![The owner of the betting app promoted by Bollywood actresses is Pakistani!](https://www.udayavani.com/wp-content/uploads/2024/12/bettui-415x241.jpg)
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
ನಕಲಿ ಅಧಿಕಾರಿಗಳೆಂದು ಭಾವಿಸಿ ಸ್ಥಳೀಯರಿಂದ ಕೃತ್ಯ
Team Udayavani, Dec 19, 2024, 7:25 AM IST
![KND-Amber-greece](https://www.udayavani.com/wp-content/uploads/2024/12/KND-Amber-greece-620x372.jpg)
ಕುಂದಾಪುರ: ತಿಮಿಂಗಿಲದ ವಾಂತಿ (ಅಂಬರ್ ಗ್ರೀಸ್) ಮಾರಾಟ ಜಾಲದ ಶಂಕೆಯ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿ ದಳದ (ಫಾರೆಸ್ಟ್ ಸಿಐಡಿ) ಅಧಿಕಾರಿಗಳ ತಂಡವೊಂದು ಬುಧವಾರ ಕೋಡಿ ಕಡಲ ತೀರದ ಸಮೀಪದ ಎಂಕೋಡಿಯ ಸೌಹಾರ್ದ ಭವನಕ್ಕೆ ಮಾರುವೇಷದಲ್ಲಿ ಬಂದು ದಾಳಿ ನಡೆಸಿದೆ. ಇವರನ್ನು ನಕಲಿ ಅಧಿಕಾರಿಗಳೆಂದು ಭಾವಿಸಿದ ಸ್ಥಳೀಯರು ಹಲ್ಲೆ ನಡೆಸಿದ್ದಾರೆ.
ಬುಧವಾರ ಮಧ್ಯಾಹ್ನದ ಸುಮಾರಿಗೆ ಅರಣ್ಯ ಸಂಚಾರಿ ದಳದವರು 3 ಕಾರಿನಲ್ಲಿ ಕಾರ್ಯಾಚರಣೆ ನಡೆಸಲು ಬಂದಿದ್ದರು. ಈ ವೇಳೆ ನಾಲ್ವರನ್ನು ಕಾರಿನಲ್ಲಿ ಕರೆದುಕೊಂಡು ಹೋಗುವ ವೇಳೆ ಇವರು ಮಾರುವೇಷದಲ್ಲಿ ಇದ್ದುದರಿಂದ ಸ್ಥಳೀಯರು ತಪ್ಪು ಭಾವಿಸಿ, ಅಧಿಕಾರಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿ 7 ಮಂದಿ ಇದ್ದು, ಒಬ್ಬನಲ್ಲಿ 10 ಕೆ.ಜಿ. ತೂಕದ ಅಂಬರ್‌ಗ್ರೀಸ್ ಇತ್ತು. ಅದನ್ನು ಮತ್ತೂಬ್ಬ ಹಿಡಿದುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆ ತಂಡದಲ್ಲಿ ಮಂಗಳೂರು ವಿಭಾಗದ ಎಸ್‌ಐ ಜಾನಕಿ, ಸಿಬಂದಿ ವರ್ಗದ ಜಗದೀಶ್ ಸಾಲ್ಯಾನ್, ತಾರಾನಾಥ, ಅಬ್ದುಲ್ ರೌಫ್, ಶಿವಾನಂದ, ಬೆಂಗಳೂರು ವೈಲ್ಡ್‌ಲೈಫ್ ಕಂಟ್ರೋಲ್ ಬ್ಯೂರೋದ ಪ್ರಸಾದ್ ಎಸ್., ಮಾಹಿತಿ ದಾರರಾದ ಶಾಬಾಸ್, ಶಂಕರ್ ಅವರಿ ದ್ದರು. ಗಾಯಗೊಂಡವರು ಕುಂದಾಪುರದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜಯಕರ, ರತ್ನಾಕರ, ಅಬೂಬಕರ್, ಆಸಿಫ್, ಹೆಸರು ತಿಳಿಯದ ಮೂವರು ಸಹಿತ ಹಲವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ಭೇಟಿ
ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಕುಂದಾಪುರ ಎಸ್‌ಐ ನಂಜ ನಾಯ್ಕ, ಸಿಬಂದಿ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಗಿತ್ತು.
ಪಿಸ್ತೂಲ್‌ನಿಂದ ಬೆದರಿಸಿದ ಆರೋಪ
ಮಾರುವೇಷದಲ್ಲಿ ಬಂದ ಅಧಿಕಾರಿಗಳು ಇಲ್ಲಿಗೆ ಬಂದು ಪಿಸ್ತೂಲ್ ತೋರಿಸಿ ಬೆದರಿಸಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಇದರಿಂದ ಬೆದರಿ ಹಲ್ಲೆಗೆ ಮುಂದಾಗಿರುವುದಾಗಿ ತಿಳಿಸಿರುವುದಾಗಿ ತಿಳಿದು ಬಂದಿದೆ.
ಅಂಬರ್ ಗ್ರೀಸ್ ಜಾಲ ಸಕ್ರಿಯ?
ಅಂಬರ್ ಗ್ರೀಸ್‌ಗೆ ಕೋಟ್ಯಂತರ ರೂ. ಬೆಲೆಯಿದೆ. ಇದನ್ನು ವಶದಲ್ಲಿ ಇರಿಸಿಕೊಳ್ಳುವುದು ಹಾಗೂ ವ್ಯವಹಾರ ಮಾಡುವುದು ವನ್ಯಜೀವಿ ಸಂರಕ್ಷಣ ಕಾಯ್ದೆಯಡಿ ಅಪರಾಧ. ದೇಶದಲ್ಲಿ ಇದರ ಮಾರಾಟಕ್ಕೆ ನಿರ್ಬಂಧವಿದೆ. ವಿದೇಶದಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಕರಾವಳಿ ಜಿಲ್ಲೆಯಲ್ಲಿ ಇದರ ಜಾಲ ಸಕ್ರಿಯವಾಗಿದೆ ಎಂದು ಹೇಳಲಾಗುತ್ತಿದೆ.
ಟಾಪ್ ನ್ಯೂಸ್
![The owner of the betting app promoted by Bollywood actresses is Pakistani!](https://www.udayavani.com/wp-content/uploads/2024/12/bettui-415x241.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![The owner of the betting app promoted by Bollywood actresses is Pakistani!](https://www.udayavani.com/wp-content/uploads/2024/12/bettui-150x87.jpg)
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
![Battery theft at Dharwad District Collector’s Office](https://www.udayavani.com/wp-content/uploads/2024/12/dc-2-150x87.jpg)
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
![K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ](https://www.udayavani.com/wp-content/uploads/2024/12/KV-Narayan-150x84.jpg)
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
![Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ](https://www.udayavani.com/wp-content/uploads/2024/12/shiv-150x87.jpg)
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
![Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!](https://www.udayavani.com/wp-content/uploads/2024/12/bomb-2-150x100.jpg)
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.