ಕಂದಮ್ಮನನ್ನು ಮುದ್ದಾಡುವ ಮೊದಲೇ ತಾಯಿ ಸಾವು
Team Udayavani, Apr 18, 2020, 8:15 PM IST
ಲಂಡನ್: ಕೋವಿಡ್-19 ಮಹಾಮಾರಿಗೆ ವಿಶ್ವವೇ ಬೆಚ್ಚಿಬೀಳುತ್ತಿದೆ. ಈ ಮಧ್ಯೆ ಹೆರಿಗೆಯಾದ 8 ದಿನಗಳ ಬಳಿಕ ಕೋವಿಡ್-19ಗೆ ಮಹಿಳೆ ಬಲಿಯಾಗಿರುವ ಘಟನೆ ಲಂಡನ್‌ನಲ್ಲಿ ನಡೆದಿದೆ.
ಮೊದಲೇ ಮಧುಮೇಹ ಕಾಯಿಲೆ ಇದ್ದ ಸಲೀನಾ ಶಾ (37)ರಲ್ಲಿ ಸೋಂಕು ಪತ್ತೆಯಾಗಿದ್ದು, ಎಪ್ರಿಲ್ 4ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಆದರೆ ದುರಾದೃಷ್ಟವಶಾತ್ 8 ದಿನಗಳ ಬಳಿಕ ಸಲೀನಾ ಅಸುನೀಗಿದ್ದಾರೆ.
ನಿನ್ನನ್ನು ನೋಡಲು ಕಾದಿರುವೆ
ಮಾರ್ಚ್ 18 ರಂದು ಸಲೀನಾ ತನ್ನ ಮಗುವಿನ ಸ್ಕಾÂನ್ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ನನ್ನ ನಿನ್ನ ಭೇಟಿಗೆ ಕೇವಲ 6 ವಾರಗಳು ಬಾಕಿ ಇವೆ. ನಾನು ನಿನ್ನನ್ನು ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದರು. ಆದರೆ ಇದೀಗ ಮಗುವನ್ನು ಕಣ್ತುಂಬ ನೋಡದೇ, ಎತ್ತಿ ಮುದ್ದಾಡುವ ಮುನ್ನವೇ ತಾಯಿ ಸಾವನ್ನಪ್ಪಿದ್ದು, ಶಾ ಹಂಚಿಕೊಂಡಿದ್ದ ಪೋಸ್ಟ್‌ಗೆ ಸಂತಾಪ ಹರಿದು ಬರುತ್ತಿದೆ.
ಈ ಕುರಿತಂತೆ ಸಲೀನಾಳ ಸೋದರ ಸಂಬಂಧಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ “ಆಕೆ ದಿಟ್ಟತನದ ಪ್ರತೀಕ, ಎಂತಹ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸ ಬಲ್ಲ ಶಕ್ತಿಯುತ ತಾಯಿ ‘ ಎಂದು ಬರೆದುಕೊಂಡಿದ್ದಾರೆ. ಮಗು ಸೋಂಕು ಮುಕ್ತವಾಗಿರುವುದು ಕೊಂಚ ನಿರಾಳತೆಯನ್ನು ಮೂಡಿಸಿದೆ. ಆದರೆ ಗರ್ಭಿಣಿ ಮಹಿಳೆಯರ ರಕ್ಷಣೆಗೆ ಸರಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವತ್ತ ಹೆಚ್ಚಿನ ಗಮನ ನೀಡಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.