ಕಾರ್ಖಾನೆಯ ಜೊತೆ ಮುರಿದು ಬಿದ್ದ ಸಂಧಾನ ಮಾತುಕತೆ : ಓಟಿ ಸ್ಥಗಿತಗೊಳಿಸಲು ಕಾರ್ಮಿಕರ ನಿರ್ಧಾರ
Team Udayavani, Sep 11, 2021, 12:46 PM IST
ದಾಂಡೇಲಿ : ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರ ವೇತನ ಒಪ್ಪಂದ ಪರಿಷ್ಕರಣೆಗೆ ಸಂಬಂಧಪಟ್ಟಂತೆ, ಮಾತುಕತೆಗೆ ಕರೆಯುವಂತೆ ಆಗ್ರಹಿಸಿ ಜಂಟಿ ಸಂಧಾನ ಸಮಿತಿಯು ಕಾರ್ಖಾನೆಯ ಗೇಟ್ ಮುಂದೆ ಗುರುವಾರ ರಾತ್ರಿ ಹಮ್ಮಿಕೊಂಡ ಪ್ರತಿಭಟನೆ ಶುಕ್ರವಾರಕ್ಕೆ ಮುಂದುವರಿದಿತ್ತು. ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಕಾಗದ ಕಾರ್ಖಾನೆಯ ಆಡಳಿತ ಮಂಡಳಿ ವೇತನ ಒಪ್ಪಂದ ಮಾತುಕತೆಗಾಗಿ ಜಂಟಿ ಸಂಧಾನ ಸಮಿತಿಯನ್ನು ಅಹ್ವಾನಿಸಿತ್ತು.
ಮಾತುಕತೆಗೆ ಬಂದ ಅಹ್ವಾನದ ಮೇರೆಗೆ ದೌಡಾಯಿಸಿದ ಜಂಟಿ ಸಂಧಾನ ಸಮಿತಿಯ ಬಿ.ಡಿ.ಹಿರೇಮಠ, ಉದಯ ನಾಯ್ಕ, ಸಿ.ವಿ.ಲೋಕೇಶ, ರೂಪೇಶ ಪವಾರ್, ಹನುಮಂತ ಕಾರ್ಗಿ ಅವರುಗಳು ವೇತನ ಒಪ್ಪಂದ ಮಾತುಕತೆಗೆ ದೌಡಾಯಿಸಿದ್ದರು. ಆದರೆ ವೇತನ ಒಪ್ಪಂದ ಮಾತುಕತೆ ಫಲಪ್ರದವಾಗಿ ನಡೆಯದಿದ್ದ ಕಾರಣ, ಸಧ್ಯಕ್ಕೆ ಮಾತುಕತೆ ಮುರಿದು ಬಿದ್ದಿದೆ.
ಅಲ್ಲಿಂದ ನೇರವಾಗಿ ಕಾರ್ಖಾನೆಯ ಗೇಟ್ ಮುಂದೆ ಆಗಮಿಸಿದ ಜಂಟಿ ಸಂಧಾನ ಸಮಿತಿಯ ಸದಸ್ಯರುಗಳು ಅಲ್ಲಿ ಸಭೆಯಲ್ಲಿ ನಡೆದ ಚರ್ಚೆಯನ್ನು ವಿವರಿಸಿ, ರೂ: 3,300 ರಿಂದ ಮಾತುಕತೆ ಆರಂಭವಾಗಿ ರೂ: 3,400 ರಿಂದ ಮುಂದೆ ಹೋಗದಿರುವುದರಿಂದ ಮಾತುಕತೆ ಮುರಿದು ಬಿದ್ದಿದೆ. ಹಾಗಾಗಿ ನಿರಾಶೆಯಾಗಿದ್ದು, ಈ ಹಿನ್ನಲೆಯಲ್ಲಿ ಸೋಮವಾರದಿಂದ ಬೆಳಗ್ಗಿನ ಪಾಳಿಯಿಂದ ಮಾಡುವ ಓಟಿಯನ್ನು ಸಂಪೂರ್ಣ ಬಂದ್ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಆದ್ದರಿಂದ ಕಾರ್ಮಿಕರು ಈ ನಿರ್ಧಾರವನ್ನು ಬೆಂಬಲಿಸಿ, ಹೋರಾಟದ ಮೊದಲ ಭಾಗವಾಗಿ ಓಟಿ ಸ್ಥಗಿತ ಮಾಡಲಾಗುತ್ತದೆ. ಮುಂದಿನ ಹೋರಾಟದ ರೂಪುರೇಷೇಗಳ ಬಗ್ಗೆ ಬುಧವಾರ ನಡೆಯುವ ಗೇಟ್ ಮೀಟಿಂಗ್ ನಲ್ಲಿ ನಿರ್ಧಾರವನ್ನು ಪ್ರಕಟಿಸಲಾಗುವುದೆಂದು ತಿಳಿಸಿದ್ದಾರೆ.
ಇದನ್ನೂ ಓದಿ :ಸ್ಥಳೀಯ ಅರ್ಥಿಕತೆಗೆ ನೆರವು; ಸುಸ್ಥಿರ ಜೀವನ ನಡೆಸಲು 5 ಸರಳ ವಿಧಾನಗಳು
ವೇತನ ಒಪ್ಪಂದ ಸಮಸ್ಯೆ ಮುಗಿಯದಿದ್ದಲ್ಲಿ ಹೋರಾಟದ ಮೊದಲ ಭಾಗವಾಗಿ ಸೋಮವಾರದಿಂದ ಓಟಿ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಆನಂತರವೂ ಬೇಡಿಕೆ ಈಡೇರದಿದ್ದಲ್ಲಿ ಸೆ: 16 ರಂದು ಕೆಲಸ ಸ್ಥಗಿತಗೊಳಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುವ ಎಲ್ಲ ಸಾಧ್ಯತೆಗಳು ಕಂಡು ಬರುತ್ತಿದೆ.
ಕಾರ್ಮಿಕ ಸಚಿವರಿರುವ ಜಿಲ್ಲೆಯಲ್ಲಿ ಕಾರ್ಮಿಕರನ್ನು ಸತಾಯಿಸುತ್ತಿರುವ ಕಾರ್ಖಾನೆ
ಅಂದ ಹಾಗೆ ಕಾರ್ಮಿಕ ಸಚಿವರಿರುವ ಜಿಲ್ಲೆಯಲ್ಲಿ ಕಾರ್ಮಿಕರ ಕಣ್ಣೀರಿಗೆ ಹಾಗೂ ನ್ಯಾಯಯುತವಾದ ಬೇಡಿಕೆಗೆ ಬೆಲೆಯಿಲ್ಲದೇ ಕಾರ್ಮಿಕರನ್ನು ಸತಾಯಿಸಲಾಗುತ್ತಿದೆ ಎಂಬ ಮಾತು ಇದೀಗ ಚರ್ಚೆಯಲ್ಲಿದೆ. ಕಳೆದ 33 ತಿಂಗಳುಗಳಿಂದ ವೇತನ ಒಪ್ಪಂದಕ್ಕಾಗಿ ಜಾತಕಪಕ್ಷಿಯಂತೆ ಕಾಯುತ್ತಿರುವ ಕಾರ್ಮಿಕರ ಬವಣೆಗಳನ್ನು ನ್ಯಾಯೋಚಿತವಾದ ರೀತಿಯಲ್ಲಿ ಪರಿಹರಿಸಬೇಕಾದ ಗುರುತರ ಜವಾಬ್ದಾರಿ ಮತ್ತು ಸವಾಲು ಕಾರ್ಮಿಕ ಸಚಿವರ ಮೇಲಿದೆ. ಜಿಲ್ಲೆಯ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲೆಬೇಕಾದ ಸವಾಲಿನ ಜೊತೆಗೆ ಸಚಿವ ಶಿವರಾಮ ಹೆಬ್ಬಾರ್ ಅವರಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿದೆ. ಕಾರ್ಮಿಕರ ಬಗ್ಗೆ ಸದಾ ಕಾಳಜಿನ್ನಿಟ್ಟುಕೊಂಡ ಕಾರ್ಮಿಕ ಸಚಿವರು ಕಾಗದ ಕಾರ್ಖಾನೆಯ ಕಾರ್ಮಿಕರ ಮೇಲೆ ನಿಷ್ಕಾಳಜಿ ಮಾಡದೇ ಹಟಮಾರಿ ಧೋರಣೆಯನ್ನು ತೆಳೆಯುತ್ತಿರುವ ಕಾಗದ ಕಾರ್ಖಾನೆಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿಯಾದರೂ, ಬೇಡಿಕೆ ಈಡೇರಿಸುತ್ತಾರೆಂಬ ಬಲವಾದ ನಂಬಿಕೆಯಲ್ಲಿ ಕಾರ್ಮಿಕರಿದ್ದಾರೆ.
ಇದನ್ನೂ ಓದಿ :ನೀರಜ್ ಚೋಪ್ರಾ ಕನಸು ನನಸಾಯ್ತು: ತಂದೆ ತಾಯಿಯೊಂದಿಗೆ ವಿಮಾನ ಪ್ರಯಾಣ ಮಾಡಿದ ಚಿನ್ನದ ಹುಡುಗ
ಕೆ.ಎಲ್.ಚಂಡಕ್ ಅವರಿರುತ್ತಿದ್ದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂಬ ಮಾತುಗಳು ಇದೀಗ ಕಾರ್ಮಿಕರಲ್ಲಿ ಹರಿದಾಡತೊಡಗಿದೆ. ಈಗಿನ ಸಾಧ್ಯ ಸಾಧ್ಯತೆಗಳ ಪ್ರಕಾರ ರೂ:4 ರಿಂದ ನಾಲ್ಕುವರೆ ಸಾವಿರಕ್ಕೆ ವೇತನ ಒಪ್ಪಂದವಾಗಬಹುದಾದರೂ, ಸತತ ಹೊರಾಡಿ, ವರ್ಷಗಳ ಹೋರಾಟದ ಫಲವಾಗಿ ಹೈ ಕೋರ್ಟನ್ನು ಮಂಜೂರು ಮಾಡಿಸಿದ ಬಿ.ಡಿ.ಹಿರೇಮಠ ಅವರಿಗೆ ಶೋಭೆ ತರಲಿಕ್ಕಿಲ್ಲ. ಇನ್ನೂ ಮುಖ್ಯಮಂತ್ರಿಗಳಿಂದ ಹಿಡಿದು ಎಲ್ಲ ಸಚಿವರುಗಳ ನಿಕಟ ಸಂಪರ್ಕವನ್ನಿಟ್ಟುಕೊಂಡಿರುವ ಮತ್ತು ಬಿಜೆಪಿಯ ಒಂದು ಭಾಗವೆಂದೆ ಹೇಳಬಹುದಾದ ಬಿ.ಎಂ.ಎಸ್ ಕಾರ್ಮಿಕ ಸಂಘಟನೆಯ ಸಿ.ವಿ.ಲೋಕೇಶ ಅವರ ತಾಕತ್ತಿಗೂ ಸವಾಲು ಎಂಬಂತಾಗಿದೆ. ಸಿಐಟಿಯುನಲ್ಲಿ ಘಟಾನುಘಟಿ ನಾಯಕರನ್ನು ಹೊಂದಿರುವ ಉದಯ ನಾಯ್ಕ ಅವರಿಗೂ ಇದು ಪ್ರತಿಷ್ಟೆಯ ಪ್ರಶ್ನೆಯಾಗಿದೆ. ವಿಧಾನ ಪರಿಷತ್ ಸದಸ್ಯರಾದ ಘೋಟ್ನೇಕರ ಅವರ ಬೆಂಬಲವಿರುವ ದಾಂಡೇಲಿ ಮಜ್ದೂರು ಸಂಘಕ್ಕೂ ಇದೊಂದು ಸವಾಲಾಗಿದೆ.
ಹೀಗಿರುವಾಗ ಕನಿಷ್ಟ 6 ಸಾವಿರಕ್ಕಿಂತ ಹೆಚ್ಚು ವೇತನ ಒಪ್ಪಂದ ಮಾಡಿಸಲೇಬೇಕಾದ ಬಹುದೊಡ್ಡ ಜವಾಬ್ದಾರಿ ಮತ್ತು ಕರ್ತವ್ಯ ಜಂಟಿ ಸಂಧಾನ ಸಮಿತಿಯ ಮೇಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.