ಬೈಡನ್ – ಹ್ಯಾರಿಸ್ ಭಿನ್ನಮತಕ್ಕೆ ವೇದಿಕೆಯಾದ ಔತಣಕೂಟ!
Team Udayavani, Nov 25, 2021, 6:10 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೊ ಬೈಡನ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವಿನ ರಾಜಕೀಯ ಬಾಂಧವ್ಯ ಹಳಸಿದೆ ಎಂಬ ವದಂತಿಗಳಿಗೆ ಹರಿದಾಡುತ್ತಿರುವುದರ ನಡುವೆಯೇ, ಇದಕ್ಕೆ ಪುಷ್ಟಿ ನೀಡುವಂಥ ಘಟನೆ ನ್ಯೂಕರೋಲಿನಾದಲ್ಲಿ ನಡೆದಿದೆ.
ಅಲ್ಲಿನ ಫೋರ್ಟ್ ಬ್ರಾಗ್‌ನಲ್ಲಿ ಅಮೆರಿಕ ಯೋಧರಿಗೆ ಸಾಂಪ್ರದಾಯಿಕವಾಗಿ ನಡೆಸಲಾಗುವ ಕೃತಜ್ಞತಾಪೂರ್ವಕ ಔತಣಕೂಟವನ್ನು ಬುಧವಾರ ಆಯೋಜಿಸಲಾಗಿತ್ತು. ಅದರಲ್ಲಿ ಬೈಡನ್, ಪತ್ನಿ ಜಿಲ್, ಕಮಲಾ ಹ್ಯಾರಿಸ್ ಭಾಗವಹಿಸಿದ್ದರು. ಖುದ್ದು, ಬೈಡನ್, ಜಿಲ್, ಕಮಲಾ ತಮ್ಮ ಕೈಯ್ಯಾರೆ ಯೋಧರಿಗೆ ಊಟ ಬಡಿಸಿದರು. ಪಕ್ಕದಲ್ಲೇ ಇದ್ದ ಕಮಲಾರ ಕಡೆಗೆ ಅಪ್ಪಿತಪ್ಪಿಯೂ ತಿರುಗದ ಬೈಡೆನ್ ತಮ್ಮ ಪಾಡಿಗೆ ಊಟ ಬಡಿಸಿದರು.
ಇದಕ್ಕೂ ಮುನ್ನ ಸೈನಿಕರನ್ನುದ್ದೇಶಿಸಿ ಮಾತನಾಡುವಾಗ ಕಮಲಾ ಜತೆಗೆ ಅಂತರ ಕಾಯ್ದುಕೊಂಡು ನಿಂತಿದ್ದ ಬೈಡನ್, ಅವರನ್ನು ಔಪಚಾರಿಕವಾಗಿಯೂ ಮಾತನಾಡಿಸಲಿಲ್ಲ. ಇದನ್ನು ಗಮನಿಸಿದ ಜಿಲ್, ಬೈಡನ್‌ಗೆ ಕಮಲಾರನ್ನು ಮಾತಾಡಿಸಲು ಸೂಚಿಸಿದರೂ ಅವರು ಆ ಕಡೆ ಗಮನ ಕೊಡಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ : ಯುನೈಟೆಡ್ ಕಿಂಗ್‌ಡಮ್ ಸಂಸತ್ತಿನ ಒಳಗೆ ಮಕ್ಕಳಿಗೆ ನಿಷೇಧಕ್ಕೆ ಭಾರೀ ಆಕ್ರೋಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
Netanyahu ವಿರುದ್ಧ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಿಂದ ಬಂಧನ ವಾರಂಟ್
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
Chrome Browser: ಗೂಗಲ್ ಸರ್ಚ್ ಎಂಜಿನ್ ಕ್ರೋಮ್ ಮಾರಾಟ?
ವಾಯುವ್ಯ ಅಮೆರಿಕಕ್ಕೆ ಅಪ್ಪಳಿಸಿದ ಬಾಂಬ್ ಸೈಕ್ಲೋನ್, 6 ಲಕ್ಷ ಮನೆಗಳಿಗೆ ವಿದ್ಯುತ್ ಕಡಿತ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.