ಇಂದು ಪುರುಷರ ಫೈನಲ್; ಬೆರೆಟಿನಿ ಎದುರಾಳಿ : ಹ್ಯಾಟ್ರಿಕ್ ಹಾದಿಯಲ್ಲಿ ಜೊಕೋವಿಕ್
Team Udayavani, Jul 11, 2021, 7:00 AM IST
ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ವಿಂಬಲ್ಡನ್ ಪ್ರಶಸ್ತಿಯ ಹ್ಯಾಟ್ರಿಕ್ ಹಾದಿಯಲ್ಲಿದ್ದಾರೆ. ಸೆಮಿಫೈನಲ್ ಹಣಾಹಣಿಯಲ್ಲಿ ಕೆನಡಾದ ಡೆನ್ನಿಸ್ ಶಪೊವಲೋವ್ ಅವರನ್ನು ಜಿದ್ದಾಜಿದ್ದಿ ಹೋರಾಟದಲ್ಲಿ, ಆದರೆ ಮೂರೇ ಸೆಟ್‌ಗಳಲ್ಲಿ 7-6 (7-3), 7-5, 7-5ರಿಂದ ಮಣಿಸಿದ ಜೊಕೋ ಮತ್ತೂಂದು ವಿಂಬಲ್ಡನ್ ಫೈನಲ್ ಕಾಣುತ್ತಿದ್ದಾರೆ. ರವಿವಾರ “ಆಲ್ ಇಂಗ್ಲೆಂಡ್ ಕ್ಲಬ್’ನಲ್ಲಿ ಇವರ ಎದುರಾಳಿಯಾಗಿ ಕಣಕ್ಕಿಳಿಯುವವರು ಇಟಲಿಯ ಮ್ಯಾಟೊ ಬೆರೆಟಿನಿ.
ಬೆರೆಟಿನಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್. ಇಟಲಿ ಟೆನಿಸಿಗನೋರ್ವ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಏರಿದ ಮೊದಲ ನಿದರ್ಶನವೂ ಇದಾಗಿದೆ. ಇತಿಹಾಸ ನಿರ್ಮಿಸುವ ಕನಸು ಕಾಣುತ್ತಿದ್ದರೂ ತನ್ನ ಮುಂದಿನ ಸವಾಲು ಸುಲಭದ್ದಲ್ಲ ಎಂಬುದು ಸ್ವತಃ ಬೆರೆಟಿನಿಗೇ ತಿಳಿದಿರುವ ಸತ್ಯ. ಟೆನಿಸ್ ಪಂಡಿತರ ಲೆಕ್ಕಾಚಾರದಲ್ಲಿ, 30ನೇ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಹಾಕಿರುವ ಜೊಕೋವಿಕ್ 6ನೇ ವಿಂಬಲ್ಡನ್ ಪ್ರಶಸ್ತಿಯನ್ನೆತ್ತಿ ಹ್ಯಾಟ್ರಿಕ್ ಸಾಧಿಸುವುದು ಬಹುತೇಕ ಖಚಿತ.
ವರ್ಷದ 3ನೇ ಪ್ರಶಸ್ತಿಯತ್ತ
2018ರಲ್ಲಿ ಕೆವಿನ್ ಆ್ಯಂಡರ್ಸನ್ ಅವರನ್ನು ಮಣಿಸಿ, 2019ರಲ್ಲಿ ರೋಜರ್ ಫೆಡರರ್ ಅವರನ್ನು ಹಿಮ್ಮೆಟ್ಟಿಸುವ ಮೂಲಕ ಜೊಕೋವಿಕ್ ವಿಂಬಲ್ಡನ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದರು. ಕೋವಿಡ್ ಕಾರಣದಿಂದ 2020ರಲ್ಲಿ ವಿಂಬಲ್ಡನ್ ನಡೆದಿರಲಿಲ್ಲ.
ಈ ವರ್ಷದ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಲಿಕ್ಕೂ ಜೊಕೋಗೆ ಇದು ಸುವರ್ಣಾವಕಾಶ. ಇದಕ್ಕೂ ಮುನ್ನ ಪ್ರಸಕ್ತ ಋತುವಿನ ಆಸ್ಟ್ರೇಲಿಯನ್ ಓಪನ್ ಮತ್ತು ಫ್ರೆಂಚ್ ಓಪನ್ ಕೂಟಗಳಲ್ಲೂ ಜೊಕೋ ಚಾಂಪಿಯನ್ ಆಗಿ ಮೂಡಿಬಂದಿದ್ದರು.
ರವಿವಾರ ಚಾಂಪಿಯನ್ ಎನಿಸಿದರೆ ರೋಜರ್ ಫೆಡರರ್ ಮತ್ತು ರಫೆಲ್ ನಡಾಲ್ ಅವರ 20 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳ ದಾಖಲೆಯನ್ನು ಜೊಕೋವಿಕ್ ಸರಿದೂಗಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಅರ್ಹರಿಗಷ್ಟೇ ಬಿಪಿಎಲ್ ಕಾರ್ಡ್: ಸಿಎಂ ಸಿದ್ದರಾಮಯ್ಯ
Karnataka Govt: ವಕ್ಫ್ ವಿರುದ್ಧ ಬೀದಿಗಿಳಿದ ಕಮಲ ಪಡೆ; ಉಡುಪಿ ಸೇರಿ ಹಲವೆಡೆ ಪ್ರತಿಭಟನೆ
Karnataka: ದೆಹಲಿ ಮಾರುಕಟ್ಟೆಗೆ ಲಗ್ಗೆ ಇಟ್ಟ ಕೆಎಂಎಫ್
Eden Gardens; ‘ಬಿ’ ಬ್ಲಾಕ್ಗೆ ಜೂಲನ್ ಗೋಸ್ವಾಮಿ ಹೆಸರಿಡಲು ನಿರ್ಧಾರ
Karnataka Lokayukta: ನಾಲ್ವರಿಗೆ ಲೋಕಾ ಶಾಕ್: 27 ಕೋಟಿ ರೂ. ಆಸ್ತಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.