![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Apr 4, 2020, 6:00 AM IST
ಹಳೆ ಬಾಳು ಸತ್ತಿತ್ತು ಕೊನೆ ಬಾಳು ಸುಟ್ಟಿತ್ತು ಹೊಸಬಾಳು ಹುಟ್ಟಿತ್ತು ದೀಪ ಹಚ್ಚಾ|
ಸಾವಿನ ಒಳಸಂಚು ಮಾಯದ ಕಣ್ಣು ಮಿಂಚು ನಿನ್ನೆದುರು ನಂದಿತು ದೀಪ ಹಚ್ಚಾ||
– ಕವಿ ಎಸ್.ವಿ. ಪರಮೇಶ್ವರ ಭಟ್ಟರು ಹೀಗೆ ಹಾಡಿದ್ದರು.
ಪ್ರಕೃತಿ ಆರಾಧಕ ಮಾನವನಿಗೆ ಸೂರ್ಯನೇ ಕಣ್ಣಿಗೆ ಕಾಣುವ ದೇವರು. ಸೂರ್ಯನ ಕಿರಣ ಗಳಿಗೆ ಔಷಧೀಯ ಗುಣವಿರುವುದು ನಮಗೆಲ್ಲ ಗೊತ್ತಿ ರುವ ಸಂಗತಿಯೇ. ಕಲ್ಲಿನ ಆಯುಧಗಳನ್ನು ಚೂಪು ಮಾಡಿಕೊಳ್ಳುವಾಗ ಅಕಸ್ಮಾತ್ ಆದ ಬೆಂಕಿಯ ಅವಿಷ್ಕಾರದಿಂದಾಗಿ ಮಾನವನ ಅಲೆಮಾರಿ ಬದುಕು ಬದಲಾಯಿತು, ನಾಗರಿಕತೆಯ ಕಿಡಿ ಬೆಳಗಿತು. ಕಾಡಿನಲ್ಲಿ, ರಾತ್ರಿಯ ಕಗ್ಗತ್ತಲೆಯಲ್ಲಿ ಕಾಡು ಪ್ರಾಣಿಗಳನ್ನು ಹತ್ತಿಕ್ಕಲು ದೀಪದ ಜ್ವಾಲೆ ಅವನಿಗೆ ಖಂಡಿತ ಸಹಾಯ ಮಾಡಿದ್ದಿರಬಹುದು.
ಕಾಲಕ್ರಮೇಣ ಅಗ್ನಿಯ ಸಂರಕ್ಷಣೆಗಾಗಿ ಹೆಣ್ಣು ಮನೆ ಯಲ್ಲಿ ನಿಂತು ಗೃಹಿಣಿಯಾದಳು. ಗಂಡು ಬೇಟೆಯಾಡಲು ಕಾಡಿಗೆ ಹೋಗುವುದು ರೂಢಿಯಾಯಿತು. ಅದರ ಪ್ರತೀಕವಾಗಿ ನಾಗರಿಕತೆಯ ತೊಟ್ಟಿಲಾದ ಹಿಂದೂ ಧರ್ಮದಲ್ಲಿ ಸಂಜೆ ದೀಪ ಹಚ್ಚುವ ಪದ್ಧತಿ ರೂಢಿಯಾಗಿದ್ದಿರಬಹುದು.
ದೀಪದ ಜ್ವಾಲೆ ಊಧ್ವಮುಖೀ. ಜ್ಞಾನ ಎತ್ತರಕ್ಕೆ ಪ್ರಜ್ವಲಿಸಲಿ ಎಂಬುದರ ದ್ಯೋತಕ.
ಎಲ್ಲ ಧರ್ಮಗಳಲ್ಲೂ ಇದೆ
ಮನಸ್ಸು, ಶರೀರ, ಬುದ್ಧಿ ಮತ್ತು ನಮ್ಮನ್ನಾಳುವ ಚೈತನ್ಯ ಶಕ್ತಿ- ಈ ನಾಲ್ಕೂ ಸೇರಿ ಆರೋಗ್ಯವಾಗುತ್ತದೆ. ಎಲ್ಲ ಧರ್ಮಗಳೂ ಇವು ಗಳನ್ನು ಉದ್ದೀಪನಗೊಳಿಸುವ ಕ್ರಿಯೆಗಳಿಗೆ ಮಹತ್ವ ನೀಡಿವೆ. ಮೇಣ ತಾನು ಕರಗಿ ಬೆಳಕು ಚೆಲ್ಲುವುದು ತ್ಯಾಗದ, ಪರಿಶ್ರಮದ ನಂಬಿಕೆಯಾಗಿದೆ. ಮೇಣ ದಂತಿರುವ ನಮ್ಮ ಶರೀರ, ಪ್ರಾಪಂಚಿಕವಾಗಿ ತ್ಯಾಗ- ಪರಿಶ್ರಮದಲ್ಲಿ ಬದುಕಲಿ ಎಂಬುದು ಸಂಕೇತ.
ಅಧ್ಯಯನಕ್ಕೆ ಸಿಲುಕದ, ಅಗೋಚರ ಅಧ್ಯಾತ್ಮಿಕ ತೃಪ್ತಿಯನ್ನು ಮನುಷ್ಯನ ಮನಸ್ಸು ದೀಪದ ಬೆಳಕಿನಲ್ಲಿ ಕಂಡುಕೊಳ್ಳುತ್ತದೆ. ಕಾಣದ ದೇವರನ್ನು ದೀಪದ ಬೆಳಕಿನಲ್ಲಿ ಕಾಣುವ ಪ್ರಯತ್ನದಲ್ಲಿ ಮನುಷ್ಯ ಮನಃಶಾಂತಿಯನ್ನು ಕಂಡುಕೊಂಡಿರುವುದೇ ದೀಪ ಬೆಳಗುವುದಕ್ಕಿರುವ ಮಹತ್ವವನ್ನು ಸಾರುತ್ತದೆ.
ಇಂದು ಪ್ರಕೃತಿಯೇ ನಮ್ಮ ಮುಂದೆ ಇರಿಸಿರುವ ಮಹಾ ಸವಾಲನ್ನು ನಾವು ಗೆಲ್ಲಬೇಕಾದರೆ ನಿಸರ್ಗದ ಮಹಾಶಕ್ತಿಗೆ ವಿನಮ್ರವಾಗಿ ತಲೆಬಾಗುವ ಅರಿವು ನಮ್ಮಲ್ಲಿ ಉಂಟಾಗಬೇಕು. ಆ ಅರಿವೇ ಈ ಬೆಳಕು. ನಾನು ಒಂಟಿಯಲ್ಲ. ನನ್ನೊಂದಿಗೆ ಬೆಳಕಿದೆ ಎನ್ನುವ ಪ್ರಜ್ಞೆಯೂ ಇದು ಹೌದು.
- ಡಾ| ಶುಭಾ ಮಧುಸೂಧನ್
ಮನೋಚಿಕಿತ್ಸಾ ವಿಜ್ಞಾನಿ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.