ರಕ್ಷಣ ಭೂಮಿ ಖರೀದಿಗೂ ಸಿಗಲಿದೆ ಇನ್ನು ಅನುಮತಿ?
250 ವರ್ಷಗಳ ಬಳಿಕ ರಕ್ಷಣ ಜಮೀನು ನೀತಿಯಲ್ಲಿ ಬದಲಾವಣೆ
Team Udayavani, Jul 20, 2021, 6:50 AM IST
ಹೊಸದಿಲ್ಲಿ: ರಕ್ಷಣ ಭೂಮಿ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ, “ರಕ್ಷಣ ಇಲಾಖೆಯ ಭೂಮಿಗೆ ಸಂಬಂಧಿಸಿದ ನೀತಿ’ ಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಬರೋಬ್ಬರಿ 250 ವರ್ಷಗಳ ಬಳಿಕ ಇಂಥ ವ್ಯಾಪಕ ಬದಲಾವಣೆಗೆ ಸರಕಾರ ಮುಂದಡಿಯಿಟ್ಟಿದೆ.
ಮೆಟ್ರೋ, ರಸ್ತೆ, ರೈಲ್ವೇ, ಫ್ಲೈಓವರ್ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ರಕ್ಷಣ ಭೂಮಿಯ ಅಗತ್ಯತೆಯಿದೆ. ಅಂಥ ಸಂದರ್ಭದಲ್ಲಿ ಆ ಭೂಮಿಯ ಮೌಲ್ಯಕ್ಕೆ ಸಮನಾದ ಭೂಮಿಯನ್ನು ನೀಡಿ ಅಥವಾ ಮಾರುಕಟ್ಟೆ ಮೌಲ್ಯವನ್ನು ಪಾವತಿಸಿ ಆ ಭೂಮಿಯನ್ನು ಖರೀದಿಸಲು ಅವಕಾಶ ಕಲ್ಪಿಸುವ ಉದ್ದೇಶದಿಂದ ಹೊಸ ನೀತಿ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ.
ಏಕೆ ಈ ನೀತಿ?: ಬ್ರಿಟಿಷರ ಕಾಲದಿಂದಲೂ ಚಾಲ್ತಿಯಲ್ಲಿರುವ ನೀತಿಯ ಪ್ರಕಾರ, ಸೇನಾ ಉದ್ದೇಶ ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕೂ ರಕ್ಷಣ ಭೂಮಿಯನ್ನು ಬಳಕೆ ಮಾಡಲು ಅವಕಾಶವಿಲ್ಲ. ಪಶ್ಚಿಮ ಬಂಗಾಲದ ಬಾರಖ್ ಪೋರ್‌ನಲ್ಲಿ 1765ರಲ್ಲಿ ಬ್ರಿಟಿಷರು ಮೊದಲ ಕಂಟೋನ್ಮೆಂಟ್ ಸ್ಥಾಪನೆ ಮಾಡಿದ ಬಳಿಕ ಈ ನೀತಿ ಜಾರಿ ಮಾಡಲಾಗಿತ್ತು. ನಂತರ, 1801ರಲ್ಲಿ “ಯಾವುದೇ ಕಂಟೋನ್ಮೆಂಟ್ ನಲ್ಲಿರುವ ಬಂಗಲೆಗಳನ್ನಾಗಲೀ, ಕ್ವಾರ್ಟರ್ಸ್‌ಗಳನ್ನಾಗಲೀ ಸೇನೆಗೆ ಸಂಬಂಧಿಸದ ವ್ಯಕ್ತಿಗಳು ಖರೀದಿಸುವಂತಿಲ್ಲ’ ಎಂಬ ಆದೇಶವನ್ನು ಈಸ್ಟ್ ಇಂಡಿಯಾ ಕಂಪನಿಯ ಗವರ್ನರ್ ಜನರಲ್-ಇನ್-ಕೌನ್ಸಿಲ್ ಹೊರಡಿಸಿದ್ದರು. ಎರಡನೇ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ಇಂಡಿಯನ್ ಆರ್ಮಿಯು ದೇಶದುದ್ದಕ್ಕೂ ಸೇನೆಗಾಗಿ ಹಲವು ಕ್ಯಾಂಪಿಂಗ್ ಮೈದಾನಗಳು, ಪುರಾತನ ಡಿಪೋಗಳನ್ನು ನಿರ್ಮಿಸಿತ್ತು. ಆದರೆ, ಅದ್ಯಾವುದೂ ಈಗ ಬಳಕೆಯಾಗುತ್ತಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.