ವಾರ ಭವಿಷ್ಯ: ಈ ವಾರ ಯಾವ ರಾಶಿಯವರಿಗಿದೆ ಅದೃಷ್ಟ?


Team Udayavani, Jan 5, 2020, 10:00 AM IST

weekly

ಮೇಷ: ದೈವಾನುಗ್ರಹದಿಂದ ಸುಖೀ ಸಂಸಾರ. ಅಧಿಕಾರ ಪ್ರಾಪ್ತಿ ಯ ಜತೆಗೂಡಿ ಸಾಮಾಜಿಕವಾಗಿ ಸ್ಥಾನಮಾನ, ಗೌರವ ನೀಡಲಿದೆ. ಗೃಹ ನಿರ್ಮಾಣಯಾ ಖರೀದಿ, ವಾಹನ, ಸ್ಥಿರ ಸೊತ್ತುಗಳ ಕ್ರಯ-ವಿಕ್ರಯಗಳಿಗೆ ಸಕಾಲವಾದೀತು. ಬಂಧುಮಿತ್ರರ ಸಹಕಾರದಿಂದ ಯಶಸ್ಸು, ನೆಮ್ಮದಿಯನ್ನು ಕಾಣುವಿರಿ. ಶ್ರೀದೇವತಾ ದರ್ಶನ ಭಾಗ್ಯದ ಚಿಂತನೆ ಕಾರ್ಯಗತವಾಗಲಿದೆ. ತಗಾದೆಯಲ್ಲಿ ರಾಜೀ ಮನೋಭಾವದಿಂದ ಲಾಭವಿದೆ. ನಿರುದ್ಯೋಗಿಗಳಿಗೆ ಶೀಘ್ರ ರೂಪದಲ್ಲಿ ಕಾರ್ಯಾನುಕೂಲವಾದೀತು.
ಶುಭವಾರ: ಸೋಮ, ಗುರು, ಶನಿವಾರ

ವೃಷಭ: ಸಾಂಸಾರಿಕವಾಗಿ ಪತ್ನಿಯಿಂದ ಅನಾವಶ್ಯಕ ಕೋಪ, ಹಠ ಪ್ರವೃತ್ತಿ ಹೆಚ್ಚಾಗಿ ಕಿರಿಕಿರಿಯೆನಿಸಲಿದೆ. ತಾಳ್ಮೆ-ಸಮಾಧಾನದಿಂದ ಮುಂದುವರಿಯಿರಿ. ಆರ್ಥಿಕವಾಗಿ ತುಸು ಜಾಗ್ರತೆ ವಹಿಸಿದಲ್ಲಿ ಉಳಿತಾ ಯವಾಗಲಿದೆ. ಆಪ್ತೇಷ್ಟರ ಯಾ ಹಿರಿಯರ ವಿರೋಧಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಅನಿರೀಕ್ಷಿತ ವಾಹನ ಖರೀದಿ ನಡೆಯಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶ ತುಸು ಸಮಾಧಾನ ತಂದೀತು. ವಿವಾಹ ಪ್ರಸ್ತಾವಗಳಿಗೆ ಹೆಚ್ಚಿನ ಹೊಂದಾಣಿಕೆ ಹಾಗೂ ಪ್ರಯತ್ನಬಲ ಅಗತ್ಯ.
ಶುಭವಾರ: ಮಂಗಳ, ಶುಕ್ರ, ಭಾನುವಾರ

ಮಿಥುನ: ವೃತ್ತಿರಂಗದಲ್ಲಿ ಹಗಲಿರುಳು ಉರುಳುಸೇವೆಗೈಯುವ ಕಾಲಚಕ್ರದ ಅನುಭವವನ್ನು ತಂದುಕೊಡಲಿದೆ. ಹಿತಶತ್ರುಗಳ ಭಾದೆಯಿಂದ ಆಗಾಗ ಮಾನಸಿಕ ನೋವನ್ನು ಅನುಭವಿಸುವ ಪ್ರಸಂಗ ಬಂದೀತು. ಜಾಗ್ರತೆ ವಹಿಸಿರಿ. ಅವಿವಾಹಿತರಿಗೆ ವಿವಾಹ ಭಾಗ್ಯಕ್ಕೆ ವಿಘ್ನ. ಸಾಂಸಾರಿಕವಾಗಿ ಹೆಂಡತಿ, ಮಕ್ಕಳ ಬಗ್ಗೆ ಅಧಿಕ ರೂಪದಲ್ಲಿ ಧನವ್ಯಯವಾದೀತು. ಆರೋಗ್ಯದಲ್ಲಿ ಉದಾಸೀನತೆ ತೋರದಿರಿ. ಎಣಿಕೆಗೆ ತಕ್ಕಂತೆ ಆದಾಯ ಕೈಗೆ ಸಿಗಲಾರದು. ಕೆಲವೊಮ್ಮೆ ಎಡೆಬಿಡದೆ ತಲೆಬಿಸಿ ಉದ್ವೇಗಕ್ಕೆ ಕಾರಣರಾಗದಂತೆ ಕಾಳಜಿ ವಹಿಸಿರಿ.
ಶುಭವಾರ: ಬುಧ, ಶುಕ್ರ, ಭಾನುವಾರ

ಕರ್ಕಾ: ಕಾರ್ಯಕ್ಷೇತ್ರದಲ್ಲಿ ಹಿತಶತ್ರುಗಳು ನಿಮ್ಮನ್ನು ಹೆದರಿಸಿಯಾರು. ಬೇಸತ್ತ ಅವಿವಾಹಿತರಿಗೆ ಕಂಕಣಬಲ ವರದಾನವಾಗಲಿದೆ. ಸಾಂಸಾರಿಕವಾಗಿ ಚಿಂತಿತ ಕೆಲಸಕಾರ್ಯಗಳು ಹಂತ ಹಂತವಾಗಿ ನಡೆದುಹೋಗಲಿದೆ. ಗೃಹ ನಿರ್ಮಾಣ, ಭೂ ಸಂಬಂಧಿ ವ್ಯವಹಾರಗಳು ಸದ್ಯದಲ್ಲೇ ಹೇರಳ ಲಾಭ ತಂದುಕೊಡಲಿದೆ. ಉದಾರ ಮನಸ್ಸು ಕೆಲವೊಮ್ಮೆ ಅನಾವಶ್ಯಕ ತೊಂದರೆಗಳಿಗೆ ಸಿಲುಕಲಿದೆ. ಜಾಗ್ರತೆ ವಹಿಸಿರಿ. ಸ್ವಯಂಪ್ರಜ್ಞೆ ಬೇಕಾದೀತು. ನಿರೀಕ್ಷಿತ ಫ‌ಲಿತಾಂಶ ವಿದ್ಯಾರ್ಥಿಗಳ ಮುನ್ನಡೆಗೆ ಸಾಧಕವಾಗಲಿದೆ.
ಶುಭವಾರ: ಗುರು, ಶನಿ, ಭಾನುವಾರ

ಸಿಂಹ: ಗುರುಬಲದಿಂದ ನಿಮ್ಮ ಮನೋಕಾಮನೆಗಳು ಒಂದೊಂದಾಗಿ ನೆರವೇರಲಿವೆ. ಆರ್ಥಿಕವಾಗಿ ಉನ್ನತಿ ತೋರಿಬಂದು ಋಣಭಾರದ ಚಿಂತೆ ನಿವಾರಣೆಯಾದೀತು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಆತ್ಮವಿಶ್ವಾಸ, ಕಠಿಣ ಪ್ರಯತ್ನಬಲ ಸಾರ್ಥಕವಾಗಿ ನಿಶ್ಚಿತ ರೂಪದಲ್ಲಿ ಸಾಫ‌ಲ್ಯದ ಸವಿ ಕಾಣುವಿರಿ. ಬಂಧು ಬಳಗದವರ ಪ್ರೀತಿ-ವಿಶ್ವಾಸದಿಂದ ಎಣಿಕೆಗೆ ಮೀರಿ ಸಹಕಾರ ಸಿಗಲಿದೆ. ಅನಿರೀಕ್ಷಿತ ಶುಭವಾರ್ತೆ ತರಲಿದೆ.
ಶುಭವಾರ: ಸೋಮ, ಮಂಗಳ, ಗುರುವಾರ

ಕನ್ಯಾ: ಚಿತ್ತಕ್ಕೆ ವಿತ್ತನಾಶದ ಅನುಭವವಾದೀತು. ವೃತ್ತಿರಂಗದಲ್ಲಿ ಶಿಸ್ತು ಭಂಗ, ದುಡುಕು ನಿರ್ಧಾರಗಳಿಂದ ಕೆಲಸಕಾರ್ಯಗಳಿಗೆ ಅಭಿವೃದ್ಧಿ ಇರದು. ಆಗಾಗ ಮಾನಹಾನಿಯ ಪ್ರಸಂಗ ತಂದೀತು. ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಕ್ಷಣವೂ ಬಿಡುವು ದೊರಕದು. ತಾತ್ಕಾಲಿಕ ಹುದ್ಧೆಯವರಿಗೆ ಖಾಯಂ ಆಗುವ ಭರವಸೆ ಸಿಗಲಿದೆ. ವೃತ್ತಿರಂಗದಲ್ಲಿ ನಿಮ್ಮ ಪರಿಶ್ರಮದ ಬೆಲೆ ಗೋಚರಕ್ಕೆ ಬರಲಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಫ‌ಲಿತಾಂಶದಿಂದ ಮುಂದಿನ ಭವಿಷ್ಯಕ್ಕೆ ಸಹಕಾರಿಯಾಗಲಿದೆ.
ಶುಭವಾರ: ಗುರು, ಶನಿ, ಭಾನುವಾರ

ತುಲಾ: ಈ ವಾರ ನಿಮ್ಮಿಷ್ಟದಂತೆ ಕೆಲಸಕಾರ್ಯಗಳು ನಡೆಯದೆ ತೊಂದರೆಯನ್ನು ಅನಭವಿಸಬೇಕಾದೀತು. ಪತ್ನಿಯೊಂದಿಗೆ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹಕ್ಕೆ ಕಾರಣವಾದೀತು. ಅವಿವಾಹಿತರಿಗೆ ಆಕಸ್ಮಿಕವಾಗಿ ಬಂದ ವಿವಾಹ ಪ್ರಸ್ತಾವಗಳು ತಪ್ಪಿಹೋಗಲಿದೆ. ವೃತ್ತಿರಂಗದಲ್ಲಿ ಹಿತಶತ್ರುಗಳ ಚಾಡಿ ಮಾತುಗಳಿಂದ ಅಪವಾದ ಭೀತಿ ತಂದೀತು. ಹೆಚ್ಚಿನ ಕಾಳಜಿ ವಹಿಸಬೇಕಾದೀತು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶಗಳು ಒದಗಿಬಂದಾವು. ಉಷ್ಣ ಪ್ರವೃತ್ತಿಯಿಂದ ದೇಹಾರೋಗ್ಯ ಹೆಚ್ಚೀತು.
ಶುಭವಾರ: ಗುರು, ಶುಕ್ರ, ಶನಿವಾರ

ವೃಶ್ಚಿಕ: ನಿವೇಶನ, ಗೃಹ ಖರೀದಿಗೆ ಸಕಾಲವಲ್ಲ. ದೇಹ, ಮನಸ್ಸನ್ನು ಚುರುಕಾಗಿಸಿರಿ. ಕಾಲಯಾಪನ ದುರ್ಭರವೆನಿಸೀತು. ಗೆಳೆಯರ ಸಲಹೆ, ವಿರೋಧಗಳು ಮಾನಸಿಕ ಅಸ್ಥಿರತೆಗೆ ಕಾರಣವಾಗಿ ಕಾರ್ಯಾ ನುಕೂಲಕ್ಕೆ ತಣ್ಣೀರೆರಚಲಿದೆ. ವಿವಾಹ ಪ್ರಯತ್ನಬಲದ ಫ‌ಲಗಳು ಸದ್ಯದಲ್ಲೇ ಗೋಚರಕ್ಕೆ ಬರುತ್ತವೆ. ಸದುಪಯೋಗಿಸಿಕೊಳ್ಳಿ. ಶೇರು, ಸಟ್ಟಾ , ಲಾಟರಿಯಲ್ಲಿ ಚೇತರಿಕೆ ಕಂಡುಬಂದು ಅನಿರೀಕ್ಷಿತ ರೂಪದಲ್ಲಿ ಲಾಭಾಂಶ ನಾನಾ ರೀತಿಯಲ್ಲಿ ವೃದ್ಧಿಯಾಗಲಿದೆ. ಶ್ರಮದ ದುಡಿಮೆಯಲ್ಲಿ ಹೆಚ್ಚಿನ ವಿಶ್ವಾಸ ಮುನ್ನಡೆಗೆ ಸಾಧಕವಾದೀತು.
ಶುಭವಾರ: ಸೋಮ, ಮಂಗಳ, ಗುರುವಾರ

ಧನು: ಕಾರ್ಯರಂಗದಲ್ಲಿ ಶ್ರಮ ಹೆಚ್ಚಿದಷ್ಟು ಹೆಚ್ಚಿನ ಕಾರ್ಯ ಲಾಭವಾಗಲಿದೆ. ಸಕಾಲ ಚಿಂತನ ಮುಂದಿನ ಭವಿಷ್ಯಕ್ಕೆ ಪೂರಕವಾದೀತು. ಆಗಾಗ ವಿಘ್ನಗಳಿವೆ. ಜಾಣ್ಮೆಯಿಂದ, ತಾಳ್ಮೆಯಿಂದ ವರ್ತಿಸಿರಿ. ನಿರೀಕ್ಷಿತ ಉದ್ಯೋಗ ಲಾಭದಿಂದ ನಿರುದ್ಯೋಗಿಗಳ ಜಂಜಾಟ ಕಡಿಮೆಯಾಗಲಿದೆ. ಸಂಧಿನೋವು, ಹೊಟ್ಟೆಯುಬ್ಬರ, ಕಾಲ್ಮುರಿತದಂಥ ಅನಾರೋಗ್ಯದ ಸೂಚನೆ ತಂದೀತು. ಕಾಳಜಿ ವಹಿಸಿರಿ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಅಭಿವೃದ್ಧಿ ಧನಸಂಗ್ರಹಕ್ಕೆ ಸಾಧಕವಾದೀತು.
ಶುಭವಾರ: ಮಂಗಳ, ಬುಧ, ಶುಕ್ರವಾರ

ಮಕರ: ಕಠಿಣ ಪರಿಶ್ರಮ, ಆತ್ಮವಿಶ್ವಾಸದ ನಿಮ್ಮ ಸ್ವಭಾವ ಕಾರ್ಯ ಸಾಧನೆಗೆ ಪೂರಕವಾದರೂ ಸದ್ಯದ ಸ್ಥಿತಿಯಲ್ಲಿ ಅಡೆತಡೆಗಳಿಂದಲೇ ವಿಳಂಬವಾದೀತು. ವೃತ್ತಿರಂಗದಲ್ಲಿ ಹೆಚ್ಚಿನ ಅಭಿವೃದ್ಧಿ ತೋರಿಬಂದರೂ ಅತೃಪ್ತ ಮನೋಭಾವ ಇರುತ್ತದೆ. ಹೊಂದಾಣಿಕೆ ಸರಿಯಾಗಬಲ್ಲದು. ಮನೆ ಬದಲಿ ಸಂಭವ ತಂದೀತು. ಕುಟುಂಬ ವರ್ಗದವರಿಂದ ಎಲ್ಲ ರೀತಿಯ ಸಹಕಾರ ಸಿಗಲಿದೆ. ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲ ಪರೀಕ್ಷೆಯಲ್ಲಿ ಯಶಸ್ಸು ತರಲಿದೆ.
ಶುಭವಾರ: ಗುರು, ಶುಕ್ರ, ಶನಿವಾರ

ಕುಂಭ: ಹಲವು ತೊಡಕುಗಳು ಕಂಡುಬಂದರೂ ಕಾರ್ಯಸಾಧನೆ ನಿಶ್ಚಿತವಿದೆ. ದೂರಸಂಚಾರದಲ್ಲಿ ಜಾಗ್ರತೆ ವಹಿಸಿರಿ. ಸಾಂಸಾರಿಕವಾಗಿ ಮನದನ್ನೆಗೆ ಶಾಂತಿ, ಸಮಾಧಾನ ಸಿಗುವ ಸಮಯವಿದು. ವೈಯಕ್ತಿಕ ಆರೋಗ್ಯದ ಬಗ್ಗೆ ಗಮನನ ಹರಿಸಿರಿ. ನೂತನ ಹಣ ಹೂಡಿಕೆ ಬಗ್ಗೆ ಜಾಗ್ರತೆ ವಹಿಸಿರಿ. ಅವಿವಾಹಿತರಿಗೆ ನಿಶ್ಚಿತಾರ್ಥದ ಯೋಗವು ಕೂಡಿಬರಲಿದೆ. ನೂತನ ಗೃಹ ನಿರ್ಮಾಣ ಕಾರ್ಯಗಳ ಚಿಂತನೆ ನಡೆಯಲಿದೆ. ಧರ್ಮಕಾರ್ಯಕ್ಕೆ ವಿಘ್ನ ಬಂದೀತು. ರಾಜಕೀಯ ವರ್ಗದವರಿಗೆ ಅಭಿವೃದ್ಧಿ ಇರುತ್ತದೆ.
ಶುಭವಾರ: ಬುಧ, ಶುಕ್ರ, ಶನಿವಾರ

ಮೀನ: ಸ್ವಕ್ಷೇತ್ರದ ಗುರುಭ್ರಮಣ ಅನೇಕ ರೀತಿಯಲ್ಲಿ ಅನಿರೀಕ್ಷಿತ ಕಾರ್ಯಸಾಧನೆಗೆ ಅನುಕೂಲನಾಗಿ ಅಚ್ಚರಿ ತಂದಾನು. ಸಾಂಸಾರಿಕವಾಗಿ ಸುಖ, ಸಮಾಧಾನಗಳು ಕಂಡುಬರಲಿವೆ. ದೇವತಾದರ್ಶನ ಭಾಗ್ಯ, ತೀರ್ಥಯಾತ್ರೆ, ಕ್ಷೇತ್ರ ಸಂದರ್ಶನಾದಿಗಳಿಗೆ ಈ ವಾರ ಒಳಿತು. ಆಗಾಗ ಸಂಚಾರದಿಂದ ಆರೋಗ್ಯ ಭಾಗ್ಯ ಹದಗೆಟ್ಟಿàತು. ಕಾರ್ಯರಂಗದಲ್ಲಿ ಶ್ರಮಾಧಿಕ್ಯ ಉಂಟಾಗಲಿದೆ. ಉನ್ನತ ಸ್ತರದ ರಾಜಕೀಯ ವ್ಯಕ್ತಿಗಳ ಸ್ಥಾನಮಾನಗಳಿಗೆ ಧಕ್ಕೆ ಉಂಟಾದೀತು. ಕುಲದೇವತಾ ದರ್ಶನ ಭಾಗ್ಯದಿಂದ ಸಮಾಧಾನವಾದೀತು.
ಶುಭವಾರ: ಸೋಮ, ಶುಕ್ರ, ಭಾನುವಾರ.

ಎನ್‌. ಎಸ್‌. ಭಟ್‌

ಟಾಪ್ ನ್ಯೂಸ್

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

2nd ODI: ವನಿತಾ ಏಕದಿನ ಸರಣಿ: ಇಂದು ಭಾರತ-ವಿಂಡೀಸ್‌ 2ನೇ ಪಂದ್ಯ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ

Enforcement Directorate: ಕ್ರಿಮಿನಲ್‌ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi-Sess

Legislative House: ಶಾಸನಸಭೆಯೊಳಗೆ ಪೊಲೀಸ್‌ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು

1-eewqew

Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!

HD-Kumaraswmy

Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್‌.ಡಿ.ಕುಮಾರಸ್ವಾಮಿ

1-koteshwara

Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.