ವಾರ ಭವಿಷ್ಯ: ಈ ರಾಶಿಯ ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ


Team Udayavani, Mar 1, 2020, 9:50 AM IST

h

1-3-2020 ರಿಂದ 7-3-2020ರ ವರೆಗೆ
ಮೇಷ: ಸಾಂಸಾರಿಕವಾಗಿ ನಿಮ್ಮ ಮನಸ್ಸು ಸದಾ ಯೋಚಿಸುವಂತಾಗಲಿದೆ. ಆಗಾಗ ಶುಭಮಂಗಲ ಕಾರ್ಯಗಳಿಗಾಗಿ ಓಡಾಟವು ಕಂಡು ಬರುವುದು. ದೈಹಿಕ ಆರೋಗ್ಯವು ಏರುಪೇರಾದರೂ ತಾತ್ಕಾಲಿಕವೆನ್ನಬಹುದು. ಸಾಂಸಾರಿಕವಾಗಿ ನೆಮ್ಮದಿ ಇದ್ದರೂ ಅನಾವಶ್ಯಕವಾಗಿ ಕಿರಿಕಿರಿ ತಪ್ಪಲಾರದು. ಅನೇಕ ವೇಳೆ ಸೃಜನಾತ್ಮಕವಾಗಿ ವಿಚಾರ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಬಗೆಹರಿಯಲಿವೆ. ಆರೋಗ್ಯ ಭಾಗ್ಯಕ್ಕಾಗಿ ಆಹಾರ ಪದ್ಧತಿ ಹಾಗೂ ಶಾರೀರಿಕವಾಗಿ ಸ್ವತ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾದೀತು.
ಶುಭವಾರ: ಸೋಮ, ಬುಧ, ಶುಕ್ರವಾರ

ವೃಷಭ: ವೃತ್ತಿರಂಗದಲ್ಲಿ ಹೆಚ್ಚು ಕೆಲಸ ಬಂದರೂ ಅವೆಲ್ಲವನ್ನು ನಿಭಾಯಿಸುವ ಸಾಧ್ಯತೆ ಬರುತ್ತದೆ. ನೀರಸವಾದ ನಿರುದ್ಯೋಗಿಗಳ
ದೈನಂದಿನ ಬದುಕಿನಲ್ಲಿ ಆಶಾಕಿರಣ ಮೂಡಿ ಬರುತ್ತದೆ. ಕಿಟಕಿ ಪ್ರೇಮಿಗಳಿಗೆ ಮದುವೆ ಅನಿವಾರ್ಯವಾಗಲಿದೆ. ವಿದ್ಯಾರ್ಥಿಗಳಾದವರು ದುಶ್ಚಟ ಹಾಗೂ ದುವ್ಯಸನಗಳ ಬಗ್ಗೆ ಜಾಗ್ರತೆ ವಹಿಸಬೇಕಾದೀತು. ಮದುವೆಯ ಮುಂಚಿನ ಪರೀಕ್ಷಾರ್ಥ ಹೊಂದಾಣಿಕೆಗಳು ಅವಿವಾಹಿತರಿಗೆ ಕಂಕಣಬಲಕ್ಕೆ ಪೂರಕವಾಗಲಿವೆ. ವ್ಯಾಪಾರ, ವ್ಯವಹಾರಗಳಲ್ಲಿ ಚೇತರಿಕೆಯು ವ್ಯಾಪಾರಸ್ಥರಿಗೆ
ಸಮಾಧಾನ ತಂದೀತು.
ಶುಭವಾರ: ಬುಧ, ಗುರು, ಶುಕ್ರವಾರ

ಮಿಥುನ: ಕಣ್ಣೆದುರೇ ನಡೆಯುವ ಮೋಸ, ವಂಚನೆಯನ್ನು ಎದುರಿಸುವ ಛಾತಿ ನಿಮಗೆ ಇಲ್ಲವಾದೀತು. ಸಾಮಾಜಿಕವಾಗಿ ಜನ ಮನ್ನಣೆಗೆ ಪಾತ್ರರಾಗುವಿರಿ. ವಿದ್ಯಾರ್ಥಿಗಳು ಮಿತ್ರರ ಸಹವಾಸದಿಂದ ಅಡ್ಡದಾರಿ ಹಿಡಿಯುವ ಪ್ರವೃತ್ತಿ ತೋರಿಬಾರದಂತೆ ಕಾಳಜಿ ವಹಿಸಿರಿ. ಸೋಲನ್ನು ಒಪ್ಪಿ ಗುರಿಯನ್ನು ಸಾಧಿಸಿದಲ್ಲಿ ಯಶಸ್ಸು ನಿಮ್ಮದಾದೀತು. ಗೃಹಗಳ ಪ್ರತಿಕೂಲತೆಯಿಂದ ಆಲಸಿಯಾದವನ ಕಾರ್ಯಶೀಲತೆ ಕ್ಷೀಣಿಸುತ್ತಲೇ ಹೋಗುತ್ತದೆ. ಅವಿವಾಹಿತರಿಗೆ ವೈವಾಹಿಕ ಸಂಬಂಧಿತ ಮಾತುಕತೆಗಳು ಕಂಕಣ ಬಲದಲ್ಲಿ ಪೂರ್ಣವಾಗಲಿವೆ.
ಶುಭವಾರ: ಸೋಮ, ಗುರು, ಶನಿವಾರ

ಕರ್ಕಾ: ಐಶಾರಾಮದಿಂದ ದೈಹಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ಇರಲಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಬಗ್ಗೆ ಶಿಸ್ತು ಪಾಲಿಸುವಂತೆ ಹೇಳುವ ಪ್ರಸಂಗ ಬರುತ್ತದೆ. ದುಂದುವೆಚ್ಚವನ್ನು ಮಾಡುವ ಸಂದರ್ಭದಲ್ಲಿ ವೆಚ್ಚದ ಮೇಲೆ ಕಡಿವಾಣ ಹಾಕುವುದನ್ನು ಕಲಿಯಬೇಕಾಗುವುದು. ಉದ್ಯೋಗಿಗಳು ಕೆಲಸದ ಮಹತ್ವವನ್ನು ತಿಳಿಯುವುದು ಲೇಸು. ಯುವಕ, ಯುವತಿಯರು ಪರಸ್ಪರ ಪ್ರೇಮದ ಸುಳಿಯಲ್ಲಿ ಸಿಲುಕಿಯಾರು. ಒಂಟಿಯಾದ ಯೋಗ್ಯ ವಯಸ್ಕರಿಗೆ ಮದುವೆಯ ಆಸರೆಯು ಬೇಕೆನಿಸುವುದು.
ಶುಭವಾರ: ಬುಧ, ಗುರು, ಶುಕ್ರವಾರ

ಸಿಂಹ: ಹೊಸ ಚಿಂತನೆ, ಹೊಸ ಕಾರ್ಯಗಳ ಆರಂಭಗಳಿಗೆ ಇದು ಸೂಕ್ತವಾದ ಸಮಯವಾದೀತು. ವ್ಯಾಪಾರ, ವ್ಯವಹಾರಗಳಲ್ಲಿ ಹೂಡಿಕೆ, ದುಡುಕು ನಿರ್ಧಾರಗಳು ಆರ್ಥಿಕ ಸ್ಥಿತಿಯನ್ನು ಏರುಪೇರು ಮಾಡಲಿದೆ. ಸತ್ಯವನ್ನು , ಬಿಚ್ಚುಮಾತುಗಳನ್ನು ಹೇಳಿ ನಿಷ್ಠುರಕ್ಕೆ ಕಾರಣರಾಗದಂತೆ ಗಮನವನ್ನು ಹರಿಸಿರಿ. ಆರೋಗ್ಯ ಭಾಗ್ಯಕ್ಕಾಗಿ ನಿಗದಿಪಡಿಸಿದ ಸಮಯದಲ್ಲಿ ಆಹಾರ ಸೇವನೆ ಅಗತ್ಯವಿರುತ್ತದೆ. ಸಂಭಾವಿತರೆಂದು ತೋರಿಸಿಕೊಳ್ಳುವ
ಹಿತಶತ್ರುಗಳಿಂದ ಮೋಸ ಹೋಗುವ ಪ್ರಸಂಗವು ಎದುರಾದೀತು.
ಶುಭವಾರ: ಗುರು, ಶುಕ್ರ, ಶನಿವಾರ

ಕನ್ಯಾ: ಭೂತಕಾಲದ ತಪ್ಪುಗಳಿಂದ ಪಾಠ ಕಲಿತು, ವರ್ತಮಾನ ಕಾಲದ ಕಡೆ ಲಕ್ಷ್ಯ ಹಾಕದೆ ಇರುವವರು ಮೂರ್ಖರಾದಾರು. ಕಾರ್ಯ ಕ್ಷೇತ್ರದ ಕಿಟಕಿ ಸದಾ ತೆರೆದಿರಲಿ. ನಿಮ್ಮ ಸಂಕುಚಿತತೆಯ ಅರಿವೂ ಉಂಟಾದೀತು. ಸಮಯ, ಅವಕಾಶಗಳನ್ನು ಒದಗಿಸುತ್ತದೆ. ಆದರೆ, ಸಾಧಿಸಬೇಕಾದುದನ್ನು ಸಮಯ ವ್ಯರ್ಥಮಾಡದೆ ಸಾಧಿಸಿದರೆ ಯಶಸ್ಸು ಹುಡುಕಿ ಕೊಂಡು ಬರಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಲಾಭಕರವಾದ ಆದಾಯವಿದ್ದರೂ ಪೈಪೋಟಿಯ ವಾತಾವರಣವನ್ನು ಎದುರಿಸಬೇಕಾಗುತ್ತದೆ.
ಶುಭವಾರ: ಶುಕ್ರ, ಶನಿ, ಭಾನುವಾರ

ತುಲಾ: ಕೌಟುಂಬಿಕ ಜೀವನದಲ್ಲಿ ಏರಿಳಿತಗಳ ಅನುಭವ ತಂದು ಕೊಡಲಿದೆ. ಹಾಗೇ ಹೆಚ್ಚಿನ ಉಸ್ತುವಾರಿ ಅಗತ್ಯವಿದೆ. ಧಾರ್ಮಿಕ
ಹಾಗೂ ಆಧ್ಯಾತ್ಮಿಕ ವಿಷಯದತ್ತ ಮನಸ್ಸು ಹೆಚ್ಚು ವಾಲುವುದು. ಆರ್ಥಿಕ ಸಂಗ್ರಹ ಬಹಳಷ್ಟಿರುತ್ತದೆ. ಸ್ತ್ರೀಯರಿಗೆ ಹಲವು ಖರ್ಚುಗಳು ಎದುರಾಗುತ್ತವೆ. ನೂತನ ವಧೂವರರಿಗೆ ಸಿಹಿವಾರ್ತೆ ಇದೆ. ಬಂಧುಮಿತ್ರರಿಂದ ಪ್ರಶಂಸೆಗೆ ಒಳಗಾಗುವಿರಿ. ಪ್ರಯತ್ನಿಸುವ ಅನೇಕ ಕೆಲಸಕಾರ್ಯಗಳಲ್ಲಿ
ಸಾಫ‌ಲ್ಯ ಕಾಣುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ತಂದು ಕೊಡಲಿದೆ.
ಶುಭವಾರ: ಬುಧ, ಶುಕ್ರ, ಭಾನುವಾರ

ವೃಶ್ಚಿಕ: ವೃತ್ತಿರಂಗದಲ್ಲಿ ಅನುಕರಣೆ ಸ್ವಂತಿಕೆಯ ಅಭಿವ್ಯಕ್ತಿಯಲ್ಲ. ಸಾವಕಾಶವಾಗಿ ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಿರಿ. ಯಶಸ್ಸು
ನಿಮ್ಮದಾದೀತು. ವಿವಾಹ ಬಂಧನಕ್ಕೆ ಒಳಗಾಗುವ ವಾತಾವರಣ ಯೋಗ್ಯವಯಸ್ಕರಿಗೆ ಒದಗಿ ಬರಲಿದೆ. ದಾಂಪತ್ಯದಲ್ಲಿ ಸಾಮರಸ್ಯದ ಬುನಾದಿ ಭದ್ರವಾಗಲಿದೆ. ಧಾರ್ಮಿಕ ಕ್ಷೇತ್ರದಲ್ಲಿ ದೇವರ ಸೇವೆ, ಪ್ರಸಿದ್ಧಿಗಾಗಿ ನಿಮ್ಮ ಧನವ್ಯಯವಾಗಲಿದೆ. ಆರೋಗ್ಯದ ಬಗ್ಗೆ ದೈಹಿಕ ತಪಾಸಣೆ ತೋರಿಬಂದೀತು. ಸತತ ಸಾಧನೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾಗಲಿದೆ.
ಶುಭವಾರ: ಶುಕ್ರ, ಶನಿ, ಭಾನುವಾರ

ಧನು: ಘಟಿಸಬಹುದಾದ ಸಮಸ್ಯೆಗಳು ಹಂತ ಹಂತವಾಗಿ ತಮ್ಮಷ್ಟಕ್ಕೆ ತಾವೇ ಇಲ್ಲದಂತಾಗುತ್ತವೆ. ನಿರುದ್ಯೋಗಿಗಳು ಒದಗಿಬಂದ ಉದ್ಯೋಗ ಲಾಭವನ್ನು ಸ್ವೀಕರಿಸುವ ಮನೋಭಾವವನ್ನು ತೋರಿಸಬೇಕಾಗುತ್ತದೆ. ನಿಮ್ಮ ನೆರೆಹೊರೆಯವರ ಯೋಗಕ್ಷೇಮದಲ್ಲಿ ಆಸಕ್ತಿ ವಹಿಸುವ ಸಂದರ್ಭಗಳು ಬರಲಿವೆ. ಪ್ರತಿಷ್ಠಿತರ ಭೇಟಿ ಕಾರ್ಯಾನುಕೂಲಕ್ಕೆ ಸಾಧಕವಾಗಲಿದೆ. ದೈಹಿಕ ಹಾಗೂ ಮಾನಸಿಕ ದೃಢತೆ ಮುಂದಿನ ಮುನ್ನಡೆಗೆ ಸಹಕಾರಿಯಾಗಲಿದೆ.
ಶುಭವಾರ: ಸೋಮ, ಗುರು, ಶನಿವಾರ

ಮಕರ: ನಿರುದ್ಯೋಗಿಗಳಿಗೆ ಅನಿಶ್ಚಿತತೆ ದೂರವಾಗಲಿದೆ. ಆಕಸ್ಮಿಕ ರೀತಿಯಲ್ಲಿ ಖರ್ಚು-ವೆಚ್ಚಗಳು ಆತಂಕ ತಂದರೂ ಧನಾಗಮನದಿಂದ ಅನುಕೂಲವಾದೀತು. ದೈಹಿಕ, ಆರ್ಥಿಕ ಹಾಗೂ ಮಾನಸಿಕ ವಿಷಯಗಳನ್ನು ಸುವ್ಯವಸ್ಥೆಯಲ್ಲಿ ಇಟ್ಟುಕೊಳ್ಳಬೇಕಾದರೆ ಮರ್ಕಟ ಮನಸ್ಸನ್ನು ಕಡಿವಾಣ ಹಾಕಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಕೌಟುಂಬಿಕವಾಗಿ ಪರಸ್ಪರ ಕೊಡುವ
ಮನೋಭಾವನೆಯಿಂದ ಒಂದು ಥರದ ಹೇಳಲಾಗದ ಸಮಾಧಾನ ಸಿಗಲಿದೆ. ಸಾರ್ವಜನಿಕ ಸೇವಾಕಾರ್ಯಗಳಲ್ಲಿ ಆಸಕ್ತಿ ತೋರಿಬಂದೀತು.
ಶುಭವಾರ: ಮಂಗಳ, ಗುರು, ಶನಿವಾರ

ಕುಂಭ: ಬದಲಾವಣೆ ಜೀವನದ ನಿಯಮ. ಬದಲಾಗುತ್ತಿರುವ ಬಾಳಿನೊಡನೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಇಲ್ಲವಾದರೆ ಮಾನಸಿಕ ನೆಮ್ಮದಿಯನ್ನು ಕಳೆದುಕೊಂಡು ಕುಳಿತಿರಬೇಕಾಗುತ್ತದೆ. ಕಾರ್ಯಕ್ಷೇತ್ರದ ಜವಾಬ್ದಾರಿಯನ್ನು ನೀವೇ ಹೊರಬೇಕಾದೀತು. ಮನೆಯಲ್ಲಿ ಚಿಕ್ಕ ಮಕ್ಕಳ ತುಂಟ ನಗೆಯಿಂದ ನಿಮ್ಮ ಮನಸ್ಸು , ಹೃದಯ ಅರಳಬಹುದಾಗಿದೆ. ಹಿರಿಯರ ಬಾಳಿನ ಅನುಭವ ನಿಮಗೆ ಪಾಠವಾದೀತು. ಕನ್ಯಾಪಿತೃಗಳ ಪ್ರಯತ್ನಬಲ ಸದ್ಯದಲ್ಲೇ ಸಾಧಕವಾಗಲಿದೆ.
ಶುಭವಾರ: ಬುಧ, ಶುಕ್ರ, ಶನಿವಾರ.

ಮೀನ: ಆರ್ಥಿಕವಾಗಿ ಸಂಪನ್ಮೂಲಗಳನ್ನು ಪ್ರಕಟಿಸಲು ಹೆಚ್ಚು ಹೆಚ್ಚು ಶ್ರಮವನ್ನು ಕೈಗೊಳ್ಳಬೇಕಾದೀತು. ಸಮತೋಲನ ಜೀವನವನ್ನು ನಡೆಸಿಕೊಂಡು ಹೋಗಲು ಅಧ್ಯಾತ್ಮಿಕತೆಯ ಚಿಂತನೆ ಅನಿವಾರ್ಯವಾದೀತು. ವಿದ್ಯಾರ್ಥಿಗಳ ಓದಿನ ಪ್ರಾಪ್ತಿ ಮುಂದಿನ ಭವಿಷ್ಯಕ್ಕೆ ಸಾಧಕವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಅವಿವೇಕಿಗಳ ಮಾತಿಗೆ ಕಿವಿಗೊಡದಿರಿ. ನಿಮ್ಮ ಮಕ್ಕಳಿಂದ ನಿಮ್ಮ ಗೌರವವು ಹೆಚ್ಚಾಗಲಿದೆ. ಅವಿವಾಹಿತರಿಗೆ
ಅದೃಷ್ಟಬಲವು ಖುಲಾಯಿಸಲಿದೆ.
ಶುಭವಾರ: ಗುರು, ಶನಿ, ಭಾನುವಾರ

ಟಾಪ್ ನ್ಯೂಸ್

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

Astrology 2024: 2024ರಲ್ಲಿ ಮಿಶ್ರ ಫ‌ಲಗಳೇ ಅಧಿಕ-ರಾಜ್ಯದಲ್ಲೇನಾಗುತ್ತದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಜ್ಯೋತಿಷ್ಯದಲ್ಲಿ ನವಗ್ರಹಕ್ಕಿಂತಲೂ ನಕ್ಷತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಯಾಕೆ ಕೊಡಲಾಗಿದೆ?

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುದೆಸೆ ಯಾವಾಗ ಆರಂಭವಾಗಲಿದೆ…

ಶುಭ ವಿಚಾರ ತಿಳಿಯುವ ಗೋಚಾರ ಫಲ ಎಂದರೇನು, ಗುರುಬಲ ಯಾವಾಗ ಆರಂಭವಾಗಲಿದೆ…

jjhgfd

ಮಾರಕಾಧಿಪತಿ, ಭಾದಕಾಧಿಪತಿ: ಅಕಾಲಿಕ ಮರಣದ ಬಗ್ಗೆ “ಅಷ್ಠಮ ಸ್ಥಾನ” ಮುನ್ಸೂಚನೆ ಕೊಡುತ್ತದೆಯೇ?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

ಗಜಕೇಸರಿ ಯೋಗ… ಈ ಯೋಗ ಹೇಗೆ ಉಂಟಾಗುತ್ತದೆ, ಇದರ ಮಹತ್ವವೇನು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.