Trump: ಗುಜರಾತ್ ಮೂಲದ ಪಟೇಲ್ CIA ನೂತನ ನಿರ್ದೇಶಕ: ಡೊನಾಲ್ಡ್ ಟ್ರಂಪ್ ಒಲವು
ಪಟೇಲ್ ಸುಮಾರು 9 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದರು...
ನಾಗೇಂದ್ರ ತ್ರಾಸಿ, Nov 7, 2024, 11:50 AM IST
2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸುವ ಮೂಲಕ ಎರಡನೇ ಬಾರಿ ಅಧ್ಯಕ್ಷಗಾದಿಗೆ ಏರುವ ಸಿದ್ಧತೆಯಲ್ಲಿದ್ದಾರೆ. ಏತನ್ಮಧ್ಯೆ ಟ್ರಂಪ್ ನಿಕಟವರ್ತಿ, ಭಾರತೀಯ ಮೂಲದ ಕಾಶ್(ಕಶ್ಯಪ್) ಪಟೇಲ್ ಗೆ ಅಮೆರಿಕದ ಉನ್ನತ ಗುಪ್ತಚರ ಸಂಸ್ಥೆ ಸಿಐಎ(CIA)ನ ನಿರ್ದೇಶಕರಾಗಿ ನೇಮಕ ಮಾಡುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
78 ವರ್ಷದ ಡೊನಾಲ್ಡ್ ಟ್ರಂಪ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಅವರನ್ನು ಸೋಲಿಸುವ ಮೂಲಕ 2ನೇ ಬಾರಿ ಅಮೆರಿಕದ ಅಧ್ಯಕ್ಷ ಗಾದಿಗೆ ಏರಿದ್ದಾರೆ.
538 ಸದಸ್ಯಬಲದ ಅಮೆರಿಕ ಸೆನೆಟ್ ನ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ 295 ಎಲೆಕ್ಟ್ರೊರಲ್ ಕಾಲೇಜ್ ಮತಗಳನ್ನು ಪಡೆದಿದ್ದು, ಕಮಲಾ ಹ್ಯಾರಿಸ್ 226 ಎಲೆಕ್ಟ್ರೊರಲ್ ಕಾಲೇಜ್ ಮತ ಗಳಿಸಿದ್ದಾರೆ. ಅಧ್ಯಕ್ಷಗಾದಿಗೆ ಏರಲು 270 ಮತಗಳ ಅಗತ್ಯವಿದೆ.
ನವೆಂಬರ್ 5ರ ಅಂತಿಮ ಹಂತದ ಚುನಾವಣೆಗೂ ಮುನ್ನವೇ ಡೊನಾಲ್ಡ್ ಟ್ರಂಪ್ ಅವರು ತಮ್ಮ ನೂತನ ಆಡಳಿತದ ಸಂಭಾವ್ಯ ಸಚಿವರು, ಅಧಿಕಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಸಿಐಎನ ನೂತನ ನಿರ್ದೇಶಕ ರನ್ನಾಗಿ ಕಾಶ್ ಪಟೇಲ್ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ಇರುವ ಸುದ್ದಿಗಳು ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ.
ಯಾರಿವರು ಕಾಶ್ ಪಟೇಲ್(Kash Patel)?
ಕಾಶ್ ಪಟೇಲ್ ಡೊನಾಲ್ಡ್ ಟ್ರಂಪ್ ನಿಕಟವರ್ತಿ, ಪಟೇಲ್ ಗುಪ್ತಚರ ಮತ್ತು ರಕ್ಷಣಾ ವಿಭಾಗ ಎರಡರಲ್ಲೂ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಪಟೇಲ್ 1986ರಲ್ಲಿ ನ್ಯೂಯಾರ್ಕ್ ನ ಗಾರ್ಡನ್ ಸಿಟಿಯಲ್ಲಿ ಜನಿಸಿದ್ದರು. ಭಾರತದ ಗುಜರಾತಿನ ವಲಸಿಗ ದಂಪತಿಯ ಪುತ್ರ ಕಾಶ್ ಪಟೇಲ್. ಪಟೇಲ್ ಪೋಷಕರು ಪೂರ್ವ ಆಫ್ರಿಕಾದಲ್ಲಿ ಬೆಳೆದಿದ್ದು, ಪಟೇಲ್ ತಂದೆ 1970ರಲ್ಲಿ ಈದಿ ಅಮೀನ್ ಆಡಳಿತ ನಡೆಸುತ್ತಿದ್ದ ವೇಳೆ ಉಗಾಂಡಕ್ಕೆ ಓಡಿ ಹೋಗಿದ್ದು, ನಂತರ ಪೋಷಕರು ಅಮೆರಿಕಕ್ಕೆ ವಲಸೆ ಹೋಗಿದ್ದರು.
ಪೇಸ್ ಯೂನಿರ್ವಸಿಟಿಯಲ್ಲಿ ಕಾನೂನು ಪದವಿ ಪಡೆದ ನಂತರ ಆರಂಭದಲ್ಲಿ ಪಟೇಲ್ ಉದ್ಯೋಗ ಗಿಟ್ಟಿಸಿಕೊಳ್ಳಲು ತುಂಬಾ ಶ್ರಮಪಟ್ಟಿದ್ದರು. ಬಳಿಕ ಸುಮಾರು 9 ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದು, ತದನಂತರ ಅಮೆರಿಕದ ಜಸ್ಟೀಸ್ ಡಿಪಾರ್ಟ್ ಮೆಂಟ್ ಗೆ ಆಯ್ಕೆಯಾಗಿದ್ದರು.
2017ರಲ್ಲಿ ಪಟೇಲ್ ಅವರು ಟ್ರಂಪ್ ಅವರ ನಿಕಟವರ್ತಿಯಾದ ರಿಪಬ್ಲಿಕನ್ ಕಾಂಗ್ರೆಸ್ ನ ಡೆವಿನ್ ನೂನ್ಸ್ ನೇತೃತ್ವದ ಗುಪ್ತಚರ ಇಲಾಖೆಯ ಖಾಯಂಮಾತಿ ಆಯ್ಕೆ ಸಮಿತಿಯ ಸದಸ್ಯರಾಗಿ ನೇಮಕಗೊಂಡಿದ್ದರು.
2016ರಲ್ಲಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾದ ಕೈವಾಡ ಇದ್ದಿರುವ ಆರೋಪ ಬಗ್ಗೆ ಸಮಿತಿಯ ತನಿಖೆಯ ನಂತರ ಪಟೇಲ್ ದೇಶದಲ್ಲಿ ಗಮನ ಸೆಳೆದಿದ್ದರು. ಟ್ರಂಪ್ ಪ್ರಚಾರದ ವೇಳೆ ಎಫ್ ಬಿಐ ಕಣ್ಗಾವಲು ಅಧಿಕಾರಿಯನ್ನು ದುರುಪಯೋಗಪಡಿಸಿಕೊಂಡಿ ಎಂದು ಆರೋಪಿಸಿ ವಿವಾದಾತ್ಮಕ ನ್ಯೂನ್ಸ್ ಮೆಮೊ ಕೊಡುವಲ್ಲಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು.
ಈ ಮೆಮೊ ಅಮೆರಿಕ ನ್ಯಾಯಾಂಗ ಇಲಾಖೆಯ ಕಾರ್ಯವೈಖರಿ ಬಗ್ಗೆ ಭಾರೀ ಟೀಕೆಗೆ ಕಾರಣವಾಗಿತ್ತು. ಇದು ಟ್ರಂಪ್ ಅವರ ಗಮನ ಸೆಳೆಯುವ ಮೂಲಕ ಪಟೇಲ್ ನಿಕಟವರ್ತಿಯಾಗಲು ನೆರವಾಯಿತು ಎಂದು ವರದಿ ವಿವರಿಸಿದೆ.
ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ ನ ಭಯೋತ್ಪಾದಕ ನಿಗ್ರಹ ನಿರ್ದೇಶಕರಾಗಿ ಆಯ್ಕೆಗೊಂಡಿದ್ದ ಸಂದರ್ಭದಲ್ಲಿ ಪಟೇಲ್ ಅವರು, ಐಸಿಸ್, ಅಲ್ ಬಗ್ದಾದಿ ಮತ್ತು ಖಾಸೆಮ್ ಅಲ್ ರಿಮಿಯಂತಹ ನಾಯಕತ್ವವನ್ನು ನಾಮಾವಶೇಷಗೊಳಿಸುವ ಕಾರ್ಯಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.
ಟ್ರಂಪ್ ಪ್ರಥಮ ಬಾರಿಯ ಅಧ್ಯಕ್ಷ ಅವಧಿಯಲ್ಲಿ ಪಟೇಲ್ ಜವಾಬ್ದಾರಿ:
ಡೊನಾಲ್ಡ್ ಟ್ರಂಪ್ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಶ್ ಪಟೇಲ್ ನ್ಯಾಷನಲ್ ಸೆಕ್ಯುರಿಟಿ ಸೇರಿದಂತೆ ಹಲವು ಉನ್ನತ ಮಟ್ಟದ ಹುದ್ದೆಯನ್ನು ನಿರ್ವಹಿಸಿದ್ದರು. ಡೊನಾಲ್ಡ್ ಟ್ರಂಪ್ ಅವರ ಆಡಳಿತಾವಧಿಯಲ್ಲಿ ನ್ಯಾಷನಲ್ ಸೆಕ್ಯುರಿಟಿ ಕೌನ್ಸಿಲ್ (NSC)ನ ಭಯೋತ್ಪಾದಕ ನಿಗ್ರಹ ಸಲಹೆಗಾರರಾಗಿ ಕರ್ತವ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.