ವಾರ ಭವಿಷ್ಯ: ಈ ವಾರ ಈ ರಾಶಿಯವರಿಗೆ ಇದೆ ಬಂಪರ್ ಅದೃಷ್ಟ


Team Udayavani, Feb 2, 2020, 8:52 AM IST

horo

2-2-2020 ರಿಂದ 8-2-2020ರ ವರೆಗೆ

ಮೇಷ: ಕಾರ್ಯಕ್ಷೇತ್ರದಲ್ಲಿ ಕೀರ್ತಿಶಾಲಿಗಳಾಗುವಿರಿ. ಹಾಗೇ ಆತ್ಮೀಯರ ಸಲಹೆ, ಸಹಕಾರಗಳು ಮುನ್ನಡೆಗೆ ಸಾಧಕವಾಗಲಿದೆ. ಋಣ ಪರಿಹಾರದ ಚಿಂತೆ ನಿವಾರಣೆಯಾದೀತು. ಸಾಂಸಾರಿಕವಾಗಿ ಕಾಲೋಚಿತವಾದ ವರ್ತನೆ, ನಡೆನುಡಿ ನಿಮ್ಮ ಸ್ಥಾನಮಾನ, ವರ್ತನೆಯನ್ನು ವರ್ಧಿಸೀತು. ವ್ಯಾಪಾರಿ ವರ್ಗದವರಿಗೆ, ಬ್ಯಾಂಕಿಂಗ್‌ ಉದ್ಯಮಗಳಲ್ಲಿ ಶ್ರಮಕ್ಕೆ ತಕ್ಕುದಾದ ಆದಾಯ ಲಾಭದಾಯಕವಾಗಲಿದೆ. ಮನೆಯಲ್ಲಿ ಮಂಗಲ ಮಹೋತ್ಸವ ಸಂಭ್ರಮದ ಚಿಂತೆ ಕಾರ್ಯಗತವಾಗಲಿದೆ. ವಿದ್ಯಾರ್ಥಿಗಳ ಮನೋಕಾಮನೆ ಪೂರ್ಣವಾಗಲಿದೆ.
ಶುಭವಾರ: ಬುಧ, ಗುರು, ಶನಿವಾರ

ವೃಷಭ: ಕಾರ್ಯರಂಗದಲ್ಲಿ ನೀವೀಗ ತುಂಬಾ ಕ್ಲೇಶವನ್ನು ಅನುಭವಿಸಲಿದ್ದೀರಿ. ಆರೋಗ್ಯ ಹೀನತೆ ಒಂದೆಡೆಯಾದರೆ, ಎಣಿಕೆ ಎಲ್ಲಾ ವಿಫ‌ಲವಾಗಿ, ಪೌರುಷದ ಬಗ್ಗೆ ತಾತ್ಸಾರವೂ ಮೂಡೀತು. ವಿದ್ಯಾಭ್ಯಾಸದಲ್ಲಿ ಅಪಯಶಸ್ಸು, ಸಾಧನೆಗಾಗಿ ಹಿರಿಯರ ಭತ್ಸನೆ ಕೇಳಬೇಕಾದೀತು. ಉದ್ಯೋಗಿಗಳಿಗೆ ದೂರಕ್ಕೆ ವರ್ಗಾವಣೆಯ ಸುದ್ದಿ ಕೇಳಿಸಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಹೆಚ್ಚಿನ ಪರಿಶ್ರಮವು ಅಗತ್ಯವಿದೆ. ಆರ್ಥಿಕವಾಗಿ ಖರ್ಚು-ವೆಚ್ಚಗಳೇ ಅಧಿಕವಾದಾವು. ಆದರೂ ನಾನಾ ರೀತಿಯ ಧನಾಗಮನದಿಂದ ಅನುಕೂಲವಾಗುತ್ತದೆ.
ಶುಭವಾರ: ಸೋಮ, ಗುರು, ಶುಕ್ರವಾರ

ಮಿಥುನ: ಸಾರ್ಥಕತೆಯಿಂದ ಶತ್ರು ಭಯ ನಿವಾರಣೆಯಾದರೂ ಹಿತಶತ್ರುಗಳ ಬಾಧೆ ಬಿಡದು. ಆರ್ಥಿಕವಾಗಿ ಯಾರಿಗೂ ಸಾಲ ನೀಡದಿರಿ. ಆಗಾಗ ವ್ಯಯಾಧಿಕ್ಯವಾಗಿ ವ್ಯಾಪಾರಗಳಲ್ಲಿ ಹೊಸ ಹೂಡಿಕೆಯಿಂದ ಅಲ್ಪಸ್ವಲ್ಪ ಆದಾಯವನ್ನು ತಂದುಕೊಟ್ಟಿತು. ಪತ್ನಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದೀತು. ವೈಯಕ್ತಿಕವಾಗಿ ರಸಮಯ ಕ್ಷಣವಿದೆ. ನ್ಯಾಯಾಲಯದ ವಿವಾದಗಳು ಸದ್ಯಕ್ಕೆ ಮುಕ್ತಾಯಗೊಳ್ಳುವ ಲಕ್ಷಣಗಳು ತೋರಿಬರಲಾರದು. ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ನಿರಾಸೆ ತಂದೀತು.
ಶುಭವಾರ: ಮಂಗಳ, ಬುಧ, ಶುಕ್ರವಾರ

ಕರ್ಕಾ: ಈ ವಾರವು ಕೊಂಚ ಆಶಾದಾಯಕವಾದೀತು. ವೃತ್ತಿರಂಗದಲ್ಲಿ ತಾತ್ಕಾಲಿಕ ಸ್ಥಾನಮಾನ ದೊರೆತು ನೆಮ್ಮದಿ ತಂದೀತು. ಕ್ರೀಡಾರಂಗದಲ್ಲಿ ಕ್ರೀಡಾಕಾರರಿಗೆ ವಂಚನೆಯ ಆರೋಪ, ಪ್ರತ್ಯಾರೋಪಗಳು ತೋರಿಬಂದಾವು. ಕಳೆದುದನ್ನು ಗಳಿಸುವ ಪ್ರಯತ್ನ ಸಾಗಲಿ. ತೃಪ್ತಿ ಸಿಕ್ಕೀತು. ಮಾತೃಸೇವಾ, ಶುಶ್ರೂಷೆಗಾಗಿ ಖರ್ಚು ತರಲಿದೆ. ಆರೋಗ್ಯ ಭಾಗ್ಯ ಸುಧಾರಿಸಿದರೂ ಉದಾಸೀನತೆ ಮಾಡದಿರಿ. ಸಾಂಸಾರಿಕವಾಗಿ ಹುಸಿ ಅಪವಾದ ಚಿಂತೆ ಕಾಡೀತು. ನೂತನ ವಸ್ತುಗಳ ಖರೀದಿ, ಧನಹಾನಿ ತಂದುಕೊಡಲಿದೆ.
ಶುಭವಾರ: ಗುರು, ಶುಕ್ರ, ಶನಿವಾರ

ಸಿಂಹ: ನಿರೀಕ್ಷಿತ ಸ್ಥಾನವಲ್ಲದಿದ್ದರೂ ಸ್ಥಿತಿಗೆ ಮೋಸವಿಲ್ಲ. ‌ಸಹೋದ್ಯೋಗಿಗಳೊಂದಿಗೆ ಅನಾವಶ್ಯಕ ನಿಷ್ಠುರಕ್ಕೆ ಕಾರಣರಾಗದಿರಿ. ಕಾಳಜಿ ವಹಿಸಿರಿ. ಕೈಗಾರಿಕೆ, ಬ್ಯಾಂಕಿಂಗ್‌ ಕ್ಷೇತ್ರ, ವೈಜ್ಞಾನಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮುಂಭಡ್ತಿಯ ಯೋಗವಿದೆ. ಧನಭಾಗ್ಯ ವೃದ್ಧಿಯಾಗಲಿದೆ. ಶುಭಕಾರ್ಯದ ಸಮಾಲೋಚನೆಗಳು ಮನೆಯಲ್ಲಿ ನಡೆದಾವು. ನ್ಯಾಯಾಲಯದ ಕಡತಗಳ ವಿಲೇವಾರಿಯಲ್ಲಿ ವಿಳಂಬ ತೋರಿ ಬಂದರೂ ಸದ್ಯದಲ್ಲೇ ಮುಕ್ತಾಯ ಹಂತವನ್ನು ತಲುಪಲಿದೆ. ವಿದ್ಯಾರ್ಥಿಗಳು ಸಮಸ್ಯೆಗಳಿಂದ ಪಾರಾಗಿ ನೆಮ್ಮದಿ ಪಡೆಯಲಿದ್ದಾರೆ.
ಶುಭವಾರ: ಸೋಮ, ಗುರು, ಭಾನುವಾರ

ಕನ್ಯಾ: ಗೃಹದಲ್ಲಿ ಗೃಹಿಣಿಯ ಬೇಡಿಕೆಗೆ ಸ್ಪಂದಿಸಬೇಕಾದೀತು. ವೃತ್ತಿರಂಗದಲ್ಲಿ ಅಭಿವೃದ್ಧಿಯು ತೋರಿಬಂದರೂ ಆಗಾಗ ಮುಜು ಗರವನ್ನು ಅನುಭವಿಸುವಂತಾದೀತು. ಹೊಸ ಹೂಡಿಕೆಗೆ ಇದು ಸಕಾಲವಲ್ಲ. ಗೆಳೆತನದಲ್ಲಿ ವಿರಸ ಮೂಡೀತು. ವ್ಯರ್ಥ ದುರಭಿಮಾನಕ್ಕೆ ಒಳಗಾಗಿ ಉನ್ನತಿಯನ್ನು ಕಳೆದುಕೊಂಡೀರಿ. ಜಾಗ್ರತೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ವೃತ್ತಿ ಲಾಭದಿಂದ ಕೊಂಚ ಆಸರೆ ಕಂಡೀತು. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಯಶಸ್ಸು, ಸಾಧನೆ ತರಲಿದೆ.
ಶುಭವಾರ: ಮಂಗಳ, ಗುರು, ಶನಿವಾರ

ತುಲಾ: ಸ್ವತಂತ್ರ ಉದ್ಯೋಗಿಗಳು, ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದ ಇದ್ದರೆ ಮೂಲಧನ ಇಮ್ಮಡಿಯಾದೀತು. ಆಗಾಗ ತೋರಿಬರುವ ಕಾರ್ಯಸಾಧನೆಯ ಅಡ್ಡಿಯನ್ನು ನಿವಾರಿಸಿಕೊಳ್ಳಿರಿ. ಬೇಡಿಕೆ, ಈಡೇರಿಕೆಗಳ ತಾಕಲಾಟದಿಂದ ಕಿರಿಕಿರಿ ತಂದೀತು. ಕೌಟುಂಬಿಕವಾಗಿ ಆಕ್ಷೇಪ, ಭಿನ್ನಾಭಿಪ್ರಾಯದಿಂದ ಮನೋವ್ಯಾಕುಲ ಹೆಚ್ಚಲಿದೆ. ಹಿರಿಯರ ಸಲಹೆಗೆ ಕಿವಿಗೊಡಿರಿ. ಸಮಾಧಾನವಾಗಲಿದೆ. ಉದ್ಯೋಗಿಗಳಿಗೆ ವಾರಾಂತ್ಯದಲ್ಲಿ ಸ್ಥಾನ ಬದಲಾವಣೆ ಸೂಚನೆ ತಂದೀತು.
ಶುಭವಾರ: ಬುಧ, ಶುಕ್ರ, ಭಾನುವಾರ

ವೃಶ್ಚಿಕ: ಹೊಸ ಯೋಜನೆಯ ಯೋಚನೆ ಕಾರ್ಯಗತವಾಗಲಿದೆ.ಅತಿಥಿ ಅಭ್ಯಾಗತರ ಆಗಮನದಿಂದ ಮನಸ್ಸಿಗೆ ಶಾಂತಿಯಿದೆ. ವಿವೇಚನೆಯಿಂದ ಕಾರ್ಯವೆಸಗಿರಿ. ಜಯ ನಿಮ್ಮ ಪಾಲಿಗಿದೆ. ಹಾಗೇ ಅದೃಷ್ಟ ಅನುಕೂಲವೂ ಇದೆ. ನೂತನ ಧನಾದಾಯದ ಮೂಲಕ ಧನಾಭಿವೃದ್ಧಿ ತಂದೀತು. ನೂತನ ವಸ್ತ್ರಾಭರಣ ಯಾ ನಿವೇಶನ ಖರೀದಿಯಿಂದ ಸಂತಸ ತಂದೀತು. ರಾಜಕೀಯ ರಂಗದಾಟದಲ್ಲಿ ದಾಳ ಉರುಳಿದ್ದೇ ಗೊತ್ತಾಗದು. ಸ್ವರ್ಣ, ಲೋಹ, ಗೃಹೋಪಕರಣಗಳ ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ.
ಶುಭವಾರ: ಸೋಮ, ಮಂಗಳ, ಬುಧವಾರ

ಧನು: ಆರ್ಥಿಕವಾಗಿ ಆಗಾಗ ಹಿನ್ನಡೆ ತೋರಿಬಂದು ಸಮಸ್ಯೆಗಳು ಎದುರಾಗಲಿವೆ. ದುಡುಕು ನಿರ್ಧಾರದಿಂದ ಅನಾವಶ್ಯಕ ಕಿರಿಕಿರಿಯನ್ನು ಅನುಭವಿಸಲಿದ್ದೀರಿ. ಕಾಳಜಿ ವಹಿಸಿರಿ. ಕಾಲೋಚಿತವಾದ ನಡೆ-ನುಡಿ ನಿಮ್ಮ ಗಮನದಲ್ಲಿ ಇರಿಸಿಕೊಳ್ಳಿರಿ. ಕಾರ್ಯರಂಗದಲ್ಲಿ ಅವಿರತವಾಗಿ ಚಟುವಟಿಕೆ ದೇಹಾರೋಗ್ಯದಲ್ಲಿ ಪರಿಣಾಮ ತಂದೀತು. ಉದ್ಯೋಗಿಗಳಿಗೆ ವರ್ಗಾವಣೆಯಕಹಿಸುದ್ದಿ ಆತಂಕ ತಂದೀತು. ವಿದ್ಯಾರ್ಥಿಗಳಿಗೆ ಉದಾಸೀನತೆ ತೋರಿಬಂದು ಹಿನ್ನಡೆಯನ್ನು ಪಡೆಯುವಂತಾದೀತು.
ಶುಭವಾರ: ಬುಧ, ಗುರು, ಶುಕ್ರವಾರ

ಮಕರ: ಆರ್ಥಿಕವಾಗಿ ನಿಮ್ಮ ಪರಿಸ್ಥಿತಿಯು ಸುಧಾರಿಸಿ ಹೋಗಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಹೆಚ್ಚಿನ ಲಾಭ ಗಳಿಸಲಾಗುವುದಿಲ್ಲ. ಹಿರಿಯರ ಮಾತಿಗೆ ಬೆಲೆ ಇರಲಿ. ತಾಳ್ಮೆ, ಎಚ್ಚರಿಕೆಯಿಂದ ಹೊಸ ಕಾರ್ಯದಲ್ಲಿ ಹೆಜ್ಜೆ ಇರಿಸುವುದು ಅಗತ್ಯವಿದೆ. ಸಹೋದ್ಯೋಗಿಗಳ ದುವ್ಯವಹಾರ ಮುಂದಿನ ಅಭಿವೃದ್ಧಿಗೆ ಮಾರಕವಾದೀತು. ಎಚ್ಚರವಿರಲಿ. ಅವಿರತವಾದ ಸಂಚಾರ ದೇಹಾಯಾಸಕ್ಕೆ ಕಾರಣವಾಗಲಿದೆ. ಮನದಿನಿಯನ ಮನವರಿತು ನಡೆವ ಗೃಹಿಣಿಗೆ ಹಿಗ್ಗಿನ ಸುದ್ದಿ ಕಾದಿದೆ.
ಶುಭವಾರ: ಬುಧ, ಶುಕ್ರ, ಭಾನುವಾರ

ಕುಂಭ: ಶುಭದ ಆಶಾಕಿರಣ ತೋರಿಬರಲಿದೆ. ಆರೋಗ್ಯಭಾಗ್ಯ ವರ್ಧಿಸಲಿದೆ. ಎಚ್ಚರಿಕೆಯಿಂದ ಹೆಜ್ಜೆ ಇರಿಸಿದಲ್ಲಿ ಖರ್ಚುವೆಚ್ಚವೂ ಸಮತೋಲನದಲ್ಲಿ ಇದ್ದೀತು. ಯಾತ್ರೆ, ಪ್ರವಾಸಧರ್ಮ ಕಾರ್ಯಗಳು ನಡೆದಾವು. ಅವಿವಾಹಿತರ ನೆಂಟಸ್ತಿಕೆಯ ವಿಚಾರದಲ್ಲಿ ಮಧ್ಯವರ್ತಿಗಳ ಸಹಕಾರದ ಅಗತ್ಯವಿದೆ. ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು, ಸಂತಸ ತಂದೀತು. ವಿದ್ಯಾರ್ಥಿಗಳ ಅಭ್ಯಾಸಬಲ ಸಫ‌ಲವಾದರೂ ಆಗಾಗ ಉದಾಸೀನತೆ ಕಾಡಲಿದೆ.
ಶುಭವಾರ: ಶುಕ್ರ, ಶನಿ, ಭಾನುವಾರ.

ಮೀನ: ಎಡರುತೊಡರುಗಳಿದ್ದರೂ ಹಂತ ಹಂತವಾಗಿ ನವಚೈತನ್ಯ ಉಂಟಾಗಲಿದೆ. ಅತಿಥಿ ಅಭ್ಯಾಗತರ ಆಗಮನ, ನೆರೆಹೊರೆಯವರಿಂದ ದ್ವೇಷ ಸಾಧನೆ, ನೂತನ ಬಾಂಧವ್ಯ ವೃದ್ಧಿ ಮುಂತಾದ ಮಿಶ್ರಫ‌ಲ ತಂದೀತು. ಕಾರ್ಯರಂಗದಲ್ಲಿ ನಿಮ್ಮ ಕಾರ್ಯವೈಖರಿ ಇತರರಿಗೆ ಅಸೂಯೆಗೆ ದಾರಿ ಮಾಡೀತು. ವಿವಿಧ ಮೂಲಗಳಿಂದ ಧನಾಗಮನವಿದ್ದು ಆದಾಯಕ್ಕೆ ಕೊರತೆ ಬಾರದು. ಸಾಮರ್ಥ್ಯದಲ್ಲಿ ವಿಶ್ವಾಸವಿಡಿ.
ಶುಭವಾರ: ಸೋಮ, ಗುರು, ಶನಿವಾರ

 

ಏನ್. ಎಸ್. ಭಟ್

ಟಾಪ್ ನ್ಯೂಸ್

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ; 25ಕ್ಕೂ ಅಧಿಕ ಸಾ*ವು

Afghanistan: ತಾಲಿಬಾನ್‌ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.