ಬೆಂಕಿ ಬಿದ್ದರೂ ಭೂರಿ ಭೋಜನ ಬಿಡಲಿಲ್ಲ; ವೈರಲ್ ಆದ ವಿಡಿಯೋ
Team Udayavani, Dec 1, 2021, 3:56 PM IST
ಮುಂಬಯಿ : ರೋಮ್ ಹೊತ್ತಿ ಉರಿಯುವಾಗ ದೊರೆ ನಿರೋ ಪಿಟೀಲು ಬಾರಿಸುತ್ತಿದ್ದ, ಮನೆಗೆ ಬೆಂಕಿ ಬಿದ್ದಾಗ ಯಾರೋ ಒಬ್ಬ ಬೀಡಿ ಹಚ್ಚಿದನಂತೆ ಇಂತಹ ಗಾದೆಗಳಿಗೆ ಹೊಸತೊಂದು ಸೇರಿಸಬಹುದು ಎನ್ನಬಹುದಾದ ವಿದ್ಯಮಾನ ಮುಂಬಯಿಯಲ್ಲಿ ನಡೆದಿದ್ದು, ವಿಡಿಯೋಗಳು ವೈರಲ್ ಆಗುತ್ತಿವೆ.
ಮದುವೆ ಮನೆಯಲ್ಲಿ ಭರ್ಜರಿ ಬಾಡೂಟ ಉಣ್ಣುವ ವೇಳೆ ಪಕ್ಕದಲ್ಲೇ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ನಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂಬಂತೆ ನಿರಾತಂಕವಾಗಿ ಅತಿಥಿಗಳು ಊಟ ಮುಂದುವರಿಸಿದ ವಿಡಿಯೋ ಇದೀಗ ವೈರಲ್ ಆಗಿದೆ.
ಮದುವೆಯ ಅತಿಥಿಗಳು ಸ್ಥಳದಲ್ಲಿ ಬೆಂಕಿ ಸ್ಫೋಟಗೊಳ್ಳುತ್ತಿದ್ದರೂ ಭೋಜನವನ್ನು ಮುಂದುವರಿಸಿದ್ದಾರೆ.
ಅಗ್ನಿಶಾಮಕ ದಳವು ಘಟನೆಯ ವೀಡಿಯೊವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು, “ಮದುವೆಯ ಪೆಂಡಾಲ್ ಗೆ ಬೆಂಕಿ ಹಿಡಿದರೂ ಅತಿಥಿಗಳು ಅದನ್ನು ಪರಿಗಣಿಸದೇ ರುಚಿಕರವಾದ ಊಟವನ್ನು ಹೇಗೆ ತಿನ್ನುತ್ತಿದ್ದಾರೆ ನೋಡಿ ಎಂದು ಬರೆದಿದೆ.
ಅತಿಥಿಗಳಲ್ಲಿ ಒಬ್ಬ ಮಾತ್ರ ಒಂದೆರಡು ಬಾರಿ ತಿರುಗಿ ಬೆಂಕಿಯನ್ನು ನೋಡುತ್ತಿರುವುದನ್ನು ಕಾಣಬಹುದು, ಆದರೆ ಆತ ಬೆಂಕಿಯ ಬಗ್ಗೆ ಕನಿಷ್ಠ ಚಿಂತಿತನಾಗದೆ ಭೂರಿ ಭೂಜನ ಆನಂದಿಸುವುದನ್ನು ಮುಂದುವರೆಸಿದ್ದಾನೆ.
ಮಹಾರಾಷ್ಟ್ರದ ಥಾಣೆಯ ಭಿವಂಡಿಯಲ್ಲಿ ಭಾನುವಾರ ರಾತ್ರಿ 10 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಮದುವೆ ವೇಳೆ ಪಟಾಕಿ ಸಿಡಿಸಿದ್ದರಿಂದ ಮದುವೆ ಮಂಟಪದ ಸ್ಟೋರ್ ರೂಂನಲ್ಲಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ತಂತ್ರಜ್ಞಾನವನ್ನು ಅರಿತು ಅಳವಡಿಸಿಕೊಳ್ಳಬೇಕು: ಯವಜನಕ್ಕೆ ಮೋದಿ ಕರೆ
Waqf ಆಸ್ತಿ ವಿವಾದ: ರಾಜ್ಯಗಳು ನೀಡಿದ ಮಾಹಿತಿಗೆ ಜೆಪಿಸಿ ಅತೃಪ್ತಿ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.