಗಾವಣೆಯಲ್ಲಿ ಹಣ ಮಾಡಲು ಮುಂದಾಗಿದ್ದಾರೆ. ರಾಜೀನಾಮೆ ಕೊಡುವವರೆಗೂ ಹೋರಾಟ ಮಾಡುತ್ತೇವೆ ಎಂದರು.
ಇದನ್ನು ಇಲ್ಲಿಯೇ ಬಿಡುತ್ತಾರೆಂದು ಸಿದ್ದರಾಮಯ್ಯ ತಿಳಿದುಕೊಂಡಿರಬಹುದು. ಆದರೆ ಕಾಂಗ್ರೆಸ್ ಅವನತಿ ಆಗುವವರೆಗೂ ನಾವು ಬಿಡುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Sugarcane: ನ.8ರಿಂದ ಕಬ್ಬು ಕಟಾವು ಆರಂಭಿಸಿ: ರೈತರಿಗೆ ಸಚಿವ ಶಿವಾನಂದ ಪಾಟೀಲ ಮನವಿ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Hubli: ವಕ್ಫ್ ಬೋರ್ಡ್ ಆಸ್ತಿ ಸಿದ್ದು ಸರ್ಕಾರದ ಕಬಳಿಕೆಗೆ ಕುಮ್ಮಕ್ಕು: ಪ್ರತಾಪ್ ಸಿಂಹ
ತಹಶೀಲ್ದಾರ್ ಕಚೇರಿಯಲ್ಲಿ ಅನ್ನದಾತರ ಅಹೋರಾತ್ರಿ ಧರಣಿ… ಇಂದು ಜಿಲ್ಲಾಧಿಕಾರಿ ಜೊತೆ ಸಭೆ
MUST WATCH
ಹೊಸ ಸೇರ್ಪಡೆ
BBK11: ನಿಮ್ಮ ಸಹವಾಸನೇ ಬೇಡ.. ಎಲ್ಲದಕ್ಕೂ ಫುಲ್ ಸ್ಟಾಪ್ ಎಂದ ಮೋಕ್ಷಿತಾ; ಒಂಟಿಯಾದ ಮಂಜು
Waqf Land Issue: ಯಾವುದೇ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ: ಡಿಕೆ ಶಿವಕುಮಾರ್
Jammu-Kashmir: ಕುಪ್ವಾರದಲ್ಲಿ ಸೇನಾ ಕಾರ್ಯಾಚರಣೆ… ಉಗ್ರನ ಹ*ತ್ಯೆ, ಶಸ್ತ್ರಾಸ್ತ್ರ ವಶ
Bidar; ಕಲಾ ಬಿದರಿ ಸಂಗಮ-2024ಕ್ಕೆ ಚಾಲನೆ
Lalbag: ಪ್ಲಾಸ್ಟಿಕ್ ನಿಷೇಧ ಜಾರಿಗೆ ತಂಡಗಳ ರಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.