![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Sep 24, 2021, 3:23 PM IST
ರಾಧಿಕಾ ಕುಂದಾಪುರ
ಕನಸೊಂದು ಮಾಯೆಯಂತೆ. ಸ್ವಾಮಿ ವಿವೇಕಾನಂದರು ಹೇಳುವಂತೆ ನಾವು ಕಾಣುವ ಕನಸು ಹೇಗಿರಬೇಕೆಂದರೆ ನಿದ್ದೆಯಲ್ಲೂ ನಮ್ಮನ್ನು ಎಚ್ಚರಿಸುವಂತಿರಬೇಕು. ಹಾಗೆಂದು ಪ್ರತಿಯೊಬ್ಬರು ತಮ್ಮ ಬಾಲ್ಯದ ವಯಸ್ಸಿನಲ್ಲಿ ಭವಿಷ್ಯತ್ತಿನ ಕನಸು ಕಾಣುತ್ತಲೇ ಇರುತ್ತಾರೆ. ಆದರೆ ಅದು ಕಾಲ ಕಳೆದಂತೆ ಬದಲಾಗುತ್ತಾ ಕೊನೆಗೊಂದು ಬೇರೆ ಆಯಾಮವನ್ನೇ ಪಡೆಯುತ್ತಾ ಜೀವನ ಕಟ್ಟಿಕೊಳ್ಳುವ ಸಲುವಾಗಿ ತಮ್ಮ ಕನಸಿಗೂ ಒಲ್ಲದ ಮಗದೊಂದು ಉದ್ಯೋಗದಲ್ಲಿ ತೊಡಗಿಸಿಕೊಂಡು ಬಿಡುತ್ತಾರೆ.
ಹಾಗೆಂದು ಅವರು ಕಂಡ ಕನಸು ಈಡೇರಲು ಬೇಕಾದ ಪರಿಶ್ರಮ ಪಡುವಲ್ಲಿ ಅವರು ಹಿಂದಡಿ ಇಟ್ಟಿದ್ದೇ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗಲಿಲ್ಲವೆನ್ನಬಹುದು. ಇನ್ನೂ ಕೆಲವರಿಗೇ ತಾನು ಸಾಧಿಸಬೇಕೆನ್ನುವ ಹಂಬಲವಿರುತ್ತದೆ ಆದರೆ ಹೇಗೆ? ಏನು? ಮುಂತಾದವುಗಳಿಗೆ ಉತ್ತರ ಹುಡುಕದೆ ಸೋತು ಬಿಡುತ್ತಾರೆ. ವಯಸ್ಸಿನ ಕಾರಣ ನೀಡಿ ಕನಸಿನ ಬೆನ್ನಟ್ಟಲು ಸಾಧ್ಯವಾಗಿಲ್ಲ ಎನ್ನುವ ಗುಂಪು ಒಂದೆಡೆಯಾದರೆ ವಯಸ್ಸಿಗೂ ಕನಸಿಗೂ ಸಂಬಂಧವಿಲ್ಲ ಎಂಬಂತೆ ಬದುಕುವವರೂ ಇನ್ನೊಂದೆಡೆ ಅಂತವರ ಪಟ್ಟಿಯಲ್ಲಿ ನಾವು ವಾಲಿ ಫಂಕ್ ಅವರನ್ನು ಕಾಣಬಹುದಾಗಿದೆ.
ಈಕೆ ಅಮೇರಿಕಾ ಮೂಲದವಳಾಗಿದ್ದು ಹುಟ್ಟು ಕನಸುಗಾರ್ತಿ ಇವರಾಗಿದ್ದಾರೆ. ಫೆಬ್ರವರಿ 1, 1939ರಂದು ಜನಿಸಿದ್ದು ಬಾಲ್ಯದಿಂದಲೂ ವಿಮಾನ ಏರುವ ಕನಸಿನೊಂದಿಗೆ ತನ್ನ ಬದುಕನ್ನು ಕಳೆಯುತ್ತಿದ್ದರಂತೆ. ತನ್ನ ಪ್ರೌಢ ಶಿಕ್ಷಣದ ಅವಧಿಯಲ್ಲಿ ಆಟೋ ಮೆಕ್ಯಾನಿಕಲ್ ಕೋರ್ಸ್ ಕಲಿಯಲು ಆಸಕ್ತಿ ಈಕೆಗಿತ್ತು ಆದರೆ ಹುಡುಗಿ ಎಂಬ ಕಾರಣಕ್ಕೆ ಅವಳನ್ನು ಅಲ್ಲಿ ನಿರ್ಲಕ್ಷಿಸಿದ್ದು ಹತಾಶೆ ಭಾವನೆ ಈಕೆಯಲ್ಲಿ ಮೂಡಿಸಿತಂತೆ.
ಸ್ಟೀಫನ್ ಕಾಲೇಜಿನಲ್ಲಿ ಏವೀಯೇಷನ್ ಸಂಬಂಧಿತ ಕೋರ್ಸ್‌ಗೆ ಸೇರಿಕೊಂಡು ತನ್ನ 18ನೇ ವಯಸ್ಸಿನಲ್ಲಿ ಪೈಲಟ್ ಆಗಲು ಪರವಾನಿಗೆಯನ್ನು ಸಹ ಪಡೆಯುತ್ತಾಳೆ. ಸ್ಟೀಫನ್ ಕಾಲೇಜಿನಲ್ಲಿ ಅಲ್ಯುಮಿನಿಯಂ ಅಚೀವ್ ಮೆಂಟ್ ಅನ್ನು ಅತೀ ಸಣ್ಣ ವಯಸ್ಸಿಗೆ ಪಡೆದವರೆಂಬ ಹೆಗ್ಗಳಿಕೆಯೂ ಈಕೆಗಿದೆ. 1994ರಲ್ಲಿ ನ್ಯಾಷನಲ್ ಟ್ರಾನ್ಸ್‌ಫೋರ್ಟ್ ಸೇಫ್ ಬೋರ್ಡ್‌ಗೆ ಪ್ರಥಮ ಮಹಿಳಾ ಸೇಫ್ಟಿ ಸೇಫರ್ ಆಗಿ ನೇಮಕವಾಗುತ್ತಾರೆ. ಇಲ್ಲಿ 11ವರ್ಷ ಸೇವೆ ಸಲ್ಲಿಸಿ 450ಕ್ಕೂ ಅಧಿಕ ವಿಮಾನ ಅಪಘಾತ ತಡೆಯಲು ಯಶಸ್ವಿಯಾಗುತ್ತಾರೆ. ತಮ್ಮ 82ನೇ ವಯಸ್ಸಿನಲ್ಲಿ ಅಮೇಜಾನ್ ಸಂಸ್ಥೆಯ ಖಾಸಗಿ ಒಡೆತನದ ಬ್ಲೂ ಒರಿಜಿನ್ ಬಾಹ್ಯಾಕಾಶ ಪ್ರಯಾಣ ಮಾಡಿದ ಅತೀ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆ ಈಕೆಗಿದ್ದು ಈ ಕನಸು ಈಡೇರಿಕೆಗೆ 60ವರ್ಷ ಕಾದಿದ್ದರು. ಶ್ರಮಿಸಿದ್ದರು ಎಂಬುದು ಇಲ್ಲಿ ಸ್ಮರಿಸಲೇ ಬೇಕಾಗಿದೆ. ಹೀಗಾಗಿಯೇ ಕನಸು ಕಾಣುವುದು ಸುಲಭ ಅದರ ಈಡೇರಿಕೆಗಾಗಿ ಪಡುವ ಶ್ರಮ ಕಷ್ಟ. ಕನಸಿನ ಈಡೇರಿಕೆಗೆ ವಯಸ್ಸಿನ ಹಂಗು ತೊರೆದ ಈಕೆಯ ವ್ಯಕ್ತಿತ್ವ ಎಲ್ಲರಿಗೂ ಮಾದರಿ ಎನ್ನಬಹುದು.
ಬಚ್ಚನ್, ಮೋಹನ್‌ಲಾಲ್ ನಂತಹ 20 ಸ್ಟಾರ್ಸ್‌ಗಳಿದ್ದರೂ ಅತ್ಯಂತ ಹೀನಾಯವಾಗಿ ಸೋತ ಸಿನಿಮಾವಿದು..
ಹದಿ ಹರೆಯದ ಪ್ರೀತಿಗಿರಲಿ ಒಂದು ಎಲ್ಲೇ: ರಾಧಾಕೃಷ್ಣರ ನಿಷ್ಕಾಮ ಪ್ರೀತಿಯೇ ಸಾಕ್ಷಿ…
Rajat: 3 ವರ್ಷದ ಹಿಂದೆ ಅನ್ ಸೋಲ್ಡ್.. ಈಗ ಆರ್‌ಸಿಬಿ ನಾಯಕ: ರಜತ್ ಕ್ರಿಕೆಟ್ ಪಯಣವೇ ರೋಚಕ
ಅಳಿವಿನಂಚಿನ ಚಿಪ್ಪು ಹಂದಿ (ಪ್ಯಾಂಗೋಲಿನ್)ಯ ಕಳ್ಳಸಾಗಣೆ, ಬೇಟೆ ಹಿಂದಿದೆ ಬೃಹತ್ ಮಾಫಿಯಾ!
Birds Mystery: ಭಾರತದಲ್ಲೊಂದು ಪಕ್ಷಿಗಳು ಆತ್ಮಹ*ತ್ಯೆ ಮಾಡಿಕೊಳ್ಳುವ ನಿಗೂಢ ಸ್ಥಳ!
You seem to have an Ad Blocker on.
To continue reading, please turn it off or whitelist Udayavani.