Modi-Adani Ek Hai… ವಿಶೇಷ ಜಾಕೆಟ್ ಧರಿಸಿ ಸಂಸತ್ ಹೊರಗೆ ವಿಪಕ್ಷ ಪ್ರತಿಭಟನೆ
Team Udayavani, Dec 5, 2024, 1:12 PM IST
ನವದೆಹಲಿ:ಉದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಸಂಸತ್ ಕಲಾಪ ವಿಸರ್ಜಿಸಿ ಪ್ರತಿಭಟನೆ ನಡೆಸುತ್ತಿರುವ ರಾಹುಲ್ ನೇತೃತ್ವದ ವಿಪಕ್ಷ ಇಂದು ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದೆ.
ಮೋದಿ ಅದಾನಿ ಏಕ್ ಹೈ… ಅದಾನಿ ಸೇಫ್ ಹೈ… ಎಂಬ ಘೋಷ ವಾಕ್ಯದ ಟಿ ಶರ್ಟ್ ಧರಿಸಿ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಅದಾನಿ ವಿಚಾರದಲ್ಲಿ ಮೋದಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಯಾಕೆಂದರೆ ಇಬ್ಬರೂ ಒಂದೇ, ಅದಾನಿ ವಿರುದ್ಧ ತನಿಖೆಗೆ ಆದೇಶಿಸಿದರೆ ಎಲ್ಲಿ ತಾನೂ ತನಿಖೆ ಎದುರಿಸಬೇಕು ಎನ್ನುವ ಭಯ ಅವರಿಗಿದೆ ಹಾಗಾಗಿ ತನಿಖೆಗೆ ಆದೇಶ ನೀಡುವುದಿಲ್ಲ ಅವರಿಬ್ಬರೂ ಒಂದೇ ಎಂದು ಗುಡುಗಿದರು.
ಸಂಸತ್ ಭವನದ ಎದುರು ಮೋದಿ ಅದಾನಿ ವಿರುದ್ದ ಘೋಷಣೆ ಕೂಗಿ, ಅದಾನಿ ಪ್ರಕರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಹೋದರಿ ಪ್ರಿಯಾಂಕಾ ಗಾಂಧಿ ಸೇರಿ ಹಲವು ವಿಪಕ್ಷ ಸದಸ್ಯರು ಜೊತೆಗಿದ್ದರು.
मजबूत INDIA गठबंधन अडानी महाघोटाले पर चर्चा चाहता है, लेकिन मोदी सरकार लगातार इससे भाग रही है।
आज संसद परिसर में INDIA के नेताओं ने इस मुद्दे पर प्रदर्शन किया, जहां सभी की जैकेट पर लिखा था—
Modi Adani Ek Hai 🤝
Adani Safe Hai pic.twitter.com/u2UARDIVNK— Adv. Vijay Singh (@VijaySingh_inc) December 5, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.