ಗ್ರೇಟ್ ಫ್ರೆಂಡ್ ಪ್ರಧಾನಿ ಮೋದಿ, ಥ್ಯಾಂಕ್ಯೂ…ಸಬರಮತಿ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್
Team Udayavani, Feb 24, 2020, 1:33 PM IST
ಅಹಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಜತೆಗೂಡಿ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಟ್ರಂಪ್ ದಂಪತಿಗೆ ಮೋದಿಯೇ ಆಶ್ರಮ, ಚರಕ, ಗಾಂಧಿ ಕುರಿತು ವಿವರಣೆ ನೀಡಿದರು.
ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಸಂದೇಶವನ್ನು ದಾಖಲಿಸಿದರು. “ಟು ಮೈ ಗ್ರೇಟ್ ಫ್ರೆಂಡ್ ಪ್ರಧಾನಿ ನರೇಂದ್ರ ಮೋದಿ, ಥ್ಯಾಂಕ್ಯೂ ಫಾರ್ ದಿಸ್ ವಂಡರ್ ಫುಲ್ ವಿಸಿಟ್ ಎಂದು ಸಂದೇಶ ಬರೆದು ಟ್ರಂಪ್ ಸಹಿ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪತ್ನಿ ಮೆಲಾನಿಯಾ ಟ್ರಂಪ್ ಭಾರತಕ್ಕೆ ಎರಡು ದಿನಗಳ ಕಾಲ ಭೇಟಿ ನೀಡಿದ್ದು, ಸೋಮವಾರ ರೋಡ್ ಶೋ ಮೂಲಕ ಆಗಮಿಸಿ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದರು.
ಸಬರಮತಿ ಆಶ್ರಮದಲ್ಲಿ ಟ್ರಂಪ್ ದಂಪತಿ ಚರಕದಲ್ಲಿ ನೂಲನ್ನು ನೇಯ್ದಿದ್ದರು. ಈ ಕುರಿತು ಪ್ರಧಾನಿ ಮೋದಿ ಹಾಗೂ ಆಶ್ರಮದ ಹಿರಿಯ ಗೈಡ್ ಮಾಹಿತಿ ನೀಡಿದ್ದರು. ನಂತರ ಟ್ರಂಪ್ ಹಾಗೂ ಮೋದಿ ಮೊಟೆರಾ ಸ್ಟೇಡಿಯಂನತ್ತ ಆಗಮಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳ ಜತೆಗೆ ಮೆಲಾನಿಯಾ ಮಾತು
ಸಿಎಎ ಭಾರತದ ಆಂತರಿಕ ವಿಷಯ, ಮೋದಿ ಧಾರ್ಮಿಕ ಸ್ವಾತಂತ್ರ್ಯದ ಪರ: ಡೊನಾಲ್ಡ್ ಟ್ರಂಪ್
‘ಇನ್ನೊಂದು ಅವಧಿಗೂ ನಾನೇ ಅಧ್ಯಕ್ಷ’ ; ಭಾರತೀಯ ಸಿಇಒಗಳಿಗೆ ಟ್ರಂಪ್ ಭರವಸೆ
ರಕ್ಷಣಾ ಕ್ಷೇತ್ರಕ್ಕೆ ಬಲ: ಅಪಾಚೆ, MH ರೋಮೆಯೊ ಹೆಲಿಕಾಪ್ಟರ್ ಖರೀದಿಗೆ ಭಾರತ-ಅಮೆರಿಕ ಒಪ್ಪಂದ
ಟ್ರಂಪ್ ಭೇಟಿ; ಅಮೆರಿಕ ನಿವಾಸಿಗಳು ಅತೀ ಹೆಚ್ಚು ಗೂಗಲ್ ಸರ್ಜ್ ಮಾಡಿದ್ದು ಯಾವ ವಿಷಯ ಗೊತ್ತಾ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.