Old Parliament: ನೆಹರು ಐತಿಹಾಸಿಕ ಭಾಷಣ ಯಾವಾಗಲೂ ಸ್ಫೂರ್ತಿ; ಪ್ರಧಾನಿ ಮೋದಿ
ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಈ ದೇಶ ಶಾಶ್ವತವಾಗಿ ಇರಲಿದೆ
Team Udayavani, Sep 18, 2023, 1:27 PM IST
ನವದೆಹಲಿ: ದೇಶದ ಪ್ರಥಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರು ಅವರು ಸಂಸತ್ ನಲ್ಲಿ ಮಾಡಿದ ಐತಿಹಾಸಿಕ “ A tryst with destiny” ಎಂಬ ಭಾಷಣದ ಪ್ರತಿಧ್ವನಿಯು ದೇಶದ ಚುನಾಯಿತ ಜನಪ್ರತಿನಿಧಿಗಳಿಗೆ ಸ್ಫೂರ್ತಿ ನೀಡುವುದು ನಿರಂತರವಾಗಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ಇದನ್ನೂ ಓದಿ:WC 23; ಬಲಿಷ್ಠ ಇಂಗ್ಲೆಂಡ್ ತಂಡ ಪ್ರಕಟ; ಆರ್ಚರ್ ಗಿಲ್ಲ ಜಾಗ; ಯುವ ಆಟಗಾರನಿಗೆ ಒಲಿದ ಅದೃಷ್ಟ
ಅವರು ಸೋಮವಾರ (ಸೆ.18) ಹಳೆಯ ಸಂಸತ್ ಭವನದಲ್ಲಿ ಆರಂಭಗೊಂಡ ಐದು ದಿನಗಳ ವಿಶೇಷ ಅಧಿವೇಶನದಲ್ಲಿ ಮಾತನಾಡಿದರು. ಇದು ಹಳೆಯ ಸಂಸತ್ ಭವನದಲ್ಲಿನ ಕೊನೆಯ ಕಲಾಪವಾಗಿದ್ದು, ಸೆಪ್ಟೆಂಬರ್ 19ರಿಂದ ಹೊಸ ಸಂಸತ್ ಭವನದಲ್ಲಿ ಅಧಿವೇಶನ ಮುಂದುವರಿಯಲಿದೆ.
ಸಂಸತ್ ವಿಶೇಷ ಅಧಿವೇಶನದಲ್ಲಿ ಸಂಸದರನ್ನು ಉದ್ದೇಶಿಸಿ ಮಾತನಾಡಿ, ಸಂಸತ್ ಕಟ್ಟಡದ ಸುಮಾರು ಎಂಟು ದಶಕಗಳ ಇತಿಹಾಸದ ಬಗ್ಗೆ ಮೆಲುಕು ಹಾಕಿದರು. 1947ರ ಆಗಸ್ಟ್ 15ರಂದು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ದೇಶದ ಜನರನ್ನುದ್ದೇಶಿಸಿ, ಮಧ್ಯರಾತ್ರಿಯ ಸಂದರ್ಭದಲ್ಲಿ ಇಡೀ ಜಗತ್ತು ನಿದ್ದೆಗೆ ಶರಣಾಗಿದ್ದಾಗ, ಭಾರತ ಸ್ವಾತಂತ್ರ್ಯದೊಂದಿಗೆ ಹೊಸ ಬದುಕಿಗೆ ತೆರೆದುಕೊಂಡಿದೆ” ಎಂದು ಹೇಳಿದ್ದರು.
ಜವಾಹರಲಾಲ್ ನೆಹರು ಅವರ ಮಧ್ಯರಾತ್ರಿಯ ಆ ಭಾಷಣದ ಪ್ರತಿಧ್ವನಿಯು ನಮಗೆ ಸ್ಫೂರ್ತಿಯಾಗಿದೆ. ಅದೇ ರೀತಿ ಅಟಲ್ ಬಿಹಾರಿ ವಾಜಪೇಯಿ ಅವರು ಈ ಸದನದಲ್ಲಿ ಮಾತನಾಡುತ್ತಾ, ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಆದರೆ ಈ ದೇಶ ಶಾಶ್ವತವಾಗಿ ಇರಲಿದೆ ಎಂದು ತಿಳಿಸಿದ್ದರು.
ತಮ್ಮ ಭಾಷಣದುದ್ದಕ್ಕೂ ಮಾಜಿ ರಾಷ್ಟ್ರಪತಿಗಳು, ಮಾಜಿ ಪ್ರಧಾನಮಂತ್ರಿಗಳನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ ಅವರು, ಪ್ರಥಮ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಸೇರಿದಂತೆ ರಾಮ್ ನಾಥ್ ಕೋವಿಂದ್, ದ್ರೌಪದಿ ಮುರ್ಮು ಅವರಿಂದ ಈ ಸಂಸತ್ ಮಾರ್ಗದರ್ಶನ ಪಡೆದಿದೆ. ಈ ಸಂಸತ್ ನಲ್ಲೇ ಸಂವಿಧಾನ ರಚನೆಯಾಗಿದ್ದು, ಜವಾಹರಲಾಲ್ ನೆಹರು, ಲಾಲ್ ಬಹದ್ದೂರ್ ಶಾಸ್ತ್ರ, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರು ಈ ಸಂಸತ್ ಭವನದ ಮೂಲಕ ದೇಶಕ್ಕೆ ಮಾರ್ಗದರ್ಶನ ಸಿಕ್ಕಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.