XE ಸೋಂಕಿನ ಹೊಸ ರೂಪಾಂತರಿ ಪತ್ತೆ : WHO ಅಧ್ಯಯನದಿಂದ ದೃಢ
Team Udayavani, Apr 4, 2022, 6:50 AM IST
ನವದೆಹಲಿ/ಲಂಡನ್: ಕೊರೊನಾ ರೂಪಾಂತರಿಗಳಾಗಿರುವ ಬಿಎ1 ಮತ್ತು ಬಿಎ2ರ ಸಮ್ಮಿಳನದಿಂದ ಯುನೈಟೆಡ್ ಕಿಂಗ್‌ಡಮ್‌ನಲ್ಲಿ “ಎಕ್ಸ್‌ಇ’ ಎಂಬ ಹೊಸ ರೂಪಾಂತರಿ ಸೃಷ್ಟಿಯಾಗಿದೆ.
ಇದು ಒಮಿಕ್ರಾನ್ ರೂಪಾಂತರಿಗಿಂತ ಹೆಚ್ಚು ಪ್ರಭಾವಶಾಲಿಯಾಗಿದೆ ಮತ್ತು ಹತ್ತು ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಕೆ ನೀಡಿದೆ. ಜನವರಿಯಲ್ಲಿ ನಡೆಸಲಾಗಿದ್ದ 600 ಮಾದರಿಗಳ ಅಧ್ಯಯನದಿಂದ ಹೊಸ ಅಂಶ ದೃಢಪಟ್ಟಿದೆ ಎಂದು WHO ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ. ಇದುವರೆಗೆ ಯುಕೆಯಲ್ಲಿ 632 XE ಕೇಸುಗಳು ದೃಢಪಟ್ಟಿವೆ.
ಲಕ್ಷಣಗಳೇನು?
ಹೊಸ ರೂಪಾಂತರಿಯ ಸ್ಪಷ್ಟ ಲಕ್ಷಣಗಳೇನು ಎನ್ನುವುದು ಇದುವರೆಗೆ ಪತ್ತೆಯಾಗಿಲ್ಲ. ಆದರೆ, ಅದು ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ.
ಪೂರೈಕೆ ರದ್ದು:
ಹೈದರಾಬಾದ್‌ನ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯನ್ನು ವಿಶ್ವಸಂಸ್ಥೆ ಮೂಲಕ ಪೂರೈಸುವುದನ್ನು ಡಬ್ಲೂéಎಚ್‌ಒ ರದ್ದು ಮಾಡಿದೆ. ಇದರಿಂದ ಲಸಿಕೆ ಪೂರೈಕೆ ಮೇಲೆ ವ್ಯತ್ಯಯ ಉಂಟಾಗಲಾರದು ಎಂದು ಸಂಸ್ಥೆ ತಿಳಿಸಿದೆ.
1,096 ಕೇಸು :
ಶನಿವಾರದಿಂದ ಭಾನುವಾರದ ಅವಧಿಯಲ್ಲಿ ದೇಶದಲ್ಲಿ 1,096 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ ಮತ್ತು 18 ಮಂದಿ ಅಸುನೀಗಿದ್ದಾರೆ. ಚೇತರಿಕೆ ಪ್ರಮಾಣ ಶೇ.98.76 ದಾಖಲಾಗಿದೆ.
ಚೀನಾದಲ್ಲಿ ಹೊಸ ರೂಪಾಂತರಿ:
ಜಗತ್ತಿಗೆ ಸೋಂಕು ಪಸರಿಸಿದ ಚೀನಾದಲ್ಲಿ ಭಾನುವಾರ ಒಂದೇ ದಿನ 13 ಸಾವಿರ ಹೊಸ ಕೇಸುಗಳು ದೃಢಪಟ್ಟಿವೆ. ಎರಡು ವರ್ಷಗಳ ಹಿಂದೆ ಸೋಂಕು ದೃಢಪಟ್ಟ ಬಳಿಕದ ಅತ್ಯಂತ ಗರಿಷ್ಠ ಪ್ರಕರಣ ಇದಾಗಿದೆ. ಶಾಂಘೈನಿಂದ 70 ಕಿಮೀ ದೂರದಲ್ಲಿರುವ ನಗರದಲ್ಲಿ ಬಿಎ1.1 ರೂಪಾಂತರಿಯ ಮತ್ತೂಂದು ರೂಪಾಂತರಿ ಪತ್ತೆಯಾಗಿದೆ. ವ್ಯಕ್ತಿಯಲ್ಲಿ ದೃಢಪಟ್ಟಿರುವ ಹೊಸ ಮಾದರಿಯಲ್ಲಿ ಅಲ್ಪ ಪ್ರಮಾಣದ ಸೋಂಕಿನ ಲಕ್ಷಣಗಳು ಕಂಡುಬಂದಿವೆ. ಶನಿವಾರ ಕೂಡ 12 ಸಾವಿರ ಕೇಸುಗಳು ದೃಢಪಟ್ಟಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.