Google ಮ್ಯಾಪ್‌ ಏಕೆ ದಾರಿ ತಪ್ಪುತ್ತದೆ? ಗೂಗಲ್‌ ಮ್ಯಾಪ್‌ ಹೇಗೆ ಹುಟ್ಟಿಕೊಂಡಿತು…

ಗೂಗಲ್‌ ಮ್ಯಾಪ್‌ ಸೇರಿದಂತೆ ಇತರೆ ಆ್ಯಪ್‌ ಗಳಲ್ಲಿನ ನಕ್ಷೆಗಳನ್ನೂ ಪರಿಶೀಲಿಸಿ.

Team Udayavani, Dec 4, 2024, 9:41 AM IST

Map1

ಇತ್ತೀಚೆಗೆ ಉತ್ತರಪ್ರದೇಶದಲ್ಲಿ ಗೂಗಲ್‌ ಮ್ಯಾಪ್‌ ನಂಬಿಕೊಂಡು ಕಾರಿನಲ್ಲಿ ಸಾಗಿದ ಮೂವರು ಅಪೂರ್ಣ ಸೇತುವೆಯಿಂದ ಬಿದ್ದು ಮೃತಪಟ್ಟಿದ್ದರು. ಬಳಿಕ ಈ ಸೇತುವೆಯನ್ನು ಗೂಗಲ್‌ ತನ್ನ ಮ್ಯಾಪ್‌ನಿಂದ ಕೈಬಿಟ್ಟಿತ್ತು. ನಿನ್ನೆಯಷ್ಟೇ ಇಂಥ ಇನ್ನೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಏಕೆ ಗೂಗಲ್‌ ಹೀಗೆ ದಾರಿ ತಪ್ಪಿಸುತ್ತದೆ? ಆಧುನಿಕ ತಂತ್ರಜ್ಞಾನಕ್ಕಿರುವ ಮಿತಿಗಳನ್ನು ಈ ದುರ್ಘ‌ಟನೆ ನಮ್ಮೆದುರು ತೆರೆದಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಗೂಗಲ್‌ ಮ್ಯಾಪ್‌ ಆ್ಯಪ್‌ ಕಾರ್ಯನಿರ್ವಹಿಸುವುದು ಹೇಗೆ, ಆ್ಯಪ್‌ನ ಇತಿಮಿತಿಗಳು ಸೇರಿ ಒಂದಷ್ಟು ಮಾಹಿತಿ ಇಲ್ಲಿದೆ.

ಅದೊಂದಿತ್ತು ಕಾಲ. ಬಸ್ಸು ಹತ್ತಿ ಹೊರಟ ಪ್ರಯಾಣಿಕರಿಗೆ ಪಕ್ಕದಲ್ಲಿ ಕುಳಿತ ಸಹ ಪಯಣಿಗನೋ, ಬಸ್ಸಿನ ನಿರ್ವಾಹಕನೋ ತಾವು ತಲುಪಬೇಕಾದ ಸ್ಥಳದ ಮಾಹಿತಿ ನೀಡುತ್ತಿದ್ದ. ಕಾಲ್ನಡಿಗೆ ಯಲ್ಲೋ ಅಥವಾ ತಮ್ಮದೇ ವಾಹನ ಹತ್ತಿ ಹೊರಟವರಿಗೆ ದಾರಿಯಲ್ಲಿ ಸಿಕ್ಕ ಯಾರೋ ಒಬ್ಬ ಈ ಕುರಿತು ಸಹಾಯ ಮಾಡುತ್ತಿದ್ದ. ಆದರೆ ಇಂದು ಹಾಗಲ್ಲ.

ಗೂಗಲ್‌ ಮ್ಯಾಪ್‌, ಆ್ಯಪಲ್‌ ಮ್ಯಾಪ್‌ ಗಳೆಂಬ ಡಿಜಿಟಲ್‌ ನಕ್ಷೆಗಳು ನಮಗಿಂದು “ಮಾರ್ಗ’ದರ್ಶಕವಾಗಿವೆ. ಜಗತ್ತಿನ ಹಲವಾರು ಹಲವಾರು ಭೌಗೋಳಿಕ ಪ್ರದೇಶಗಳು ಮತ್ತು ವಿವಿಧ ಸ್ಥಳಗಳ ಕುರಿತ ಮಾಹಿತಿ ಮತ್ತು ಅವುಗಳನ್ನು ತಲುಪುವುದು ಹೇಗೆಂದು ಮಾರ್ಗದರ್ಶನ ನೀಡುವ ಈ ಡಿಜಿಟಲ್‌ ಮ್ಯಾಪ್‌ ಗಳು ಪ್ರವಾಸಿಗರ ಪಾಲಿನ ಮಿತ್ರನೆಂದೇ ಹೇಳಬಹುದು.

ಆದಾಗ್ಯೂ ಇತ್ತೀಚೆಗೆ ಗೂಗಲ್‌ ಮ್ಯಾಪ್‌ ತಂತ್ರಾಂಶವನ್ನು ನಂಬಿ ಪ್ರಯಾಣಿಸಿದ ಹಲವರು ದುರಂತಕ್ಕೀಡಾಗುವ ಘಟನೆಗಳು ವರದಿಯಾಗುತ್ತಿವೆ. ಇದಕ್ಕೆ ಕಾರಣಗಳು ಹಲವಿದ್ದರೂ ಇಂತಹ ಘಟನೆಗಳು ಆ್ಯಪ್‌ನ ವಿಶ್ವಾಸಾರ್ಹತೆಗೂ ಧಕ್ಕೆ ತಂದಿದೆ ಎಂಬುದು ಸುಳ್ಳಲ್ಲ. ಗೂಗಲ್‌ ಮ್ಯಾಪ್‌ ಇಂದಿಗೂ ಬಹುಪಕಾರಿಯಾಗಿದ್ದರೂ, ಅದರ ಮಿತಿಗಳನ್ನು ಅರಿತುಕೊಳ್ಳಬೇಕಾದ ಅನಿವಾರ್ಯತೆ ಎಲ್ಲರಿಗಿದೆ.

ಗೂಗಲ್‌ ಮ್ಯಾಪ್‌ ಹೇಗೆ ಹುಟ್ಟಿಕೊಂಡಿತು?
ಡೆನ್ಮಾರ್ಕ್‌ ಮೂಲದ ರಾಸ್‌ಮುಸೇನ್‌ ಸಹೋದರರು 2003ರಲ್ಲಿ ಮೊದಲ ಬಾರಿ ಡಿಜಿಟಲ್‌ ನಕ್ಷೆಯ ಕಂಪ್ಯೂಟರ್‌
ಪ್ರೋಗ್ರಾಮ್‌ ಅನ್ನು ರಚಿಸಿದರು. ಬಳಿಕ 2004ರಲ್ಲಿ ಗೂಗಲ್‌ ಈ ತಂತ್ರಜ್ಞಾನ ಕೊಂಡುಕೊಂಡು ಜಾಲತಾಣಗಳಂತೆ
ಬಳಸಲು ಅನುವಾಗುವಂತೆ ಪರಿವರ್ತಿಸಿತು. 2005ರಲ್ಲಿ ಜಾಗತಿಕವಾಗಿ ಬಿಡುಗಡೆ ಮಾಡಿತು. ಬಳಿಕ ಕಾಲಕಾಲಕ್ಕೆ ಗೂಗಲ್‌ ತನ್ನ ನಕ್ಷೆಗಳಲ್ಲಿ ಬದಲಾವಣೆಗಳನ್ನು ತಂದಿದೆ.

ಗೂಗಲ್‌ಗೆ ನಿಮ್ಮೂರ ದಾರಿ ಹೇಗೆ ತಿಳಿಯುತ್ತೆ?
ಉಪಗ್ರಹದಿಂದ ಪಡೆದ ಮಾಹಿತಿ, ನಿರ್ದಿಷ್ಟ ಸ್ಥಳದ ಬಗ್ಗೆ ಈಗಾಗಲೇ ಇರುವ ಮಾಹಿತಿ, ಹಿಂದಿನ ಟ್ರಾಫಿಕ್‌ ಬಳಕೆ ಮಾರ್ಗ, ಸ್ಥಳೀಯ ಸರಕಾರ ನೀಡುವ ಮಾಹಿತಿ, ಕಾಲಕಾಲಕ್ಕೆ ಬಳಕೆದಾರರು ನೀಡುವ ಮಾಹಿತಿ ಕ್ರೋಡೀಕರಿಸಿ ಮ್ಯಾಪ್‌ ಕೆಲಸ ಮಾಡುತ್ತದೆ. ಮೊದಲಿಗೆ ಗೂಗಲ್‌ ಮ್ಯಾಪ್‌ನಲ್ಲಿ ಪ್ರತೀ ಸ್ಥಳದ ಡಿಜಿಟಲ್‌ ಮ್ಯಾಪ್‌ ಅಪ್‌ಲೋಡ್‌ ಮಾಡ ಲಾಗುತ್ತದೆ.

ಇದಾದ ಬಳಿಕ ಪ್ರತೀ ಕ್ಷಣವೂ ಮಾಹಿತಿ ಸಂಗ್ರಹಿಸುತ್ತಾ ಪ್ರಯಾಣಿಕರು ಸಾಗಲು ಬಯಸಿರುವ ದಾರಿ ತೋರಿಸುತ್ತದೆ.
ಇದಕ್ಕಾಗಿ ಪ್ರತೀಕ್ಷಣವೂ ಬಳಕೆದಾರರ ಮೊಬೈಲ್‌ನ್ನು ಗಮನಿಸುವ ಗೂಗಲ್‌ ಮ್ಯಾಪ್‌, ಮೊಬೈಲ್‌ ಚಲಿಸುತ್ತಿರುವ ವೇಗ ಆಧರಿಸಿ, ಎಲ್ಲಿ ಟ್ರಾಫಿಕ್‌ ಹೇಗಿದೆ ಎಂಬುದನ್ನು ಗುರುತಿಸುತ್ತದೆ.

ದಾರಿ ತಪ್ಪಿಸಿದ ಗೂಗಲ್‌ ಮ್ಯಾಪ್‌ನಿಂದಾದ ಅವಾಂತರಗಳು!

*ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ಗೂಗಲ್‌ ನಂಬಿ ಇನ್ನೂ ಪೂರ್ಣಗೊಳ್ಳದ ಸೇತುವೆ ಮೇಲೆ ಚಲಿಸಿ ಮೂವರು ಸಾವನ್ನಪ್ಪಿದ್ದರು.

*2023ರ ಲ್ಲಿ ಕೇರಳದ ಹಳ್ಳಿ ಯೊಂದರಲ್ಲಿ ನದಿಗೆ ಕಾರು ಉರುಳಿ ಇಬ್ಬರು ಮೃತಪಟ್ಟಿದ್ದರು.

*ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಾಲಯವೊಂದರ ಹೆಸರನ್ನು ಗೂಗಲ್‌ ಮ್ಯಾಪ್‌ನಲ್ಲಿ ಕಿಡಿಗೇಡಿಗಳು ಬದಲಿಸಿದ್ದ ಕಾರಣ
ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗಿತ್ತು.

*ಕೊಡಗಿನ ಒಂದು ಗ್ರಾಮದಲ್ಲಿ, “ಗೂಗಲ್‌ ಮ್ಯಾಪ್‌ ನಂಬಿ ಈ ರಸ್ತೆಯಲ್ಲಿ ಸಾಗಬೇಡಿ’ ಎಂದು ಜನ ಬೋರ್ಡನ್ನೇ ಅಳವಡಿಸಿದ್ದರು!

*2022ರಲ್ಲಿ ಅಮೆರಿಕದ ನಾರ್ತ್‌ ಕ್ಯಾರೊಲಿನಾ ದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ವೊಂದು ಸೇತುವೆಯಿಂದ ಬಿದ್ದು ಮೃತಪಟ್ಟಿತ್ತು.

*2018ರಂದು ಅಮೆರಿಕದ ಟೆಕ್ಸಾಸ್‌ನಲ್ಲಿ ಸ್ಟ್ರೀಟ್‌ ವ್ಯೂ ಚಿತ್ರಗಳನ್ನು ಸೆರೆಹಿಡಿಯಲು ಸಾಗುತ್ತಿದ್ದ ಕಂಪೆನಿಯ ಕಾರೇ ಕೆರೆಗೆ ಬಿದ್ದಿತ್ತು.

ಗೂಗಲ್‌ ಒಂದೇ ಹೊಣೆಗಾರ ಅಲ್ಲ!
ಗೂಗಲ್‌ ಮ್ಯಾಪ್‌, ಇತರೆ ಯಾವುದೇ ನಕ್ಷೆ ಆ್ಯಪ್‌ ಗಳಾಗಿರಲಿ ಎಲ್ಲ ತಂತ್ರಜ್ಞಾನಗಳಿಗೂ ಒಂದು ಮಿತಿ ಇದ್ದೇ ಇರುತ್ತದೆ. ಇಂತಹ ತಪ್ಪುಗಳಲ್ಲಿ ಗೂಗಲ್‌ನ ಪಾತ್ರವಿದ್ದರೂ, ಸಂಪೂರ್ಣವಾಗಿ ಗೂಗಲ್‌ನ್ನು ಮಾತ್ರ ಹೊಣೆ ಮಾಡಲು ಆಗುವುದಿಲ್ಲ. ಗೂಗಲ್‌ ಮ್ಯಾಪ್‌ ತಪ್ಪೆಸಗಲು ಕೆಲವು ಮುಖ್ಯ ಕಾರಣಗಳೆಂದರೆ.

ಬಳಕೆದಾರರ ಮಾಹಿತಿ ಮೇಲೆ ಹೆಚ್ಚು ಅವಲಂಬನೆ:
1)ಗೂಗಲ್‌ ಮ್ಯಾಪ್ಸ್‌ ಆ್ಯಪ್‌ ಅನ್ನು ಕಾಲಕಾಲಕ್ಕೆ ನಿಖರವಾಗಿ, ಮಾಹಿತಿಪೂರ್ಣವಾಗಿ ಇರಿಸಲು ಬಳಕೆದಾರರ ಪಾತ್ರ ಪ್ರಮುಖವಾಗಿದೆ. ಆದಾಗ್ಯೂ ಆ್ಯಪ್‌ ಕೇವಲ ಬಳಕೆದಾರರು ನೀಡುವ ಮಾಹಿತಿಗಳಿಗೆ ಮಾತ್ರ ಅವಲಂಬಿತವಾದಲ್ಲಿ, ಪ್ರಕಟಿತ ಮಾಹಿತಿಗಳಲ್ಲಿ ದೋಷ ಕಂಡುಬರಬಹುದು. ಅಲ್ಲದೇ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಮಾಹಿತಿದಾರರ ಸಂಖ್ಯೆ ಕಡಿಮೆ ಇರುವ ಕಾರಣ, ಆ ಭಾಗದ ಮಾಹಿತಿಗಳು ಅಪೂರ್ಣವಾಗಿರಬಹುದು.

2ಆಡಳಿತಗಳ ಬದ್ಧತೆ ಕೊರತೆ: ಗೂಗಲ್‌ ಮ್ಯಾಪ್‌ ತನ್ನ ಬಳಕೆದಾರರು ಮತ್ತು ಸರಕಾರಿ ವ್ಯವಸ್ಥೆಯ ನಡುವಿನ ಮಧ್ಯಸ್ಥನಷ್ಟೇ. ಒಂದು ರಸ್ತೆಯಿದೆ ಎಂದಾದರೆ, ಅದರ ಸದ್ಯದ ಸ್ಥಿತಿಗತಿಗಳ ಕುರಿತು ಮಾಹಿತಿ ನೀಡುವುದು, ಆಡಳಿತ ವ್ಯವಸ್ಥೆಯ
ಜವಾಬ್ದಾರಿ ಕೂಡ ಹೌದು. ಆದರೆ ಕಾಲಕಾಲಕ್ಕೆ ರಸ್ತೆಗಳು, ಪ್ರವಾಸಿ ಸ್ಥಳಗಳು ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಬದಲಾವಣೆಗಳ ಕುರಿತು ಸರಕಾರ ಅಥವಾ ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡದೇ ಇದ್ದಲ್ಲಿ, ಆ್ಯಪ್‌ನಲ್ಲಿನ ದೋಷ ಹಾಗೆಯೇ ಮುಂದುವರೆಯುತ್ತದೆ.

3ನೈಸರ್ಗಿಕ ಕಾರಣಗಳು: ಯಾವುದೇ ಪ್ರದೇಶದಲ್ಲಿ ನೈಸರ್ಗಿಕ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಸಾಗುವ ಮಾರ್ಗಗಳು ಅಸುರಕ್ಷಿತವಾಗಿದ್ದರೂ, ಗೂಗಲ್‌ ಮ್ಯಾಪ್‌ ಸೂಕ್ತ ಮಾಹಿತಿ ಇಲ್ಲದೆ. ಈ ಕುರಿತು ಬಳಕೆದಾರರಿಗೆ ಎಚ್ಚರಿಸಲು ಮತ್ತು ಪೂರಕ ಮಾಹಿತಿ ನೀಡಲು ವಿಫ‌ಲವಾಗಬಹುದು.

4ಊಹೆಗಳು: ಒಂದು ಪ್ರದೇಶದಲ್ಲಿರುವ ಒಟ್ಟು ಬಳಕೆದಾರರ ಸಂಖ್ಯೆಯ ಆಧಾರದ ಮೇರೆಗೆ ಆ್ಯಪ್‌ ತೋರುವ ಸಂಚಾರದಟ್ಟಣೆಯ ಮಾಹಿತಿ ಕೆಲವೊಮ್ಮೆ ನಿಖರವಾಗಿಲ್ಲದಿರಬಹುದು ಮತ್ತು ಕೇವಲ ಕಿ.ಮೀ. ಲೆಕ್ಕದಲ್ಲಿ ಇದು ಸಮೀಪದ ಹಾದಿ, ಇದು ದೂರದ ಹಾದಿ ಎಂದು ನಿರ್ಧರಿಸುವಾಗ ಗೂಗಲ್‌ ಆ ಹಾದಿಯಲ್ಲಿನ ಅಡಚಣೆಗಳ ಕುರಿತು ತಿಳಿಸಲು ವಿಫ‌ಲವಾಗುವ ಸಾಧ್ಯತೆ ಇರುತ್ತದೆ. ಇಲ್ಲವೇ ಯಾವುದೋ ಖಾಸಗಿ ರಸ್ತೆ ಮೂಲಕ ಸಾಗುವಂತೆ ಪ್ರಯಾಣಿಕರಿಗೆ ನಿರ್ದೇಶಿಸಬಹುದು.

5ಕಾರ್ಯಕ್ಷಮತೆಯ ಕೊರತೆ: ವಿಶ್ವಾದ್ಯಂತ ಅದೆಷ್ಟೋ ಲೋಕಲ್‌ ಗೈಡ್‌ಗಳು ಪ್ರತೀದಿನವೂ ಮ್ಯಾಪ್‌ನಲ್ಲಿನ ಲಕ್ಷಾಂತರ ತಪ್ಪುಗಳನ್ನು ಗೂಗಲ್‌ನ ಗಮನಕ್ಕೆ ತರುತ್ತಲೇ ಇರುತ್ತಾರೆ. ಆದರೆ ಇಷ್ಟೊಂದು ಪ್ರಮಾಣದ ಮಾಹಿತಿಯನ್ನು ಸಂಸ್ಕರಿಸುವಲ್ಲಿ ಗೂಗಲ್‌ ಹಲವು ಸಂದರ್ಭಗಳಲ್ಲಿ ಎಡವುತ್ತದೆ. ಇದರಿಂದಾಗಿ ಗೂಗಲ್‌ ಕೆಲವೊಮ್ಮೆ ತನಗೆ ಲಭಿಸಿದ ಬಳಕೆದಾರರ ವರದಿಗಳನ್ನು
ಖಚಿತಪಡಿಸಿಕೊಳ್ಳದೆಯೇ, ಒಂದೋ ಬದಲಾವಣೆಗಳನ್ನು ಒಪ್ಪುತ್ತದೆ. ಇಲ್ಲವೇ ಸಾರಾಸಗಟವಾಗಿ ತಿರಸ್ಕರಿಸಿಬಿಡುತ್ತದೆ.

ಗೂಗಲ್‌ ಮ್ಯಾಪ್‌ಗೆ ನೀವು ಏನು ಸಹಾಯ ಮಾಡಬಹುದು?

ಗೂಗಲ್‌ ಮ್ಯಾಪ್‌ಗೆ ನೀವೂ ಕೂಡ ಸ್ವಯಂ ಪ್ರೇರಿತರಾಗಿ ಕೊಡುಗೆ ನೀಡಬಹುದಾಗಿದೆ. ಗೂಗಲ್‌ಗೆ ಮಾಹಿತಿ ನೀಡುವ ಬಳಕೆದಾರರನ್ನು ಗೂಗಲ್‌ ಲೋಕಲ್‌ ಗೈಡ್ಸ್‌ಗಳೆಂದು ಕರೆಯ ಲಾಗುವುದಲ್ಲದೇ, ತಾವು ನೀಡಿದ ಕೊಡುಗೆಗಳಿಗಾಗಿ ಗೈಡ್ಸ್‌ಗಳು ಬ್ಯಾಡ್ಜ್ ಗಳನ್ನು ಮತ್ತು ಪಾಯಿಂಟ್ಸ್‌ ಗಳನ್ನು ಪಡೆಯುತ್ತಾರೆ. ಇದಕ್ಕೆ ಸಂಭಾವನೆ ಇರುವುದಿಲ್ಲ. ಪ್ರದೇಶಗಳಿಗೆ ರೇಟಿಂಗ್‌ ನೀಡುವಿಕೆ, ಪ್ರದೇಶ ಸೇರ್ಪಡೆ, ತಪ್ಪು ಮಾರ್ಗಗಳ ಸರಿಪಡಿಸುವಿಕೆ, ನಿಖರ ಸ್ಥಳದ ಪತ್ತೆ ಸೇರಿದಂತೆ ಆ್ಯಪ್‌ಗೆ ವಿವಿಧ ಮಾಹಿತಿಗಳನ್ನು ಗೈಡ್‌ಗಳು ನೀಡಬಹುದಾಗಿರುತ್ತದೆ. ಗ್ರಾಮೀಣ ಭಾಗಗಳಲಿನ ಅಪೂರ್ಣ ಮಾಹಿತಿಗಳನ್ನು ಲೋಕಲ್‌ ಗೈಡ್‌ಗಳು ಪರಿಪೂರ್ಣಗೊಳಿಸಬಹುದಾಗಿದೆ.

ಬಳಕೆದಾರರಿಗೆ ಮುನ್ನೆಚ್ಚರಿಕೆಗಳು
*ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಅಪರಿಚಿತ ಮಾರ್ಗಗಳಲ್ಲಿ ಸಾಗುವಾಗ, ಸ್ಥಳೀಯರ ನೆರವು ಪಡೆಯುವುದು ಉತ್ತಮ.

* ಯಾವುದೇ ಸ್ಥಳದ ಕುರಿತಾಗಿ ಆ್ಯಪ್‌ನಲ್ಲಿ ಇತರೆ ಬಳಕೆದಾರರು ನೀಡಿರುವ ಇತ್ತೀಚಿನ ವಿಮರ್ಶೆಗಳನ್ನು ಗಮನಿಸಿ. ಆ್ಯಪ್‌
ನೀಡುತ್ತಿರುವ ಅಪಾಯದ ಸಂಕೇತಗಳನ್ನು (ಪ್ರವಾಹ, ಭೂಕುಸಿತ, ಭಾರಿ ಮಳೆ ಇತ್ಯಾದಿ) ನಿರ್ಲಕ್ಷಿಸಬೇಡಿ.

*ಡಿಜಿಟಲ್‌ ನಕ್ಷೆಗಳನ್ನು ಒದಗಿಸುವ ಹಲವಾರು ಆ್ಯಪ್‌ ಗಳು ಲಭ್ಯವಿದ್ದು, ಗೂಗಲ್‌ ಮ್ಯಾಪ್‌ ಸೇರಿದಂತೆ ಇತರೆ ಆ್ಯಪ್‌ ಗಳಲ್ಲಿನ ನಕ್ಷೆಗಳನ್ನೂ ಪರಿಶೀಲಿಸಿ.

*ದೋಷಗಳನ್ನು ಸರಿಪಡಿಸಿ. ನೀವು ಪ್ರಯಾಣಿಸಿದ ಹಾದಿಯ ಕುರಿತು ಆ್ಯಪ್‌ ಯಾವುದೇ ದೋಷಯುಕ್ತ ಮಾಹಿತಿ ನೀಡಿದಲ್ಲಿ ಅಥವಾ ಸಾಗುವ ಮಾರ್ಗದಲ್ಲಿ ಯಾವುದೇ ಅಪಘಾತ , ರಸ್ತೆ ದುರಸ್ತಿಯಂತಹ ಸಂಚಾರ ಅಡಚಣೆಗಳಿದ್ದರೆ ಅಂತಹ ಮಾಹಿತಿಗಳನ್ನು ಗೂಗಲ್‌ಗೆ ವರದಿ ಮಾಡಿ.

■ ಅನುರಾಗ್‌ ಗೌಡ .ಬಿ.ಆರ್‌.

ಟಾಪ್ ನ್ಯೂಸ್

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್‌ ಸಿಬಂದಿ ಪರಾರಿ: ದೂರು

ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ

Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್‌ ಬೆಳ್ಳುಳ್ಳಿ ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

DVG-CM

Caste Census: ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ವರದಿ ಮಂಡನೆ: ಸಿಎಂ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

Delhi Assembly Elections: ಬಿಜೆಪಿ ಗೆದ್ದರಷ್ಟೇ ದಿಲ್ಲಿ ನಂ.1 ರಾಜಧಾನಿ: ಪ್ರಧಾನಿ ಮೋದಿ

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

PM ಮೋದಿ ಉದ್ಘಾಟಿಸಿದ್ದೆಲ್ಲ ಆಪ್‌ನ ಜಂಟಿ ಯೋಜನೆಗಳು: ಕೇಜ್ರಿವಾಲ್‌

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.