ಬುಧವಾರದ ರಾಶಿ ಫಲ: ಸಾಂಸಾರಿಕ ಸುಖ ವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ನಿರೀಕ್ಷಿತ ಧನಾಗಮ
Team Udayavani, Nov 30, 2022, 7:32 AM IST
ಮೇಷ: ವಿದ್ಯಾ ಜ್ಞಾನ ವೃದ್ಧಿ. ನಾಯಕತ್ವ ಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಸರ್ವಜನರಿಂದ ಗೌರವ. ಭ್ರಾತೃಮಾತೃ ಸಮಾನರಿಂದ ಪ್ರೋತ್ಸಾಹ. ಪಾಲುದಾರಿಕಾ ವ್ಯವಹಾರದಲ್ಲಿ ಅಭಿವೃದ್ಧಿ ಪ್ರಯಾಣ ಸುಖಕರ. ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಯೋಗ.
ವೃಷಭ: ಉದ್ಯೋಗದಲ್ಲಿ ಉತ್ತಮ ಬದಲಾವಣೆ ಅವಕಾಶ. ಸ್ವಾವಲಂಬಿಗಳಾಗಿ ಕಾರ್ಯಸಾಧಿಸಿಕೊಳ್ಳುವ ದಂಪತಿಗಳಿಗೆ ಪಾಲುದಾರಿಕಾ ವ್ಯವಹಾರಸ್ಥರಿಗೆ ಆಹಾರೋದ್ಯಮ ಕೃಷಿ ಹೈನುಗಾರರಿಗೆ ಶುಭ ಫಲ. ಸಾಂಸಾರಿಕ ಸುಖ ವೃದ್ಧಿ. ಪರೋಪಕಾರ ಮಾಡುವಾಗ ಜಾಗ್ರತೆ.
ಮಿಥುನ: ಸಂಚಾರದಿಂದ ನಿರೀಕ್ಷಿತ ಸಫಲತೆ. ಉತ್ತಮ ಧನಾರ್ಜನೆ. ದಂಪತಿಗಳಲ್ಲಿ ಅನುರಾಗ ಪ್ರೋತ್ಸಾಹ. ಉದಾರತೆಯಿಂದಲೂ ಸಂದರ್ಭಕ್ಕೆ ಸರಿಯಾಗಿ ಬುದ್ದಿವಂತಿಕೆ ಪರಾಕ್ರಮ ಪ್ರದರ್ಶನದಿಂದ ಜನಮನ್ನಣೆ ಗೌರವ ಪ್ರಾಪ್ತಿ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫಲ.
ಕರ್ಕ: ಧಾರ್ಮಿಕ ಸಾಮಾಜಿಕ ಆರ್ಥಿಕ ವಿಚಾರದಲ್ಲಿ ಚರ್ಚೆಗೆ ಅವಕಾಶ ನೀಡದೇ ತಾಳ್ಮೆ ಸಮಾದಾನದಿಂದ ವ್ಯವಹರಿಸಿ ಕಾರ್ಯ ಸಾಧಿಸಿಕೊಳ್ಳಿ. ಆರೋಗ್ಯದ ಕಡೆಗೆ ಗಮನಹರಿಸಿ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮ. ಪಾಲುದಾರಿಕಾ ವ್ಯವಹಾರದಲ್ಲಿ ಸಾಮರಸ್ಯಕ್ಕೆ ಆದ್ಯತೆ.
ಸಿಂಹ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫಲತೆ. ನಿರೀಕ್ಷಿತ ಧನಾಗಮ. ಸಹೋದರಾದಿ ಸಮಾನರಿಂದಲೂ ಕಾರ್ಮಿಕರಿಂದಲೂ ಸುಖ ಲಭಿಸುವ ದಿನ. ಸಹಾಯ ಮಾಡುವಾಗ ಎಚ್ಚರಿಕೆ ವಹಿಸಿ. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ.
ಕನ್ಯಾ: ಉತ್ತಮ ಅಭಿವೃದ್ಧಿ ಇದ್ದರೂ ಆರ್ಥಿಕ ವಿಚಾರದಲ್ಲಿ ಹಿಡಿತವಿರಲಿ. ದಾಕ್ಷಿಣ್ಯ ಪ್ರವೃತ್ತಿಯಿಂದ ಧನ ನಷ್ಟವಾಗುವ ಸಂಭವ. ಪಾಲುದಾರಿಕೆ ವ್ಯವಹಾರಸ್ಥರಿಗೆ ಉತ್ತಮ ಫಲಿತಾಂಶ ಲಭಿಸುವ ಅವಕಾಶ. ಸಾಂಸಾರಿಕ ಸುಖ ವೃದ್ಧಿ. ವಿದ್ಯಾರ್ಥಿಗಳಿಗೆ ಶುಭ.
ತುಲಾ: ಅನಿರೀಕ್ಷಿತ ಭಾಗ್ಯ ವೃದ್ಧಿ. ಗುರು ಹಿರಿಯರ ಪ್ರೋತ್ಸಾಹ ಸಹಕಾರ ಪ್ರಾಪ್ತಿ. ಹೆಚ್ಚಿದ ಸಂತೋಷ. ಭೂಮಿ ವಾಹನ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಮಿತ್ರರಿಂದ ಸಂತೋಷ ವಾರ್ತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ವೃಶ್ಚಿಕ: ಪರಿಶ್ರಮಕ್ಕೆ ತಕ್ಕ ಸ್ಥಾನಮಾನ ಲಭಿಸಿದ ಸಂತೋಷ. ದೂರದ ವ್ಯವಹಾರಗಳಲ್ಲಿ ಧನಾಗಮನ. ಚುರುಕುತನ ಬುದ್ಧಿವಂತಿಕೆಯಿಂದ ಕೂಡಿದ ಕಾರ್ಯವೈಖರಿ. ಮಿತ್ರರ ಸಹಕಾರ. ಭೂಮಿ ಆಸ್ತಿ ವಿಚಾರಗಳ ಹೆಚ್ಚಿದ ಜವಾಬ್ದಾರಿ.
ಧನು: ಉದ್ಯೋಗ ವ್ಯವಹಾರ ಕೆಲಸ ಕಾರ್ಯಗಳಲ್ಲಿ ತನ್ಮಯತೆ. ನಿರೀಕ್ಷಿತ ಫಲ ಲಭಿಸಿದ ತೃಪ್ತಿ. ಸ್ಥಾನ ಮಾನ ಗೌರವ ಪ್ರಾಪ್ತಿ. ಮಕ್ಕಳಿಂದ ಸಂತೋಷ. ವಿದ್ಯೆ ಜ್ಞಾನ ಪ್ರಗತಿ ಕೀರ್ತಿ ಸಂಪಾದನೆ. ಅನಿರೀಕ್ಷಿತ ಧನ ಸಂಚಯನ. ಗುರುಹಿರಿಯರ ಮಾರ್ಗದರ್ಶನದ ಲಾಭ ಪಡೆಯಿರಿ.
ಮಕರ: ಆರೋಗ್ಯ ಗಮನಿಸಿ. ದೇಹಕ್ಕೆ ಹೆಚ್ಚು ಶ್ರಮ ನೀಡದಂತೆ ಕಾರೊÂàನ್ಮುಖರಾಗಿರಿ. ಅನಿರೀಕ್ಷಿತ ಬಹು ಉದ್ಯೋಗ ಜವಾಬ್ದಾರಿ. ಸಫಲತೆ. ಜ್ಞಾನಾರ್ಜನೆಯಲ್ಲಿ ತಲ್ಲೀನತೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ಕುಂಭ: ಮಾನಸಿಕ ನೆಮ್ಮದಿ ಚುರುಕುತನದಿಂದ ಕೂಡಿದ ಕಾರ್ಯವೈಖರಿ. ವಿದ್ಯೆ ಜ್ಞಾನ ಸಂಬಂಧೀ ವಿಚಾರಗಳಲ್ಲಿ ಪ್ರಗತಿ. ದಾಂಪತ್ಯ ತೃಪ್ತಿಕರ. ಆರೋಗ್ಯದಲ್ಲಿ ಸುಧಾರಣೆ. ಗೃಹದಲ್ಲಿ ಸಂತಸದ ವಾತಾವರಣ. ಆಸ್ತಿ ವಿಚಾರದಲ್ಲಿ ಎಚ್ಚರಿಕೆಯ ನಡೆಯಿಂದ ಲಾಭ.
ಮೀನ: ಸಾಂಸಾರಿಕ ಸುಖ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ. ದಂಪತಿಗಳಲ್ಲಿ ಅನುರಾಗ ವೃದ್ಧಿ. ದೂರ ಪ್ರಯಾಣ. ಪಾಲುಗಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ. ಗೃಹೋಪ ವಸ್ತುಗಳ ಸಂಗ್ರಹ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.