Women Employees: ತಮಿಳುನಾಡಲ್ಲಿ 700 ಕೋಟಿಯ ಚೀನ ಮಾದರಿ ಹಾಸ್ಟೆಲ್!
ಫಾಕ್ಸ್ ಕಾನ್ ಮಹಿಳಾ ಉದ್ಯೋಗಿಗಳಿಗೆ ನಿರ್ಮಾಣ
Team Udayavani, Aug 19, 2024, 12:54 AM IST
ಚೆನ್ನೈ: ಆ್ಯಪಲ್ ಫೋನ್ ಉತ್ಪಾದಕ ಕಂಪೆನಿ ಫಾಕ್ಸ್ಕಾನ್ನ ಮಹಿಳಾ ಉದ್ಯೋಗಿಗಳಿಗಾಗಿ 20 ಎಕ್ರೆ ಪ್ರದೇಶ ದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಭಾರತದಲ್ಲಿ ಮೊದಲ ಬಾರಿಗೆ ಇಂಥ ರಚನೆ ಮಾಡಲಾಗಿದ್ದು, 705.05 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಫಾಕ್ಸ್ಕಾನ್ನ ಉದ್ಯೋಗಿಗಳಿಗೆ ಚೀನದಲ್ಲಿ ನಿರ್ಮಿಸಲಾಗಿರುವ ಹಾಸ್ಟೆಲ್ ರೀತಿಯೇ ಇದನ್ನು ನಿರ್ಮಾಣ ಮಾಡಲಾಗಿದೆ. ವಿಶ್ವದ ಬಹುತೇಕ ಭಾಗಗಳಿಗೆ ಐಫೋನ್ ರಫ್ತು ಮಾಡುವ ಫಾಕ್ಸ್ಕಾನ್ನ ಚೆನ್ನೈ ಘಟಕದಲ್ಲಿ 41,000 ಉದ್ಯೋಗಿಗಳಿದ್ದು, ಅದರಲ್ಲಿ 35,000 ಮಂದಿ ಮಹಿಳೆಯರಾಗಿದ್ದಾರೆ. ಈ ಹಾಸ್ಟೆಲ್ನಲ್ಲಿ ಸುಮಾರು 18,720 ಮಂದಿ ಇರಬಹುದು ಎನ್ನಲಾಗಿದೆ.
ಟ್ರಿಲಿಯನ್ ಡಾಲರ್ ಎಕಾನಮಿಗೆ ಪೂರಕ: ಹಾಸ್ಟೆಲ್ ಉದ್ಘಾಟಿಸಿದ ಬಳಿಕ ಮಾತನಾಡಿದ ಸಿಎಂ ಎಂ.ಕೆ.ಸ್ಟಾಲಿನ್, ಫಾಕ್ಸ್ಕಾನ್ ತಮಿಳುನಾಡಿನ ಅವಿಭಾಜ್ಯ ಅಂಗ. ತೈವಾನ್ನ ಕಂಪೆನಿ ರಾಜ್ಯದಲ್ಲೇ ಉಳಿದು ಮತ್ತಷ್ಟು ಹೂಡಿಕೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಇಂತಹ ಹೂಡಿಕೆಗಳು 2030ರ ವೇಳೆಗೆ ತಮಿಳುನಾಡು ಟ್ರಿಲಿಯನ್ ಡಾಲರ್ ಎಕಾನಮಿ (83 ಲಕ್ಷ ಕೋಟಿ ರೂ.) ತಲುಪಲು ನೆರವಾಗಲಿದೆ ಎಂದು ಅವರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bihar;ಜಮೀನು ವಿವಾದ: 21 ದಲಿತರ ಮನೆಗಳಿಗೆ ಬೆಂಕಿ
PM ಮೋದಿಗೆ ಕಾಂಗ್ರೆಸಿಗರಿಂದ ಬೈಗುಳ: ಖರ್ಗೆ ಪತ್ರಕ್ಕೆ ನಡ್ಡಾ ತೀಕ್ಷ್ಣ ಪ್ರತ್ಯುತ್ತರ
Congress-NC ಮೈತ್ರಿಗೆ ಪಾಕ್ ಬೆಂಬಲ, 370ನೇ ವಿಧಿ ಮರುಸ್ಥಾಪನೆ ಅಸಾಧ್ಯ: ಪ್ರಧಾನಿ: ಮೋದಿ
PM ಮೋದಿ ಅಮೆರಿಕ ಪ್ರವಾಸ; ಮಣಿಪುರಕ್ಕೆ ಹೋಗುವುದಿಲ್ಲವೇಕೆ?:ಕಾಂಗ್ರೆಸ್ ಪ್ರಶ್ನೆ
Tirupati ತಿರುಪತಿ ಲಡ್ದು ಪ್ರಸಾದದಲ್ಲಿ ಬೀಫ್ ಫ್ಯಾಟ್!:ಲ್ಯಾಬ್ ವರದಿಯಲ್ಲಿ ದೃಢ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.