Camlin:ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ

ಮರಾಠಿ ಮೂಲದ ದಾಂಡೇಕರ್‌ ತಮ್ಮ ಉದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು

Team Udayavani, Jul 16, 2024, 1:20 PM IST

Camlin:ಜನಪ್ರಿಯ ಕ್ಯಾಮ್ಲಿನ್‌ ಕಂಪಾಸ್‌, ಪೆನ್ಸಿಲ್‌ ಹರಿಕಾರ ಸುಭಾಶ್‌ ದಾಂಡೇಕರ್‌ ಇನ್ನಿಲ್ಲ

ಮುಂಬೈ: ಜನಪ್ರಿಯ ಕ್ಯಾಮ್ಲಿನ್‌ ಪೆನ್ಸಿಲ್‌, ಕಂಪಾಸ್‌ ಬಾಕ್ಸ್‌ ಸಂಸ್ಥಾಪಕ ಸುಭಾಶ್‌ ದಾಂಡೇಕರ್‌ (ದಾದಾಸಾಹೇಬ್‌ ದಿಗಂಬರ್‌ ದಾಂಡೇಕರ್@85) ತೀವ್ರ ಅನಾರೋಗ್ಯದಿಂದ ನಿಧನರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ದಾಂಡೇಕರ್‌ ಅವರು ಪುತ್ರ ಆಶೀಶ್‌ ಮತ್ತು ಪುತ್ರಿ ಅನಘಾ ಅವರನ್ನು ಅಗಲಿದ್ದಾರೆ. ದಾಂಡೇಕರ್‌ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದು, ಸೋಮವಾರ (ಜುಲೈ 15) ಹಿಂದುಜಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.

ಮುಂಬೈನ ದಾದರ್‌ ನಲ್ಲಿರುವ ಶಿವಾಜಿ ಪಾರ್ಕ್‌ ಶ್ಮಶಾನದಲ್ಲಿ ಅಂತ್ಯ ಸಂಸ್ಕಾರ ನೆರವೇರಿದ್ದು, ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಕ್ಯಾಮ್ಲಿನ್‌ ಸಮೂಹ ಸಂಸ್ಥೆಯ ಉದ್ಯೋಗಿಗಳು, ಗಣ್ಯರು ಹಾಜರಿದ್ದರು ಎಂದು ವರದಿ ಹೇಳಿದೆ.

ಸಾವಿರಾರು ಯುವಕರಿಗೆ ಉದ್ಯೋಗ ನೀಡಿದ್ದ ದಾಂಡೇಕರ್‌ ಅವರು, ನೌಕರರಿಗೆ ಯಾವತ್ತೂ ಗೌರವ ಸಿಗಬೇಕೆಂದು ಅವರು ಪ್ರತಿಪಾದಿಸುತ್ತಿದ್ದು, ಮರಾಠಿ ಮೂಲದ ದಾಂಡೇಕರ್‌ ತಮ್ಮ ಉದ್ಯಮದ ಮೂಲಕ ಜಗತ್ತಿನ ಗಮನ ಸೆಳೆದಿದ್ದರು. ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದು ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

1931ರಲ್ಲಿ ಡಿಪಿ ದಾಂಡೇಕರ್‌ ಮತ್ತು ಜಿಪಿ ಡಾಂಡೇಕರ್‌ ಸಹೋದರರು ಕ್ಯಾಮ್ಲಿನ್‌ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಈ ಸ್ಟೇಷನರಿ ಸಂಸ್ಥೆ ಡಾಂಡೇಕರ್‌ & co. ಎಂದೇ ಜನಪ್ರಿಯವಾಗಿತ್ತು. 1946ರಲ್ಲಿ ಕ್ಯಾಮ್ಲಿನ್‌ ಅನ್ನು ಖಾಸಗಿ ಕಂಪನಿ ಎಂದು ಗುರುತಿಸಲಾಗಿದ್ದು, 1998ರಲ್ಲಿ ಅದು ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿತ್ತು. 1980-90ರ ದಶಕದಲ್ಲಿ ಕ್ಯಾಮ್ಲಿನ್‌ ಪೆನ್ಸಿಲ್‌, ಕಂಪಾಸ್‌ ಬಾಕ್ಸ್‌ , ಪೆನ್‌ ಶಾಲಾ ವಿದ್ಯಾರ್ಥಿಗಳ ನೆಚ್ಚಿನ ಬ್ರ್ಯಾಂಡ್‌ ಆಗಿತ್ತು.

ಇದನ್ನೂ ಓದಿ:Max Teaser: I Will Finsh the.. Game.. ‘ಮ್ಯಾಕ್ಸ್‌ʼ ಟೀಸರ್‌ನಲ್ಲಿ ಮಚ್ಚು ಹಿಡಿದ ಕಿಚ್ಚ

ಟಾಪ್ ನ್ಯೂಸ್

Shrana-p

Doctor’s monthly stipend: ಸ್ಥಾನೀಯ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಶೇ. 25 ಏರಿಕೆ

MBPatil

Accused of Corruption: ಎಂ.ಬಿ.ಪಾಟೀಲ್‌ ವಿರುದ್ಧವೂ ಖಾಸಗಿ ದೂರು

Sharana-Patil

Health: ಮಂಕಿಪಾಕ್ಸ್‌ಗೆ ಬೆಂಗಳೂರಲ್ಲಿ 50 ಹಾಸಿಗೆ, 5 ಐಸಿಯು: ಸಚಿವ ಶರಣಪ್ರಕಾಶ ಪಾಟೀಲ್‌

Sanvidhana

Indian Constituiton: ಸಂವಿಧಾನ ಓದು, ಅರಿವು ನಿರಂತರವಾಗಲಿ

1-census

Report; ಸೆಪ್ಟಂಬರ್‌ನಲ್ಲಿ ನಡೆವ ಜನಗಣತಿ ಜತೆಗೇ ಜಾತಿಗಣತಿ?

Mysuru

Mysuru Dasara: ಅರಮನೆ ತಲುಪಿದ ಗಜಪಡೆ : ಭವ್ಯ ಸ್ವಾಗತ

CM-Siddu

Misappropriation Fund: ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SEBI: 5 ವರ್ಷ ಯಾವುದೇ ವಹಿವಾಟು ನಡೆಸದಂತೆ ಅನಿಲ್‌ ಅಂಬಾನಿಗೆ ನಿಷೇಧ, 25 ಕೋಟಿ ದಂಡ

SEBI: 5 ವರ್ಷ ಯಾವುದೇ ವಹಿವಾಟು ನಡೆಸದಂತೆ ಅನಿಲ್‌ ಅಂಬಾನಿಗೆ ನಿಷೇಧ, 25 ಕೋಟಿ ದಂಡ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; Grasim, ಭಾರ್ತಿ ಏರ್‌ ಟೆಲ್‌ ಗೆ ಲಾಭ

Stock Market: ಷೇರುಪೇಟೆ ಸೂಚ್ಯಂಕ, ನಿಫ್ಟಿ ಜಿಗಿತ; Grasim, ಭಾರ್ತಿ ಏರ್‌ ಟೆಲ್‌ ಗೆ ಲಾಭ

ತೈವಾನ್‌ ಕಂಪನಿಯಿಂದ 200 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

ತೈವಾನ್‌ ಕಂಪನಿಯಿಂದ 200 ಕೋಟಿ ಹೂಡಿಕೆ: ಎಂ.ಬಿ.ಪಾಟೀಲ್

Motorcycle sales in India: Hero overtakes Honda as No.1

Honda; ಭಾರತದಲ್ಲಿ ದ್ವಿಚಕ್ರವಾಹನ ಮಾರಾಟ: ಹೀರೋ ಹಿಂದಿಕ್ಕಿ ಹೋಂಡಾ ನಂ.1

1-sdeeqwe

iPhone manufacturer Foxconn ಮುಖ್ಯಸ್ಥನ ಭೇಟಿ ಮಾಡಿದ ರಾಹುಲ್‌ ಗಾಂಧಿ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Shrana-p

Doctor’s monthly stipend: ಸ್ಥಾನೀಯ ವೈದ್ಯ ವಿದ್ಯಾರ್ಥಿಗಳ ಶಿಷ್ಯವೇತನ ಶೇ. 25 ಏರಿಕೆ

1-vajra

Botswana; 2,492 ಕ್ಯಾರಟ್‌ ವಜ್ರ ಪತ್ತೆ: ಬೆಲೆ ಎಷ್ಟು ಗೊತ್ತೇ?

MBPatil

Accused of Corruption: ಎಂ.ಬಿ.ಪಾಟೀಲ್‌ ವಿರುದ್ಧವೂ ಖಾಸಗಿ ದೂರು

Sharana-Patil

Health: ಮಂಕಿಪಾಕ್ಸ್‌ಗೆ ಬೆಂಗಳೂರಲ್ಲಿ 50 ಹಾಸಿಗೆ, 5 ಐಸಿಯು: ಸಚಿವ ಶರಣಪ್ರಕಾಶ ಪಾಟೀಲ್‌

Sanvidhana

Indian Constituiton: ಸಂವಿಧಾನ ಓದು, ಅರಿವು ನಿರಂತರವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.